JJM stalled for three years 
ರಾಜ್ಯ

3 ವರ್ಷದಿಂದ ಜೆಜೆಎಂ ನನೆಗುದಿಗೆ

ಕೋಲಾರ ಡೆಸ್ಕ್

ಗ್ರಾಪಂ ವ್ಯಾಪ್ತಿಯ 13 ಗ್ರಾಮಗಳಲ್ಲಿ ಜೆಜೆಎಂ ಕಾಮಗಾರಿ ಪೂರ್ಣವಾಗಿಲ್ಲ. ಗ್ರಾಪಂ ಕೇಂದ್ರವಾಗಿರುವ ಮದ್ದೇರಿ, ಎಂ.ಚೋಳಘಟ್ಟ ಗ್ರಾಮಗಳಿಗೆ ಇತ್ತೀಚೆಗೆ ಜೆಜೆಎಂ ಕಾಮಗಾರಿ ಪ್ರಾರಂಭ ಮಾಡಿದ್ದು, ಗ್ರಾಮಗಳ ಮುಖ್ಯ ಬೀದಿಗಳಲ್ಲಿ ಪೈಪ್​ ಲೈನ್​ ಬಾಣಿ ಅಗೆದಿದ್ದು, ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಲು ಕಾರು, ಆಂಬುಲೆನ್ಸ್​ ಗ್ರಾಮದ ಒಳಗೆ ಬರದಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕಳಪೆ ಕಾಮಗಾರಿ ವೀಸಿ ಲೋಪಗಳಾಗದಂತೆ ಕಾಮಗಾರಿ ವೇಗ ಹೆಚ್ಚಿಸಬೇಕಿದೆ.

— ದೇವರಾಜ್​ ಎಂ.ಚೋಳಘಟ್ಟ ಗ್ರಾಮಸ್ಥ

ಜೆಜೆಎಂ ಯೋಜನೆಯಡಿ ಕೊಳವೆ ಬಾವಿ ಕೊರೆಯಲಾಗಿದ್ದು, ಕೆಲವು ಗ್ರಾಮಗಳಲ್ಲಿ ನೀರು ಸಿಗದಿದ್ದರೂ ಮೋಟಾರ್​ ಪಂಪ್​ ಅಳವಡಿಸಿ ಗ್ರಾಪಂ ಓವರ್​ ಹೆಡ್​ ಟ್ಯಾಂಕ್​ನಿಂದ ಜೆಜೆಎಂ ನಲ್ಲಿಗಳಲ್ಲಿ ನೀರು ಹರಿಸಿ ಕಾಮಗಾರಿಗಳಿಗೆ ಮುಗಿಸಿದ್ದಾರೆ. ಇನ್ನೂ ಕೆಲ ಗ್ರಾಮಗಳಲ್ಲಿ ಓವರ್​ ಹೆಡ್​ ಟ್ಯಾಂಕ್​ ನಿಮಾರ್ಣದ ಕಾಮಗಾರಿ ಪೂರ್ಣವಾಗದೆ ಹಳೇ ಓವರ್​ ಹೆಡ್​ ಟ್ಯಾಂಕ್​ನಿಂದಲೇ ನೀರು ಸರಬರಾಜು ಮಾಡಲಾಗುತ್ತಿದೆ. ಮದ್ದೇರಿ ಗ್ರಾಪಂ ವ್ಯಾಪ್ತಿಯ ಯಾವುದೇ ಗ್ರಾಮಗಳಲ್ಲಿ ಗುಣಮಟ್ಟವೂ ಸಪರ್ಮಕವಾಗಿ ಆಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಪೂರ್ಣ, ಕಳಪೆ ಕಾಮಗಾರಿ ಕುರಿತು ಗುತ್ತಿಗೆದಾರರ ಬಳಿ ಸಾರ್ವಜನಿಕರು ಪ್ರಶ್ನೆ ಮಾಡಿದಾಗ ಗುತ್ತಿಗೆದಾರರು ಇನ್ನು ಕೆಲಸ ಬಾಕಿ ಇದ್ದು, ಮೇನ್​ಪೈಪ್​ನಲ್ಲಿ ನೀರು ಸೋರಿಕೆ ಪರೀಕ್ಷೆಗಾಗಿ ನೀರು ಹರಿಸುತ್ತಿದ್ದೇವೆ. ಕಾಮಗಾರಿಯ ಕೊನೆಯಲ್ಲಿ ಗ್ರಾಮಗಳಲ್ಲಿ ಅಗೆದಿರುವ ಪೈಪ್​ಲೈನ್​ ಗುಣಿ ಮುಚ್ಚಿ ಸಿಮೆಂಟ್​ ಹಾಕಲಾಗುವುದು ಎಂದು ಉಡಾೆ ಉತ್ತರ ನೀಡುವ ಮೂಲಕ ಜಾರಿಕೊಳ್ಳುತ್ತಿದ್ದಾರೆ. ಈ ಕುರಿತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಗಮನಕ್ಕಿದ್ದರೂ ಕ್ರಮ ವಹಿಸುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.