ನೆಟ್‌ವರ್ಕ್ ಸಮಸ್ಯೆಯಿಂದ ಯಕ್ತಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮವೊಂದರ ಸಮುದಾಯ ಭವನದ ಎದುರು ಗ್ರಾಮ ವಿದ್ಯುತ್ ಪ್ರತಿನಿಽ ಗ್ರಾಹಕರ ದಾಖಲಾತಿ ಅಪಲೋಡ್ ಮಾಡುತ್ತಿರುವುದು.
- ಒತ್ತಡದಲ್ಲಿ ಕೆಲಸ ಮಾಡುತ್ತಿರುವ ಗ್ರಾಮ ವಿದ್ಯುತ್ ಪ್ರತಿನಿಽಗಳು
- ಗುರಿ ತಲುಪಲು ಕಷ್ಟ
ಕೆಂಭಾವಿ: ಸರ್ಕಾರ ನೂತನವಾಗಿ ಪ್ರಕಟಿಸಿರುವ ಗೃಹಜ್ಯೋತಿ ಯೋಜನೆಯ ನೈಜ -Àಲಾನುಭವಿಗಳ ಪಟ್ಟಿ ಸಿದ್ಧಪಡಿಸಿಲು ಗ್ರಾಮಾಂತರ ಪ್ರದೇಶಗಳಲ್ಲಿ ಗ್ರಾಮ ವಿದ್ಯುತ್ ಪ್ರತಿನಿಽಗಳು (ಜಿವಿಪಿ) ಹಲವು ಸಮಸ್ಯೆ ಎದುರಿಸುತ್ತಿದ್ದು ಇದರಿಂದ ಗುರಿ ತಲುಪಲು ಕಷ್ಟಸಾಧ್ಯವಾಗುತ್ತಿದೆ ಎಂಬ ಮಾತು ಜಿವಿಪಿಗಳಿಂದ ಕೇಳಿ ಬರುತ್ತಿದೆ.
ಮುಖ್ಯವಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಮೊಬೈಲ್ ನೆಟ್‌ವರ್ಕ್ ಸಮಸ್ಯೆಯಿಂದ ಜಿವಿಪಿಗಳು ಹೈರಾಣಾಗುತ್ತಿದ್ದು ಒಬ್ಬ ಗ್ರಾಹಕನ ವಿದ್ಯುತ್ ಮೀಟರ್‌ನ ಸಂಪೂರ್ಣ ವಿವರ ಪಡೆಯಲು ೨೦ರಿಂದ ೩೦ ನಿಮಿಷ ಬೇಕಾಗುತ್ತಿದೆ. ಆದರೆ ಸರಿಯಾದ ನೆಟ್‌ವರ್ಕ್ ಇಲ್ಲದೆ ಅದು ಒಂದು ಗಂಟೆಗೂ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದು ಇದು ಜಿವಿಪಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಕೆಂಭಾವಿ ವಲಯದಲ್ಲಿ ೯ ಗ್ರಾಮ ಪಂಚಾಯಿತಿಗಳು ೫೩ ಗ್ರಾಮಗಳು ಬರುತ್ತಿದ್ದು ೧೦ ಮಂದಿ ಜಿವಿಪಿಗಳು ಈ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುಖ್ಯವಾಗಿ ಯಕ್ತಾಪುರ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ೧೩ ಹಳ್ಳಿಗಳಲ್ಲಿ ಈ ಸರ್ವರ್ ಸಮಸ್ಯೆ ಇದ್ದು ಕೆಲವು ಗ್ರಾಮಗಳಲ್ಲಿ ಹೊರತುಪಡಿಸಿ ಇನ್ನುಳಿದ ಹಳ್ಳಿಗಳಲ್ಲಿ ತಾಂತ್ರಿಕ ಸಮಸ್ಯೆ ಇದೆ. ಹೀಗಾಗಿ ಅನಿವಾರ್ಯವಾಗಿ ಊರಿನ ಶಾಲೆಯ ಆವರಣ, ಸಮುದಾಯ ಭವನ, ಎತ್ತರದ ಪ್ರದೇಶ ಸೇರಿ ನೆಟ್‌ವರ್ಕ್ ಬರುವ ಸ್ಥಳದಲ್ಲಿ ಜಿವಿಪಿಗಳು ಗ್ರಾಹಕರ ಮನವೊಲಿಸಿ ಅಲ್ಲಿಗೆ ಕರೆದು ತಮ್ಮ ಕರ್ತವ್ಯ ನಿರ್ವಹಿಸುವಂತಾಗಿದೆ.
ಅಽಕಾರಿಗಳ ಒತ್ತಡ: ಜಿವಿಪಿಗಳಿಗೆ ಸರ್ವರ್ ಸಮಸ್ಯೆ ಒಂದೆಡೆಯಾದರೆ ಇತ್ತ ಅಽಕಾರಿಗಳ ಒತ್ತಡ ಜಿವಿಪಿಗಳಿಗೆ ಬೇಸರ ಮೂಡಿಸಿದೆ. ದಿನಕ್ಕೆ ಕನಿಷ್ಠ ೧೦ರಿಂದ ೧೫ ಗ್ರಾಹಕರ ಮೀಟರ್ ದಾಖಲಾತಿ ಅಪ್‌ಲೋಡ್ ಮಾಡುವಂತೆ ಜಿವಿಗಳ ಮೇಲೆ ಒತ್ತಡ ಇದ್ದು ಇದು ಸರ್ವರ್ ಸಮಸ್ಯೆಯಿಂದ ಸಾಧ್ಯವಾಗದೆ ಜಿವಿಪಿಗಳು ಒತ್ತಡದಲ್ಲಿ ಸಿಲುಕಿದ್ದಾರೆ. ಜೆಸ್ಕಾಂ ಇಲಾಖೆ ಗ್ರಾಮಾಂತರ ಪ್ರದೇಶಗಳಲ್ಲಿ ಇಂಥ ಸಮಸ್ಯೆಗೆ ಯಾವ ಮರ್ಗೋಪಾಯ ಕಂಡು ಹಿಡಿಯಲಿದೆ ಎಂಬುದನ್ನು ಕಾದು ನೋಡಬೇಕಿದೆ.