ಐಪಿಎಲ್ 2026 ಪ್ಲೇ-ಆಫ್ ರೇಸ್: ಇತಿಹಾಸದಲ್ಲೇ ದಾಖಲೆಯ ವೀಕ್ಷಣೆಗಳಿಸಿದ ಜಿಯೋಸ್ಟಾರ್ 
ರಾಜ್ಯ

ಐಪಿಎಲ್ 2026 ಪ್ಲೇ-ಆಫ್ ರೇಸ್: ಇತಿಹಾಸದಲ್ಲೇ ದಾಖಲೆಯ ವೀಕ್ಷಣೆಗಳಿಸಿದ ಜಿಯೋಸ್ಟಾರ್!

ಪ್ರಮುಖ ಮುಖ್ಯಾಂಶಗಳು

  • 1.1 ಬಿಲಿಯನ್ ಮುಟ್ಟಿದ ಒಟ್ಟಾರೆ ವೀಕ್ಷಕರ ಸಂಖ್ಯೆ: ಪ್ರಾದೇಶಿಕ ಭಾಷೆಯ ವೀಕ್ಷಣಾ ಸಮಯ ಶೇ. 42 ರಷ್ಟು ಭಾರಿ ಏರಿಕೆ
  • ಒಟ್ಟಾರೆ ವೀಕ್ಷಕರ ರೀಚ್ 1.1 ಬಿಲಿಯನ್ ಮುಟ್ಟಿದೆ
  • ಕಳೆದ ಸೀಸನ್‌ಗೆ ಹೋಲಿಸಿದರೆ ಡಿಜಿಟಲ್ ರೀಚ್ ಶೇ. 15 ರಷ್ಟು ಮತ್ತು ಸಿಟಿವಿ ರೀಚ್ ಶೇ. 25 ರಷ್ಟು ಹೆಚ್ಚಳ
ಮುಂಬೈ: ಟಾಟಾ ಐಪಿಎಲ್ 2026ರ ಟೂರ್ನಿಯು ಪ್ಲೇ ಆಫ್ ಹಂತಕ್ಕೆ ತಲುಪುತ್ತಿದ್ದು, ತಂಡಗಳ ನಡುವಿನ ಜಿದ್ದಾಜಿದ್ದಿ ತೀವ್ರಗೊಂಡಿದೆ. ಇದರ ಬೆನ್ನಲ್ಲೇ ಅಧಿಕೃತ ಪ್ರಸಾರದಾರ ಸಂಸ್ಥೆಯಾದ ಜಿಯೋಸ್ಟಾರ್ ಟಿವಿ ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್‌ ಗಳಾದ್ಯಂತ ವೀಕ್ಷಕರ ಸಂಖ್ಯೆಯಲ್ಲಿ ಸಾರ್ವಕಾಲಿಕ ದಾಖಲೆ ಬರೆದಿದೆ. ಈ 19ನೇ ಸೀಸನ್‌ ನ ಅನಿಶ್ಚಿತತೆ ಮತ್ತು ರೋಮಾಂಚಕ ಪಂದ್ಯಗಳು ವೀಕ್ಷಕರನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದೆ. ಟಾಟಾ ಐಪಿಎಲ್ 2026 ಸಾರ್ವಕಾಲಿಕ ಗರಿಷ್ಠ ವೀಕ್ಷಕರನ್ನು ತಲುಪ್ದಿದು, ಒಟ್ಟಾರೆ ವೀಕ್ಷಕರ ತಲುಪುವಿಕೆ (ರೀಚ್) ಬರೋಬ್ಬರಿ 110 ಕೋಟಿ ದಾಟಿದೆ. ಟಿವಿ ವೀಕ್ಷಣೆಯಲ್ಲಿ ಉತ್ತಮ ದಾಖಲೆ ಬರೆದಿದ್ದು, 50 ಕೋಟಿ ವೀಕ್ಷಕರ ಗಡಿಯತ್ತ ಮುನ್ನಡೆಯುತ್ತಿದೆ.
ಇದೇ ವೇಳೆ ಡಿಜಿಟಲ್ ಪ್ಲಾಟ್‌ ಫಾರ್ಮ್‌ ಗಳಲ್ಲಿ ವೀಕ್ಷಕರ ಸಂಖ್ಯೆ ಶೇ. 15 ರಷ್ಟು ಹೆಚ್ಚಳವಾಗಿದ್ದು, ವೀಕ್ಷಣಾ
ಸಮಯವೂ ಶೇ. 7 ರಷ್ಟು ವೃದ್ಧಿಸಿದೆ. ಇನ್ನು ಕನೆಕ್ಟೆಡ್ ಟಿವಿ (ಸಿಟಿವಿ) ಮಾಧ್ಯಮದಲ್ಲಿ ಶೇ. 25 ರಷ್ಟು
ಬೆಳವಣಿಗೆಯಾಗಿದ್ದು, ವೀಕ್ಷಣಾ ಸಮಯ ಶೇ. 20 ರಷ್ಟು ಏರಿಕೆ ಕಂಡಿದೆ. ಈ ಬಾರಿಯ ಐಪಿಎಲ್‌ ನಲ್ಲಿ ಪ್ರಾದೇಶಿಕ ಭಾಷೆಗಳ ಕಾಮೆಂಟರಿ ಮತ್ತು ಪ್ರಸಾರಕ್ಕೆ ವೀಕ್ಷಕರು ಫಿದಾ ಆಗಿದ್ದಾರೆ. ಕಳೆದ ಸೀಸನ್‌ ಗೆ ಹೋಲಿಸಿದರೆ ಪ್ರಾದೇಶಿಕ ಭಾಷೆಗಳ ವೀಕ್ಷಣಾ ಸಮಯವು ಶೇ. 42 ರಷ್ಟು ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ.
ವಿವಿಧ ಡಿಜಿಟಲ್ ಸಾಧನಗಳು ಹಾಗೂ ಪ್ಲಾಟ್‌ ಫಾರ್ಮ್‌ ಗಳ ಮೂಲಕ ಐಪಿಎಲ್ ವೀಕ್ಷಿಸುವವರ ಸಂಖ್ಯೆ ದಿನದಿಂದ
ದಿನಕ್ಕೆ ಸ್ಥಿರವಾಗಿ ಹೆಚ್ಚುತ್ತಿರುವುದನ್ನು ಈ ಇತ್ತೀಚಿನ ದತ್ತಾಂಶಗಳು ಸಾಬೀತುಪಡಿಸಿವೆ. ಈ ಕುರಿತು ಮಾತನಾಡಿದ ಜಿಯೋಸ್ಟಾರ್ ಸ್ಪೋರ್ಟ್ಸ್‌ ನ ಮಾರಾಟ ವಿಭಾಗದ ಮುಖ್ಯಸ್ಥ ಅನೂಪ್ ಗೋವಿಂದನ್ ಅವರು,;ಈ ಬಾರಿಯ ಟಾಟಾ ಐಪಿಎಲ್ ಸೀಸನ್‌ ನಲ್ಲಿ ಜಿಯೋಸ್ಟಾರ್ ಪ್ಲಾಟ್‌ ಫಾರ್ಮ್‌ ಗಳಾದ್ಯಂತ ಅಭಿಮಾನಿಗಳು ತೋರಿರುವ ಸ್ಥಿರವಾದ ಆಸಕ್ತಿ ಮತ್ತು ತೊಡಗಿಸಿಕೊಳ್ಳುವಿಕೆ ವಿಶೇಷವಾಗಿ ಎದ್ದು ಕಾಣುತ್ತಿದೆ. ತಂಡಗಳ ನಡುವಿನ ತೀವ್ರ ಪೈಪೋಟಿಯು ವಾರದಿಂದ ವಾರಕ್ಕೆ ವೀಕ್ಷಕರ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ.
ಇದು ಈ ಟೂರ್ನಿಯು ವಿವಿಧ ಪರದೆಗಳ (ಟಿವಿ ಮತ್ತು ಡಿಜಿಟಲ್) ಮೂಲಕ ಅಭಿಮಾನಿಗಳಿಗೆ ಎಷ್ಟು ಹತ್ತಿರವಾಗಿದೆ
ಎಂಬುದನ್ನು ತೋರಿಸುತ್ತದೆ. ಪ್ಲೇ- ಆಫ್ ರೇಸ್ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ಜಿಯೋಸ್ಟಾರ್ ನಮ್ಮ ಎಲ್ಲಾ
ಪಾಲುದಾರರಿಗೆ ಸಾಟಿಯಿಲ್ಲದ ವೇದಿಕೆಯಾಗಿ ಮುಂದುವರಿದಿದೆ" ಎಂದು ತಿಳಿಸಿದ್ದಾರೆ.
ಟಾಟಾ ಐಪಿಎಲ್ 2026ರ ಜಿಯೋಸ್ಟಾರ್ ಪ್ರಸಾರಕ್ಕೆ ಜಾಹೀರಾತುದಾರರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಕಳೆದ ಸೀಸನ್‌ ಗೆ ಹೋಲಿಸಿದರೆ ಈ ಬಾರಿ ವಿವಿಧ ವಲಯಗಳ 125 ಹೊಸ ಜಾಹೀರಾತುದಾರರು ಜಿಯೋಸ್ಟಾರ್‌ ನೊಂದಿಗೆ ಕೈಜೋಡಿಸಿದ್ದಾರೆ. ಡಿಜಿಟಲ್ ಪ್ಲಾಟ್‌ ಫಾರ್ಮ್‌ ನಲ್ಲಿ 22 ಪ್ರಾಯೋಜಕರು ಜಿಯೋಸ್ಟಾರ್‌ ನೊಂದಿಗೆ ಪಾಲುದಾರಿಕೆ ಹೊಂದಿದ್ದರೆ, ಸಾಂಪ್ರದಾಯಿಕ ಟಿವಿ ಪ್ರಸಾರಕ್ಕಾಗಿ 16 ಪ್ರಾಯೋಜಕರು ಒಪ್ಪಂದ ಮಾಡಿಕೊಂಡಿದ್ದಾರೆ. ಭಾರತದ ಪ್ರತಿಷ್ಠಿತ ಹಳೆಯ ಬ್ರ್ಯಾಂಡ್‌ ಗಳು ಹಾಗೂ ಇಂದಿನ ಆಧುನಿಕ ತಂತ್ರಜ್ಞಾನ ಆಧಾರಿತ ನವೀನ ಸಂಸ್ಥೆಗಳು ಇದರಲ್ಲಿ ಸೇರಿದ್ದು, ಬ್ರ್ಯಾಂಡ್‌ ಗಳ ಪಾಲಿಗೆ ಟಾಟಾ ಐಪಿಎಲ್‌ ನ ರಾಷ್ಟ್ರೀಯ ಮಟ್ಟದ ವ್ಯಾಪ್ತಿ ಮತ್ತು ಪ್ರಾಮುಖ್ಯತೆ ಎಷ್ಟು ಹೆಚ್ಚುತ್ತಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ.
ಪ್ರಸಕ್ತ ಸೀಸನ್‌ ನ ಈ ಭರ್ಜರಿ ಯಶಸ್ಸಿಗೆ ಜಿಯೋಸ್ಟಾರ್ ಪರಿಚಯಿಸಿರುವ ಚಾಂಪಿಯನ್ಸ್ ವಾಲಿ ಫೀಡ್ ನಂತಹ
ವಿನೂತನ ಪ್ರಯೋಗಗಳು ಪ್ರಮುಖ ಕಾರಣವಾಗಿವೆ. ಇದರಲ್ಲಿ ಕ್ರಿಕೆಟ್ ಲೋಕದ ದಿಗ್ಗಜರು, ಮಾಜಿ ಚಾಂಪಿಯನ್‌ ಗಳು ಹಾಗೂ ಪ್ರಮುಖ ವಿಶ್ಲೇಷಕರಾದ ರವಿಚಂದ್ರನ್ ಅಶ್ವಿನ್, ಸುರೇಶ್ ರೈನಾ, ಹರಭಜನ್ ಸಿಂಗ್, ವೀರೇಂದ್ರ ಸೆಹ್ವಾಗ್ ಮತ್ತು ಇರ್ಫಾನ್ ಪಠಾಣ್ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ. ಇವರು ಲೈವ್ ಪಂದ್ಯದ ಜೊತೆಗೆ ಆಳವಾದ ವಿಶ್ಲೇಷಣೆ, ಕ್ರಿಕೆಟ್ ಲೋಕದ ಅಪರೂಪದ ಕಥೆಗಳು ಮತ್ತು ರಿಯಲ್-ಟೈಮ್ ಪಂದ್ಯದ ಪ್ರಿಡಿಕ್ಷನ್ಗಳನ್ನು ಹೇಳುವ ಮೂಲಕ ಅಭಿಮಾನಿಗಳಿಗೆ ಕ್ರೀಡಾವಿಜೃಂಭಣೆಯ ರಸದೌತಣ ಉಣಬಡಿಸುತ್ತಿದ್ದಾರೆ.
ಈ ಸೀಸನ್‌ ನಲ್ಲಿ ಕೇವಲ ಅಂಕಪಟ್ಟಿಯ ಏರುಪೇರು ಮಾತ್ರವಲ್ಲದೆ, ಪಂದ್ಯಗಳ ಗುಣಮಟ್ಟವೂ ವೀಕ್ಷಕರನ್ನು
ಹಿಡಿದಿಟ್ಟುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಹಿರಿಯ ದಿಗ್ಗಜರು ಮತ್ತು ಅನುಭವಿ ಆಟಗಾರರ ಸ್ಥಿರ ಪ್ರದರ್ಶನದ
ನಡುವೆ, ಯಾವುದೇ ಭಯವಿಲ್ಲದೆ ಆಡುವ ಯುವ ಪ್ರತಿಭೆಗಳ ಉದಯವು ಟೂರ್ನಿಯುದ್ದಕ್ಕೂ ಅಭಿಮಾನಿಗಳ ಆಸಕ್ತಿ
ಉತ್ತುಂಗದಲ್ಲಿರುವಂತೆ ನೋಡಿಕೊಂಡಿದೆ. ಸದ್ಯದ ಪರಿಸ್ಥಿತಿಯಲ್ಲಿ ಪ್ರತಿ ಪಂದ್ಯವೂ ಪ್ಲೇ- ಆಫ್ ದೃಷ್ಟಿಯಿಂದ
ನಿರ್ಣಾಯಕವಾಗಿರುವುದರಿಂದ, ಎಲ್ಲಾ ಪ್ರಾಂತ್ಯ ಹಾಗೂ ಎಲ್ಲಾ ವಯೋಮಾನದ ವೀಕ್ಷಕರು ಪಂದ್ಯಗಳನ್ನು
ಕುತೂಹಲದಿಂದ ವೀಕ್ಷಿಸುತ್ತಿದ್ದಾರೆ.
ಟೂರ್ನಿಯು ಈಗ ಅಂತಿಮ ಹಾಗೂ ನಿರ್ಣಾಯಕ ಹಂತಕ್ಕೆ ತಲುಪುತ್ತಿದ್ದು, ವೀಕ್ಷಕರ ಸಂಖ್ಯೆ ಮತ್ತು ಅವರ
ತೊಡಗಿಸಿಕೊಳ್ಳುವಿಕೆಯಲ್ಲಿ ಕಂಡುಬರುತ್ತಿರುವ ಈ ನಿರಂತರ ಬೆಳವಣಿಗೆಯು ಟಾಟಾ ಐಪಿಎಲ್‌ನ ಸದಾಕಾಲದ
ಜನಪ್ರಿಯತೆಯನ್ನು ಮತ್ತು ಲೈವ್ ಸ್ಪೋರ್ಟ್ಸ್ ಪ್ರಸಾರದಲ್ಲಿ ಜಿಯೋಸ್ಟಾರ್ ಹೊಂದಿರುವ ಮುಂಚೂಣಿ ಸ್ಥಾನವನ್ನು
ಮತ್ತೊಮ್ಮೆ ಸಾಬೀತುಪಡಿಸಿದೆ.
* ಈ ದತ್ತಾಂಶವು ಟಿವಿಯ 51 ಪಂದ್ಯಗಳು ಹಾಗೂ ಡಿಜಿಟಲ್‌ ನ 57 ಪಂದ್ಯಗಳ ವೀಕ್ಷಣೆಯನ್ನು
ಆಧರಿಸಿದೆ.