ರವಿ, ಮುದ್ದುರಾಜ್, ಕುಮಾರಸ್ವಾಮಿ, ಪ್ರಸನ್ನ, ಆರೋಪಿ ಕೆ ಮೋಹನ್, ಇದ್ದರು 
ರಾಜ್ಯ

ಚಿನ್ನಾಭರಣ ಕಳ್ಳನ ಬಂಧನ

ಬೈಲುಕುಪ್ಪೆ: ರಸ್ತೆ ಕಾಮಗಾರಿ ಕೆಲಸಕ್ಕೆ ಬಂದು ಚಿನ್ನ, ಬೆಳ್ಳಿ, ನಗದು ಕಳ್ಳತನ ಮಾಡಿದ್ದ ವ್ಯಕ್ತಿಯನ್ನು ಬೈಲುಕುಪ್ಪೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಹುಣಸೂರು ತಾಲೂಕಿನ ಹರವೆ ರಾಮನಹಳ್ಳಿ ಗ್ರಾಮದ ಕುಚೇಲ ನಾಯಕನ ಮಗ ಕೆ. ಮೋಹನ್ (33) ಬಂಧಿತ ಆರೋಪಿ.
ಪಿರಿಯಾಪಟ್ಟಣ ತಾಲೂಕಿನ ದಿಂಡಗಾಡು ಗ್ರಾಮದ ಬಾಲ್ ಮೋಹನ್ ಅವರ ಮಗ ಸಂಜಯ್ ಬಾಬು ಎಂಬುವರ ಮನೆಯಲ್ಲಿ ಕಳ್ಳತನವಾಗಿದ್ದ ಬಗ್ಗೆ ಇತ್ತೀಚೆಗೆ ಬೈಲುಕುಪ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ದೂರಿನ ಮೇರೆಗೆ ಡಿವೈಎಸ್‌ಪಿ ರವಿ, ವೃತ್ತ ನಿರೀಕ್ಷಕ ದೀಪಕ್ ಮಾರ್ಗದರ್ಶನದಲ್ಲಿ ಪಿಎಸ್‌ಐ ರವಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯಿಂದ 200 ಗ್ರಾಂ ಬೆಳ್ಳಿ ಎರಡು ಚಿನ್ನದ ರಿಂಗ್ ಚಿನ್ನದ ಗುಂಡು ವಶಕ್ಕೆ ಪಡೆಯಲಾಗಿದ್ದು, ಶುಕ್ರವಾರ ಪಿರಿಯಾಪಟ್ಟಣದ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕಾರ್ಯಚರಣೆಯಲ್ಲಿ ಸಿಬ್ಬಂದಿಗಳಾದ ಮುದ್ದುರಾಜ್, ಕುಮಾರಸ್ವಾಮಿ, ಪ್ರಸನ್ನ ಇದ್ದರು.