ಚಿನ್ನಾಭರಣ ಕದ್ದವನ ಬಂಧನ Jewelry thief
ಬಾಗೇಪಲ್ಲಿ: ತಾಲೂಕಿನ ಮೊಟುಕುಪಲ್ಲಿ ಗ್ರಾಮದಲ್ಲಿ 10 ದಿನಗಳ ಹಿಂದೆ ಕಳವಾಗಿದ್ದ 230 ಗ್ರಾಂ ಚಿನ್ನಾಭರಣವನ್ನು ಬಾಗೇಪಲ್ಲಿ ಪೊಲೀಸರು ವಶಕ್ಕೆ ಪಡೆದು ಆರೋಪಿಯನ್ನು ಬಂಧಿಸಿದ್ದಾರೆ.Jewelry thief
ಮೊಟುಕುಪಲ್ಲಿ ಗ್ರಾಮದ ಗಂಧರ್ವರೆಡ್ಡಿ ಆರೋಪಿ. ತಾಲೂಕಿನ ಕಸಬಾ ಹೋಬಳಿಯ ಮೊಟುಕುಪಲ್ಲಿ ಗ್ರಾಮದ ಶಿವಕುಮಾರ್ ಮನೆಯಲ್ಲಿ ಏ.15 ರಂದು ಕಳ್ಳತನ ನಡೆದಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಬಾಗೇಪಲ್ಲಿಯ ಸರ್ಕಲ್ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿ ಗಂಧರ್ವರೆಡ್ಡಿಯನ್ನು ಬಂಧಿಸಿ 230 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.
ದೂರು ದಾಖಲಾದ 9 ದಿನಗಳಲ್ಲಿ ಪ್ರಕರಣವನ್ನು ಭೇದಿಸಿರುವ ಬಾಗೇಪಲ್ಲಿ ಠಾಣೆ ಪೊಲೀಸ್ ಸಿಬ್ಬಂದಿಯ ಕಾರ್ಯಾಚರಣೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಅಜಯ್ ಸಾರಥಿ, ಸಬ್ ಇನ್ಸ್ಪೆಕ್ಟರ್ಗಳಾದ ಸುನೀಲ್ ಕುಮಾರ್, ಮುನಿರತ್ನಂ, ಮುಖ್ಯಪೇದೆ ಸುರೇಶ್, ಪೇದೆಗಳಾದ ಧನಂಜಯ ಕುಮಾರ್, ಸಾಗರ್, ವೆಂಕಶಿವ, ನಾಗಾರ್ಜುನ, ತನಿಖಾ ಸಹಾಯಕರಾದ ಕೃಷ್ಣಪ್ಪ, ರಾಜಪ್ಪ ಮತ್ತಿತರರು ಇದ್ದರು.