ಸಿಸಿ ಕ್ಯಾಮರಾದಲ್ಲಿ ಸೆರೆಯಾದ ದೃಶ್ಯ. 
ರಾಜ್ಯ

ಗನ್​ ತೋರಿಸಿ ಆಭರಣ ಮಳಿಗೆ ದರೋಡೆ / NELAMANGAL

ನೆಲಮಂಗಲ : ನೆಲಮಂಗಲ ಸಮೀಪದ ದಾಸನಪುರದಲ್ಲಿರುವ ಆಭರಣ ಮಳಿಗೆಗೆ ನುಗ್ಗಿದ ಮೂವರು ದುಷ್ಕರ್ಮಿಗಳು, ಗನ್​ ತೋರಿಸಿ 30 ಲ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾಗಿದ್ದಾರೆ.
ದಾಸನಪುರ ಬಸ್​ ನಿಲ್ದಾಣ ಬಳಿಯ ರಾಮ್​ ದೇವ್​ ಜುವೆಲ್ಲರಿ ಶಾಪ್​ನಲ್ಲಿ ಮಂಗಳವಾರ ಸಂಜೆ 5.30ರಲ್ಲಿ ದರೋಡೆ ನಡೆದಿದೆ. ಮಳಿಗೆ ಮಾಲೀಕ ಮಾಣಿಕ್​ ರಾಮ್​ ಅವರು ಮಕ್ಕಳು ಅಂಗಡಿಯಲ್ಲಿದ್ದಾಗ ಬೈಕ್​ನಲ್ಲಿ ಬಂದಿದ್ದ ಮೂವರು ದರೋಡೆಕೋರರು ಆಭರಣ ಖರೀದಿಸುವ ಗ್ರಾಹಕರ ಸೋಗಿನಲ್ಲಿ ಒಳ ಪ್ರವೇಶಿಸಿದ್ದರು. ಕಿವಿಯೋಲೆ ತೋರಿಸುವಂತೆ ಕೇಳಿದ್ದಾರೆ. ನಂತರ ಆಭರಣ ನೋಡುತ್ತಿರುವಂತೆಯೇ ಏಕಾಏಕಿ ಗನ್​ ತೋರಿಸಿ ಕೈಗೆ ಸಿಕ್ಕಿದ್ದನ್ನೆಲ್ಲ ದೋಚಿ ಪರಾರಿಯಾಗಿದ್ದಾರೆ.
ಅಂಗಡಿಯಲ್ಲಿದ್ದವರು ಆರೋಪಿಗಳನ್ನು ಹಿಡಿಯಲು ಯತ್ನಿಸಿದಾಗ ತಪ್ಪಿಸಿಕೊಂಡು ಓಡಿ ಹೋಗಿದ್ದಾರೆ. ಇದೇ ವೇಳೆ ಆರೋಪಿಯೊಬ್ಬನ ಮೊಬೈಲ್​ ಶಾಪ್​ನಲ್ಲೇ ಬಿದ್ದಿದ್ದು, ಅದರ ಮೂಲಕ ಆರೋಪಿಗಳ ಸುಳಿವು ಪೊಲೀಸರಿಗೆ ಸಿಕ್ಕಿದೆ ಎಂದು ಗೊತ್ತಾಗಿದೆ. ಮಾದನಾಯಕನಹಳ್ಳಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್​ನಲ್ಲಿ ಬಂದಿದ್ದ ಮೂವರು ಕಿವಿಯೋಲೆ ತೋರಿಸುವಂತೆ ಕೇಳಿದರು. ಈ ರೀತಿ ವಿನ್ಯಾಸದ ಕಿವಿಯೋಲೆ ನಮ್ಮಲ್ಲಿ ಇಲ್ಲ ಎಂದು ಹೇಳಿದೆವು. ಆ ಕೂಡಲೇ ಗನ್​ ತೋರಿಸಿ ಬೆದರಿಸಿದರು. 30 ಗ್ರಾಂ ಚಿನ್ನಾಭರಣ, 50 ಸಾವಿರ ನಗದು ಎತ್ತಿಕೊಂಡು ಓಡಿಹೋದರು. ನಮ್ಮನ್ನು ಕಿರುಚದಂತೆ ಮುಖ ಪರಚಿ, ಬಾಯಿ ಮುಚ್ಚಿಸಿದರು.

ಸಂಜೆ 5.30ರಲ್ಲಿ ರಾಬರಿಯಾಗಿದೆ. ಬೈಕ್​ನಲ್ಲಿ ಬಂದಿದ್ದ ಮೂವರು ಪಿಸ್ತೂಲ್​ ತೋರಿಸಿ ಚಿನ್ನಾಭರಣ ಹಾಗೂ 50 ಸಾವಿರ ರೂ. ನಗದು ದೋಚಿದ್ದಾಗಿ ಜ್ಯುವೆಲರಿ ಅಂಗಡಿ ಮಾಲೀಕ ಮಾಣಿಕ್​ ರಾಮ್​ ದೂರು ಕೊಟ್ಟಿದ್ದಾರೆ. ದರೋಡೆ ಪ್ರಕರಣ ದಾಖಲಿಸಿಕೊಂಡಿದ್ದು, ಶ್ರೀವೇ ಆರೋಪಿಗಳನ್ನು ಬಂಧಿಸಲಾಗುವುದು.