ಸಹೋದರತ್ವದ ಸಂದೇಶ ನೀಡಿದ ಯೇಸು Jesus
- ದ್ವೇಷ ಮರೆತು ಪ್ರೀತಿಯ ಹಣತೆ ಹಚ್ಚೋಣ
ಶಿಡ್ಲಘಟ್ಟ: ನಗರದ ಸೇಕ್ರೆಡ್ ಹಾರ್ಟ್ ಚರ್ಚ್, ದಿಬ್ಬೂರಹಳ್ಳಿ ರಸ್ತೆಯ ಎಬೆನೆಜರ್ ಮಾರ್ತೋಮ ಚರ್ಚ್, ನೆಲ್ಲಿಮರದಹಳ್ಳಿಯ ಇಮ್ಮಾನುವೇಲ್ ಚರ್ಚ್ ಸೇರಿ ತಾಲೂಕಿನ ವಿವಿಧೆಡೆ ಚರ್ಚ್ಗಳಲ್ಲಿ ಗುರುವಾರ ಕ್ರಿಸ್ಮಸ್ ಹಬ್ಬದ ಆಚರಿಸಲಾಯಿತು. Jesus
ನಗರದ ಚಿಂತಾಮಣಿ ರಸ್ತೆಯಲ್ಲಿನ ಸೇಕ್ರೆಡ್ ಹಾರ್ಟ್ ಚರ್ಚ್ನಲ್ಲಿ ಗುರುವಾರ ಆಯೋಜಿಸಿದ್ದ ಕ್ರಿಸ್ಮಸ್ ಹಬ್ಬದ ಪ್ರಾರ್ಥನಾ ಸಭೆಯಲ್ಲಿ ಧರ್ಮಗುರುಗಳಾದ ಫಾದರ್ ಜೀವನ್ ಪ್ರಶಾಂತ್ ಮಾತನಾಡಿ, ವಿಶ್ವಕ್ಕೆ ಪ್ರೀತಿ, ಶಾಂತಿ ಮತ್ತು ಸಹೋದರತ್ವದ ಸಂದೇಶ ನೀಡಿದ ಯೇಸುಕ್ರಿಸ್ತರ ಜನ್ಮದಿನ ಇವತ್ತು.ದೀನದಲಿತರ ಮತ್ತು ಆರ್ತರ ಸೇವೆಯೇ ನಿಜವಾದ ಕ್ರಿಸ್ ಮಸ್ ಆಚರಣೆ ಎಂದು ಹೇಳಿದರು.
ನಮ್ಮ ನೆರೆಯವರನ್ನು ಪ್ರೀತಿಸುವುದು ಮತ್ತು ಶತ್ರುಗಳನ್ನು ಕ್ಷಮಿಸುವುದು ಕ್ರಿಸ್ತರ ಬೋಧನೆಗಳ ಸಾರ. ನಾವು ನಮ್ಮ ಮನಸ್ಸಿನಲ್ಲಿರುವ ದ್ವೇಷ ಮರೆತು ಪ್ರೀತಿಯ ಹಣತೆ ಹಚ್ಚೋಣ. ಕಷ್ಟದಲ್ಲಿರುವವರಿಗೆ ಸಹಾಯ ಹಸ್ತ ಚಾಚುವ ಮೂಲಕ ಕ್ರಿಸ್ತರ ಹಾದಿಯಲ್ಲಿ ನಡೆಯೋಣ ಎಂದರು.
ಜಾತಿ ಭೆೇದವಿಲ್ಲದೆ ಹಲವಾರು ಮಂದಿ ವಿವಿಧ ಚರ್ಚ್ಗಳಿಗೆ ಭೇಟಿ ನೀಡಿ ಮೇಣದ ಬತ್ತಿ ಬೆಳಗಿ ಪ್ರಾರ್ಥನೆಯಲ್ಲಿ ಪಾಲ್ಗೊಂಡರು.ಕ್ರಿಶ್ಚಿಯನ್ನರ ಮನೆಗಳಲ್ಲಿ ಯೇಸು ಜನಿಸಿದ ಗೋದಲಿಯ ಪ್ರತಿಕೃತಿಯನ್ನು ಮಾಡಲಾಗಿತ್ತು. ಕ್ರಿಬ್ ಅಥವಾ ಗೋದಲಿಯಲ್ಲಿ ಬೆತ್ಲೆಹೆಮ್ನ ಬೆಟ್ಟ, ಗುಡ್ಡ, ಕಣಿವೆ, ಜಾರುವ ಝರಿ, ಇಳಿದು ಬರುವ ತೊರೆ, ಗದ್ದೆಗಳ ಹಸಿರಿನ ನಡುವೆ ದೈವಿಕ, ಮಾನವಿಕ ಪ್ರತಿಮೆ, ಪ್ರಾಣಿ, ಪಕ್ಷಿಗಳ ಮೂರ್ತಿ ಸೃಷ್ಟಿಸಿದ್ದರು.