ದೇವನಹಳ್ಳಿ ಫೆಥ್ ಬ್ಯಾಪ್ಟಿಸ್ಟ್ ಚರ್ಚ್ನಲ್ಲಿ ಸಚಿವ ಕೆ.ಎಚ್.ಮುನಿಯಪ್ಪ ಅವರನ್ನು ಸನ್ಮಾನಿಸಲಾಯಿತು. ಸಂಚಾರ ಪೊಲೀಸ್ ಠಾಣ್ ಇನ್ಸ್ಪೆಕ್ಟರ್ ಮುರಳೀಧರ್, ಬಯಪ ಅಧ್ಯಕ್ಷ ವಿ.ಶಾಂತಕುಮಾರ್, ತಾಲೂಕು ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಸಿ.ಜಗನ್ನಾಥ್, ಆಯುಕ್ತ ದಾಸ್ ಸೂರ್ಯವಂಶಿ ಇದ್ದರು.
ದೇವನಹಳ್ಳಿ : ಜಗತ್ತಿನ ಪಾಪ ತೊಳೆಯಲು ಶಾಂತಿಯ ಸಂದೇಶದ ಮೂಲಕ ಹೊಸದಾರಿಯ ಬೆಳಕನ್ನು ತೋರಿದ ಯೇಸು ಜೀವನ ಸಂದೇಶ ಯಾವುದೇ ಒಂದು ಧರ್ಮ ಜಾತಿಗೆ ಸೀಮಿತವಲ್ಲ. ಮಾನವಕುಲದ ಒಳಿತಿಗಾಗಿ ಜೀವನವನ್ನೇ ಅರ್ಪಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.
ದೇವನಹಳ್ಳಿ ಪರ್ವತಪುರದಲ್ಲಿರುವ ಫೈಥ್ ಬ್ಯಾಪ್ಟಿಸ್ಟ್ ಚರ್ಚ್ಗೆ ಕ್ರಿಸ್ಮಸ್ ಪ್ರಯುಕ್ತ ಭೇಟಿ ನೀಡಿ ಮಾತನಾಡಿದರು. ಸರ್ಕಾರದಿಂದ ಕ್ರಿಶ್ಚಿಯನ್ ಸಮುದಾಯಕ್ಕೆ ಹಲವು ಸವಲತ್ತು ನೀಡಲಾಗಿದೆ. ಆದರೆ ಸೌಲಭ್ಯಗಳ ತಿಳಿವಳಿಕೆ ಇಲ್ಲದ ಕಾರಣ ಸಮುದಾಯದವರು ಸದುಉಪಯೋಗ ಮಾಡಿಕೊಳ್ಳುವಲ್ಲಿ ವಿಫಲವಾಗಿದ್ದಾರೆ ಎಂದರು.
ಕ್ರಿಶ್ಚಿಯನ್ನರು ಪ್ರಾರ್ಥನೆಗೆ ಸೀಮಿತವಾಗಬಾರದು. ಆರ್ಥಿಕ ಮತ್ತು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕು. ತಮಗೆ ಲಭ್ಯವಿರುವ ಸೌಲಭ್ಯ ತಿಳಿದುಕೊಂಡು ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಮುಂದೆ ಬರಬೇಕು. ಅಲ್ಪಸಂಖ್ಯಾತ ಸಮುದಾಯದಲ್ಲಿ ಇರುವ ಧರ್ಮಗಳ ಪೈಕಿ ಕ್ರಿಶ್ಚಿಯನ್ನರಿಗೆ ಸಿಗಬೇಕಾದ ಸವಲತ್ತು ಸಿಗುತ್ತಿಲ್ಲ. ಕ್ರಿಶ್ಚಿಯನ್ನರಿಗಾಗಿಯೇ ಪ್ರತ್ಯೇಕ ಕಾರ್ಪೊರೇಷನ್ ರಚಿಸಲಾಗಿದೆ. ಆದರೆ ಚರ್ಚ್ ನವೀಕರಣ ಕಾಂಪೌಂಡ್ ನಿಮಾರ್ಣಗಳಿಗೆ ಮಾತ್ರ ಹಣ ಬಳಸಲಾಗುತ್ತಿದೆ. ಸರ್ಕಾರ ಸಮುದಾಯದ ಅಭಿವೃದ್ಧಿಗಾಗಿ ಕೋಟ್ಯಂತರ ರೂಪಾಯಿ ಅನುದಾನ ಮೀಸಲಿಟ್ಟಿದೆ ಎಂದು ಮಾಹಿತಿ ನೀಡಿದರು.
ಸಭಾಪಾಲಕ ರೆವರೆಂಡ್ ಜೆಡಿ ಎನೋಷ್ ಮಾತನಾಡಿ, ಕಾಲವು ಪರಿಪೂರ್ಣವಾದಾಗ ಸೃಷ್ಟಿಕರ್ತ ದೇವದೂತನಾಗಿ ಶಾಪದಿಂದ ವಿಮೋಚನೆ ಮಾಡಲು ಬರುತ್ತಾನೆ. ಆ ರೀತಿ ಬಂದವರೇ ಯೇಸು ಕ್ರಿಸ್ತರು. ಅವರ 33 ವರ್ಷಗಳ ಜೀವನದ ಹಾದಿಯೇ ಪವಾಡ ಸದೃಶ್ಯ ಅದ್ಬುತಗಳಾಗಿವೆ ಎಂದು ಹೇಳಿದರು.
ಮುಖಂಡ ಬಿ.ಕೆ.ನಾರಾಯಣಸ್ವಾಮಿ, ಕುರಿ ಮತ್ತು ಹುಣ್ಣೆ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಬಿ.ಕೆ.ನಾರಾಯಣಸ್ವಾಮಿ, ಜೆಡಿಎಸ್ ಟೌನ್ ಅಧ್ಯಕ್ಷ ಮುನಿನಂಜಪ್ಪ, ಪುರಸಭಾ ಸದಸ್ಯಡಿ.ಆರ್.ಬಾಲರಾಜು, ಸಭಾಪಾಲಕ ರೆವರೆಂಡ್ ಜೆಡಿ ಎನೋಷ್, ಫಾಸ್ಟರ್ಗಳಾದ ರೆವರೆಂಡ್ ಪ್ರಕಾಶ್, ಬುಳ್ಳಹಳ್ಳಿ ಎಂ.ರಾಜಪ್ಪ, ಜೋಸೆಫ್, ಅಂಗವಿಕಲರ ಸಂಘದ ಅಧ್ಯಕ್ಷ ಜಿಕೆ.ಸುರೇಶ್, ಮುಖಂಡರಾದ ಮೋಟಪ್ಪ, ಮುನಿಪೆರುಮಪ್ಪ, ಮುನಿರಾಜು ಇದ್ದರು.