ಗುಂಡ್ಲುಪೇಟೆ ಹೊರವಲಯದ ಗುಂಡ್ಲುನದಿ ಹಳ್ಳಕ್ಕೆ ಬಿದ್ದಿರುವ ಜೀಪಿನಲ್ಲಿದ್ದ ಪ್ರಯಾಣಿಕನನ್ನು ಸಾರ್ವಜನಿಕರು ರಕ್ಷಿಸಿದ್ದಾರೆ.
- ಚಾಲಕನ ನಿಯಂತ್ರಣ ತಪ್ಪಿದ ಜೀವು
- ಗುಂಡ್ಲುನದಿ ಹಳ್ಳಕ್ಕೆ ಬಿದ್ದು ಜಖಂ
ಗುಂಡ್ಲುಪೇಟೆ: ಪಟ್ಟಣದ ಹೊರವಲಯದಲ್ಲಿ ಮಂಗಳವಾರ ಚಾಲಕನ ನಿಯಂತ್ರಣ ತಪ್ಪಿದ ಜೀವು ಗುಂಡ್ಲುನದಿ ಹಳ್ಳಕ್ಕೆ ಬಿದ್ದು ಜಖಂಗೊಂಡಿದ್ದು, ಪ್ರಯಾಣಿಕರಿಗೆ ಗಾಯವಾಗಿದೆ.
ಮಂಡ್ಯದ ಬಾಚನಹಳ್ಳಿಯ ಅನಿತಾ(21) ಹಾಗೂ ಧನಗೋಡಿನ ಪ್ರಿಯಾಂಕಾ(21) ಗಾಯಗೊಂಡಿದ್ದು, ಮತ್ತೊಬ್ಬ ಪ್ರಯಾಣಿಕ ಸಿದ್ದರಾಜು ಅವರಿಗೆ ಸಣ್ಣಪುಟ್ಟಗಾಯಗಳಾಗಿವೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ತೆರಳಿದ ಪಟ್ಟಣ ಠಾಣೆಯ ಪೊಲೀಸರು ಸಾರ್ವಜನಿಕರ ನೆರವಿನಿಂದ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದು, ಜೀಪ್ ಅನ್ನು ಮೇಲೆತ್ತಿದ್ದಾರೆ.