ಪ್ರಮುಖ ಮುಖ್ಯಾಂಶಗಳು
೨೦೨೮ಕ್ಕೆ ರಾಜ್ಯದಲ್ಲಿ ಎನ್‌ಡಿಎ ಮೈತ್ರಿಕೂಟ ಅಧಿಕಾರ
| ಜೆಡಿಎಸ್ ಕೋರ್ ಸಮಿತಿ ಅಧ್ಯಕ್ಷ ಕೃಷ್ಣ ರೆಡ್ಡಿ ವಿಶ್ವಾಸ | ಯುವ ಜನತಾದಳ ಸಮಾವೇಶ
ವಿಜಯವಾಣಿ ಸುದ್ದಿಜಾಲ ಬೆಳಗಾವಿ:
ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಜೆಡಿಎಸ್ ಕಾರ್ಯಕರ್ತರು ಈಗಿನಿಂದಲೇ ಸಜ್ಜಾಗಬೇಕು.ತಮ್ಮಲ್ಲಿರುವ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಪಕ್ಷದ ಬಲವರ್ಧನೆಗೆ ಮುಂದಾಗಬೇಕು,2028ರಲ್ಲಿ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಜೆಡಿಎಸ್ ರಾಜ್ಯ ಕೋರ್ ಸಮಿತಿ ಅಧ್ಯಕ್ಷ ಕೃಷ್ಣ ರೆಡ್ಡಿ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ ಪಡಿಸಿದರು.
ನಗರದ ಗಾಂಧಿ ಭವನದಲ್ಲಿ ಭಾನುವಾರ ನಡೆದ ಯುವ ಜನತಾದಳ (ಜಾತ್ಯಾತೀತ) ಸಮಾವೇಶವನ್ನು ಅವರು ಉದ್ಘಾಟಿಸಿದರು.
ಪ್ರಾದೇಶಿಕ ಪಕ್ಷವಾದರೂ ದಕ್ಷ ,ಸಮರ್ಥವಾದ ಪ್ರಧಾನಮಂತ್ರಿ,ಮುಖ್ಯಮಂತ್ರಿ ಸೇರಿ ರಾಜಕೀಯ ನಾಯಕರನ್ನು ನಾಡಿಗೆ ಅಪಾರ ಪಕ್ಷ ನೀಡಿದೆ. ಸಂದಿಗ್ಧ ಸ್ಥಿತಿಯ ನಡುವೆಯು ಸುದೀರ್ಘವಾಗಿ ಇಪ್ಪತೈದು ವರ್ಷದಿಂದ ಪಕ್ಷವನ್ನು ರಾಷ್ಟ್ರೀಯ ನಾಯಕರಾದ ದೇವೇಗೌಡ ಮತ್ತು ಕುಮಾರಸ್ವಾಮಿ ಅವರು ಬೆಳೆಸುತ್ತಿದ್ದಾರೆ.ಅವರ ಕೈ ಬಲ ಪಡಿಸಲು ಪಕ್ಷವನ್ನು ಬೇರುಮಟ್ಟದಿಂದ ಬಳೆಸುವ ಮಹತ್ತರ ಜವಾಬ್ದಾರಿ ಕಾರ್ಯಕರ್ತರು ಮೇಲಿದ್ದಾರೆ.
ಜೆಡಿಎಸ್ ಅಧಿಕಾರದಲ್ಲಿ ನೀರಾವರಿ ಯೋಜನೆ, ರೈತರ ಸಾಲ ಮನ್ನಾ ,ಲಾಟರಿ ನಿಷೇಧ, ಸಾರಾಯಿ ನಿಷೇಧ, ಸೈಕಲ್ ವಿತರಣೆ,ಭಾಗ್ಯಲಕ್ಷಿ÷್ಮ ಯೋಜನೆ ಸೇರಿದಂತೆ ಹಲವಾರು ಜನಪರ ಯೋಜನೆ ನೀಡಿರುವುದು ರಾಜ್ಯದ ಜನರು ಮರೆತಿಲ್ಲ.ಆದರೆ ಇಂದು ಗ್ಯಾರಂಟಿ ಹೆಸರಿನಲ್ಲಿ ರಾಜ್ಯವನ್ನು ಕಾಂಗ್ರೆಸ್ ದಿವಾಳಿ ಮಾಡುತ್ತಿದೆ. ರಾಜ್ಯದ ಎಲ್ಲಾ ವರ್ಗದ ಶ್ರಯೋಭಿವೃದ್ದಿಗಾಗಿ ಜೆಡಿಎಸ್ ಮತ್ತೆ ಅಕಾರಕ್ಕೆ ಬರಬೇಕಿದೆ.
ಮಾಜಿ ಸಚಿವ ಅಲ್ಕೋಡ ಹನುಮಂತ,
ಮುಖಂಡ ಪಂಚನಗೌಡ ದ್ಯಾಮನಗೌಡರ ಇದ್ದರು.
ಸಮಾವೇಶಕ್ಕೂ ಮೊದಲು ಜೆಡಿಎಸ್ ಯುವ ಕಾರ್ಯಕರ್ತರು ಬೈಕ್ ರ್ಯಾಲಿ ಇದ್ದರು.
ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ,ಮಾಜಿ ಶಾಸಕ ವೀರಭ್ರದ್ರಪ್ಪ ಹಾಲಹರವಿ, ಸೌರಭ ಚೋಪ್ರಾ,ವಿಠ್ಠಲ ಗಡ್ಡಿ,ಪಂಚನಗೌಡ ದ್ಯಾಮನಗೌಡರ ,ಪ್ರಕಾಶ ಸೋನವಾಲ್ಕರ್ ,ಅಶೋಕ ಪಾಟೀಲ,ಕಾಡಗೌಡ ಪಾಟೀಲ ಇತರರಿದ್ದರು.