JD(S) leaders travel for Chennamma's funeral rites.
ಮುಳಬಾಗಿಲು: ರಾಜ್ಯ ರಾಜಕಾರಣದಲ್ಲಿ ಹಲವು ನಾಯಕರಿಗೆ ತಾಯಿಯಂತೆ ಮಾರ್ಗದರ್ಶನ ನೀಡಿದ ಚನ್ನಮ್ಮ ದೇವೇಗೌಡ ಅವರು ದೇವೇಗೌಡರ ರಾಜಕೀಯ ಪಯಣಕ್ಕೆ ಭದ್ರ ಆಧಾರ ಸ್ತಂಭವಾಗಿದ್ದರು ಎಂದು ಶಾಸಕ ಸಮೃದ್ಧಿ ವಿ. ಮಂಜುನಾಥ್ ಹೇಳಿದರು.
ಜೆಡಿಎಸ್ ರಾಷ್ಟ್ರೀಯ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಧರ್ಮಪತ್ನಿ ದಿ. ಚನ್ನಮ್ಮ ದೇವೇಗೌಡ ಅವರ ಉತ್ತರಕ್ರಿಯೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಮುಳಬಾಗಿಲು ವಿಧಾನಸಭಾ ಕ್ಷೇತ್ರದಿಂದ ಸುಮಾರು 200ಕ್ಕೂ ಅಧಿಕ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಮಾವಿನಕೆರೆಗೆ ತೆರಳಿದರು.
ಮನೆಗೆ ಬಂದವರನ್ನು ಆತ್ಮೀಯವಾಗಿ ಉಪಚರಿಸುವ ಮಾತೃ ಹೃದಯ ಹೊಂದಿದ್ದ ಚನ್ನಮ್ಮ ಅವರು ಸರಳತೆ, ಸೇವಾಭಾವ ಮತ್ತು ಸಾಂಸತಿಕ ಮೌಲ್ಯಗಳ ಪ್ರತಿಕವಾಗಿದ್ದರು. ಅವರ ಆದರ್ಶಗಳು ಮುಂದಿನ ಪೀಳಿಗೆಗೂ ಸ್ಫೂರ್ತಿಯಾಗಲಿವೆ ಎಂದು ನುಡಿದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಕಾಡೇನಹಳ್ಳಿ ಕೆ.ಎನ್. ನಾಗರಾಜ್ ಮಾತನಾಡಿ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ರಾಜ್ಯ ಹಾಗೂ ರಾಷ್ಟ್ರಕ್ಕೆ ಸಲ್ಲಿಸಿದ ಸೇವೆಯ ಹಿಂದೆ ಚನ್ನಮ್ಮ ದೇವೇಗೌಡ ಅವರ ತ್ಯಾಗ ಮತ್ತು ಪ್ರೋತ್ಸಾಹ ಮಹತ್ತರವಾಗಿದೆ ಎಂದು ಹೇಳಿದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಕಾಡೇನಹಳ್ಳಿ ಕೆ.ಎನ್. ನಾಗರಾಜ್, ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಜಿ. ಆನಂದರೆಡ್ಡಿ, ಕೋಮುಲ್ ನಿರ್ದೇಶಕ ಬಿ.ವಿ. ಸಾಮೇಗೌಡ, ನಗರಸಭೆ ಮಾಜಿ ಅಧ್ಯಕ್ಷ ಎಂ.ಆರ್. ಮುರಳಿ, ಜೆಡಿಎಸ್ ವಕ್ತಾರ ಎಂ.ಎಸ್. ಶ್ರೀನಿವಾಸರೆಡ್ಡಿ, ಪ್ರಧಾನ ಕಾರ್ಯದರ್ಶಿ ವಿ. ರಘುಪತಿರೆಡ್ಡಿ, ಸಂಘಟನಾ ಕಾರ್ಯದರ್ಶಿ ಕವತನಹಳ್ಳಿ ಮುನಿಸ್ವಾಮಿಗೌಡ ಇದ್ದರು.