JDS leader arrested for kicking traffic policeman for being stopped in Bengaluru 
ರಾಜ್ಯ

ಕರ್ತವ್ಯನಿರತ ಸಂಚಾರಿ ಪೊಲೀಸ್​ ಕಾನ್​ಸ್ಟೇಬಲ್ ಕಾಲರ್​ ಹಿಡಿದು, ಒದೆಯಲು​ ಯತ್ನ; JDS ರಾಜ್ಯ ಪ್ರಧಾನ ಕಾರ್ಯದರ್ಶಿ ವಿರುದ್ಧ FIR..Bengaluru

(65)

ವಿರುದ್ಧ  ಹುಳಿಮಾವು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಆಗಸ್ಟ್​​ 16 ಭಾನುವಾರದಂದು ಹುಳಿಮಾವು ಜಂಕ್ಷನ್​ ಬಳಿ ಈ ಘಟನೆ ನಡೆದಿದೆ. ಸಂಚಾರ ಠಾಣೆ ಪೊಲೀಸ್​ ಕಾನ್​ಸ್ಟೇಬಲ್​ ಮಂಜಪ್ಪ ಅವರ ದೂರಿನ ಆಧಾರದ ಮೇಲೆ ಕೇಸ್​ ದಾಖಲಾಗಿದೆ ಎನ್ನಲಾಗಿದೆ.

ಕರ್ತವ್ಯಕ್ಕೆ ಅಡ್ಡಿ

ಆಗಸ್ಟ್ 16ರ ಸಂಜೆ  4 ಗಂಟೆಗೆ ಗೊಟ್ಟಿಗೆರೆ ಜಂಕ್ಷನ್​ ಬಳಿ ಕಾನ್​ಸ್ಟೇಬಲ್​ ಅರುಣ್​ ಅವರು ಸಂಚಾರ ಸುಗಮಗೊಳಿಸುತ್ತಿದ್ದರು. ಈ ಸಂದರ್ಭದಲ್ಲಿ ..ಎದುರಿನ ಮಾರ್ಗದಿಂದ ಬರುತ್ತಿದ್ದ ವಾಹನಗಳು ಮುಂದೆ ಚಲಿಸಲು ಅವಕಾಶ ಮಾಡಿಕೊಡುವ ಸಲುವಾಗಿ,  ಜೆಡಿಎಸ್​​​  ನಾಯಕ ಬರುತ್ತಿದ್ದ ಮಾರ್ಗದ ವಾಹನಗಳನ್ನು ತಡೆದು ನಿಲ್ಲಿಸಿದ್ದಾರೆ. ಇದರಿಂದ ಕೆರಳಿದ ಮಂಜುನಾಥ್​ ಅವರು ತಮ್ಮ ಜೊತೆಗಿದ್ದ ಸಹಾಯಕರೊಂದಿಗೆ ಕಾನ್​ಸ್ಟೇಬಲ್​ ಬಳಿ ಅವರನ್ನು ನಿಂದಿಸಿದ್ದಾರೆ. ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎನ್ನಲಾಗಿದೆ. 
ವಿಡಿಯೋ ವೈರಲ್

ಘಟನೆ ಬಳಿಕ ಮಂಜುನಾಥ್​ ಅಲಿಯಾಸ್​ ಗೊಟ್ಟಿಗೆರೆ ಮಂಜಣ್ಣ​ ಅವರು ಹಿರಿಯ ಪೊಲೀಸ್​ ಅಧಿಕಾರಿಗೆ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಅವರು ಮಾತನಾಡುತ್ತಲೇ ಪೊಲೀಸ್​​ಗೆ ಕಂಡ  ಒದೆಯಲು ಯತ್ನಿಸಿರುವ ದೃಶ್ಯ ಮೊಬೈಲ್​ ವಿಡಿಯೋ ಕ್ಯಾಮೇರಾದಲ್ಲಿ  ಸರೆಯಾಗಿದೆ. ಈ ವೇಳೆ ಸ್ಥಳದಲ್ಲಿದ್ದ ಜನರು ಹಾಗೂ ಪೊಲೀಸರು  ಮಧ್ಯಪ್ರವೇಶಿಸಿ ಕಲಹ ತಿಳಿಗೊಳಿಸಿದರು.
ದೂರು ದಾಖಲು
ಸದ್ಯ ಹುಳಿಮಾವು ಪೊಲೀಸ್​ ಠಾಣೆಯಲ್ಲಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಾಗೂ ಹಲ್ಲೆ ಯತ್ನದ ಆರೋಪದಡಿ ಕೇಸ್​ ದಾಖಲಾಗಿದೆ.  ಆ ದಿನ ಏನಾಯ್ತು, ಗಲಾಟೆ ಶುರುವಾಗಿದ್ದು ಹೇಗೆ, ಯಾರ ತಪ್ಪಿದೆ ಎನ್ನುವ ಬಗ್ಗೆ ಸಂಪೂರ್ಣ ತನಿಖೆ ನಡೆಯುತ್ತಿದೆ ಎನ್ನುವ ಬಗ್ಗೆ ಪೂರ್ವ ಜಂಟಿ ಪೊಲೀಸ್​ ಆಯುಕ್ತ ರಮೇಶ್​ ಬಾನೋತ್​ ಮಾಹಿತಿ ಹಂಚಿಕೊಂಡಿದ್ದಾರೆ.

ಜೆಡಿಎಸ್​​​(ಜನತಾ ದಳ) ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಜುನಾಥ್​ ಅಲಿಯಾಸ್​ ಗೊಟ್ಟಿಗೆರೆ ಮಂಜಣ್ಣ ಅವರನ್ನು ಹುಳಿಮಾವು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಸದ್ಯ ವಿಚಾರಣೆ ನಡೆಸಲಾಗುತ್ತಿದೆ ಎನ್ನಲಾಗಿದೆ, (ಏಜೆನ್ಸೀಸ್).