JCB driver commits suicide
ಚಿಕ್ಕಬಳ್ಳಾಪುರ: ತಾಲೂಕಿನ ಚಿಕ್ಕ ಅರೂರಿನಲ್ಲಿರುವ ಇಟ್ಟಿಗೆಯ ಫ್ಯಾಕ್ಟರಿಯಲ್ಲಿ ಜೆಸಿಬಿ ಚಾಲಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಾಗೇಪಲ್ಲಿ ತಾಲೂಕಿನ ಸೂರಪ್ಪಲ್ಲಿಯ ವೇಣು(21) ಮೃತ. ಕೆಲಸದ ಸ್ಥಳದಲ್ಲಿನ ಕೊಠಡಿಯೊಳಗೆ ನೇಣು ಬಿಗಿದುಕೊಂಡಿದ್ದಾನೆ.
ಮೃತನ ಸಾವಿಗೆ ಪ್ರೀತಿ&ಪ್ರೇಮ ವಿಚಾರದಲ್ಲಿನ ಕಲಹವೇ ಕಾರಣ ಎನ್ನುವುದು ಪ್ರಾಥಮಿಕ ಮೂಲಗಳಿಂದ ತಿಳಿದು ಬಂದಿದೆ. ಪೆರೇಸಂದ್ರ ಠಾಣೆಯ ಪೊಲೀಸರು ಪ್ರಕರಣ ದಾಖಲಾಗಿದೆ.