ಚಿತ್ರ ೦೫ ಕೆ.ಎಲ್.ಆರ್. ೦೩ : ಜನ್ನಘಟ್ಟ ಗ್ರಾಮಪಂಚಾಯ್ತಿ ಕಟ್ಟಡ ಚಿತ್ರ
ಕೋಲಾರ ತಾಲ್ಲೂಕು ಸುಗಟೂರು ಹೋಬಳಿಯ ಜನ್ನಘಟ್ಟ ಗ್ರಾಮಪಂಚಾಯ್ತಿ ಕಾರ್ಯಾಲಯ ಶಿಥಿಲಗೊಂಡಿದ್ದು, ಹಳೆಯ ಕಟ್ಟಡದಲ್ಲಿಯೇ ಈಗಲೂ ಮುಂದುವರೆದಿದ್ದು, ಮೂಲಭೂತ ಸೌಲಭ್ಯಗಳು ಇಲ್ಲದೆ ಇರುವುದರಿಂದ ಕಛೇರಿಯ ಸಿಬ್ಬಂದಿ ಮತ್ತು ಸಾರ್ವಜನಿಕರು ಸಮಸ್ಯೆಗಳನ್ನು ಎದುರಿಸುವಂತೆ ಆಗಿದೆ.
೩೫ ರಿಂದ ೪೦ ವರ್ಷಗಳ ಹಿಂದೆ ೩೮*೪೦ ಅಡಿಗಳ ವಿಸ್ತೀರ್ಣದಲ್ಲಿ ನಿರ್ಮಿಸಿರುವ ಈ ಕಟ್ಟಡದಲ್ಲಿಯೇ ಗ್ರಾಮಪಂಚಾಯ್ತಿ ಕಾರ್ಯಾಲಯ, ಅಂಗನವಾಡಿ ಮತ್ತು ಗ್ರಂಥಾಲಯವು ಇದ್ದು, ಮೂರು ಕಛೇರಿಗಳಿಗೂ ಶೌಚಾಲಯವಿಲ್ಲದೆ ಮಹಿಳಾ ಸಿಬ್ಬಂದಿ ಪ್ರತಿದಿನ ಶೌಚಕ್ಕಾಗಿ ಅಕ್ಕಪಕ್ಕದ ಮನೆಗಳನ್ನು ಆಶ್ರಯಿಸುವಂತಾಗಿದೆ.
ಹೆಸರಿಗೆ ಗ್ರಾಮಪಂಚಾಯ್ತಿ ಕಟ್ಟಡವಾಗಿದ್ದರು ಅಧ್ಯಕ್ಷರಿಗೆ, ಉಪಾಧ್ಯಕ್ಷರಿಗೆ, ಅಭಿವೃದ್ದಿ ಅಧಿಕಾರಿಗಳಿಗೆ ಮತ್ತು ಕಾರ್ಯದರ್ಶಿಗೆ ಪ್ರತ್ಯೇಕ ಕೊಠಡಿಗಳಿಲ್ಲ. ಹಾಗೂ ಕಂಪ್ಯೂಟರ್ ಕೊಠಡಿಯೂ ಇಲ್ಲದೆ ಒಂದೇ ಹಾಲಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇದೇ ಕಟ್ಟಡದಲ್ಲಿ ಅಂಗನವಾಡಿ ಕೇಂದ್ರ ಮತ್ತು ಲೈಬ್ರರಿ ಶಾಖೆಯೂ ಇದೆ. ಗ್ರಾಮಪಂಚಾಯ್ತಿಗೆ ಪಿಡಿಓ ಯಿಂದ ಹಿಡಿದು ಕಂಪ್ಯೂಟರ್ ಶಾಖೆ ತನಕ ಮಹಿಳಾ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದು, ಶೌಚಾಲಯಕ್ಕಾಗಿ ಪರದಾಡುವಂತಾಗಿದೆ.
ಈ ಗ್ರಾಮಪಂಚಾಯ್ತಿ ಕೇಂದ್ರಕ್ಕೆ ೮ ಗ್ರಾಮಗಳು ಸೇರ್ಪಡೆಗೊಂಡಿದ್ದು, ಗ್ರಾಮಪಂಚಾಯ್ತಿ ಕಛೇರಿಗೆ ಬರುವ ಸಾರ್ವಜನಿಕರಿಗೆ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಇಲ್ಲ. ನಿಂತುಕೊAಡೇ ಸಿಬ್ಬಂದಿಯ ಬಳಿ ವ್ಯವಹಾರ ಮಾಡಿ ಹೊರಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಇರುವ ಕಟ್ಟಡ ಶಿಥಿಲಗೊಂಡಿದ್ದು, ಮಳೆ ಬಂದರೆ ಸೋರುತ್ತಿದ್ದು, ಗ್ರಂಥಾಲಯದಲ್ಲಿರುವ ಪುಸ್ತಕಗಳು ಮತ್ತು ಗ್ರಾಮಪಂಚಾಯ್ತಿ ಕಾರ್ಯಾಲಯದಲ್ಲಿರುವ ಕಡತಗಳಿಗೆ ಕಂಟಕ ಎದುರಾಗಿದೆ. ಕಟ್ಟಡ ಶಿಥಿಲಗೊಂಡಿರುವುದರಿAದ ಅಂಗನವಾಡಿ ಕೇಂದ್ರಕ್ಕೆ ಬರುವ ಮಕ್ಕಳ ಮೇಲೆ ಇಲ್ಲಿ ಮೇಲ್ಛಾವಣಿಯ ಪದರಗಳು ಉದುರುತ್ತವೆಯೋ ಎಂಬ ಭೀತಿ ಎದುರಾಗಿದೆ.
ಈ ಬಗ್ಗೆ ನೂತನ ಕಟ್ಟಡ ನಿರ್ಮಾಣಕ್ಕೆ ಸರ್ಕಾರಿ ಜಾಗ ಮಂಜೂರಾತಿ ಮಾಡಬೇಕೆಂದು ಪಂಚಾಯ್ತಿ ಅಧಿಕಾರಿಗಳು ಮತ್ತು ಆಡಳಿತ ಮಂಡಳಿಯವರು ತಹಶೀಲ್ದಾರ್‌ವರಿಗೆ ದೂರು ನೀಡಿದ್ದರೂ ಪಂಚಾಯ್ತಿಗೆ ಸರ್ಕಾರಿ ಜಾಗ ಮಂಜೂರು ಮಾಡಿಲ್ಲ. ಆದ್ದರಿಂದ ನೂತನ ಕಟ್ಟಡ ನಿರ್ಮಾಣ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಆಡಳಿತ ಮಂಡಳಿ ಮತ್ತು ಅಭಿವೃದ್ದಿ ಅಧಿಕಾರಿಗಳು ಹೇಳುತ್ತಿದ್ದಾರೆ.
ಗ್ರಾಮಪಂಚಾಯ್ತಿ ಕಾರ್ಯಾಲಯದ ಕಟ್ಟಡ ಹಳೆಯದಾಗಿದ್ದು, ಗಾಳಿ, ಬೆಳಕು ಬರುತ್ತಿಲ್ಲ. ಕನಿಷ್ಟ ಶೌಚಾಲಯದ ಸೌಲಭ್ಯವೂ ಇಲ್ಲ. ಮಹಿಳಾ ಸಿಬ್ಬಂದಿಗೆ ತೊಂದರೆಯಾಗುತ್ತಿದೆ. ಕೋಲಾರ ತಹಶೀಲ್ದಾರ್ ರವರಿಗೆ ಜಾಗ ಮಂಜೂರಾತಿಗಾಗಿ ಮನವಿ ಸಲ್ಲಿಸಲಾಗಿದೆ. ಇದುವರೆವಿಗೂ ಗ್ರಾಮಪಂಚಾಯ್ತಿ ಜಾಗ ಮಂಜೂರು ಮಾಡಿಕೊಡದೆ ಕಂದಾಯ ಇಲಾಖೆಯಿಂದ ಸಾಧ್ಯವಾಗಿಲ್ಲ. ಗ್ರಾಮದ ಬಳಿ ಇರುವ ಸರ್ವೇ ನಂ.೨೩೮ರಲ್ಲಿ ೬೮ ಎಕರೆ ಗೋಮಾಳ ಜಮೀನು ಇದೆ. ೫ ಎಕೆರೆ ಜಮೀನು ಮಂಜೂರು ಮಾಡಿಕೊಡಿ ಎಂದು ಮನವಿ ಸಲ್ಲಿಸಲಾಗಿದೆ. ಜಾಗ ಮಂಜೂರು ಮಾಡಿದರೆ ಎನ್.ಆರ್.ಯು.ಜಿ ಯೋಜನೆ ಸೇರಿದಂತೆ ಇತರೆ ಯೋಜನೆಗಳನ್ನು ಬಳಸಿಕೊಂಡು ನೂತನ ಕಟ್ಟಡ ನಿರ್ಮಾಣ ಮಾಡಲು ಸಿದ್ಧರಿದ್ದೇವೆ.
-ಆರ್.ಚಲಪತಿ, ಗ್ರಾಮಪಂಚಾಯ್ತಿ ಉಪಾಧ್ಯಕ್ಷರು, ಜನ್ನಘಟ್ಟ.