janaspandane-prevents-the-menace-of-middlemen
ಹುಳಿಯಾರು: ಎಲ್ಲ ಸರ್ಕಾರಿ ಇಲಾಖೆಗಳ ಅಧಿಕಾರಿಗಳೊಂದಿಗೆ ಜನಪ್ರತಿನಿಧಿಗಳು ಗ್ರಾಮಗಳಿಗೆ ಭೇಟಿ ನೀಡುವುದರಿಂದ ಅಲ್ಲಿನ ಸಮಸ್ಯೆಗಳ ಬಗ್ಗೆ ಗಮನ ಹರಿಸಿ ನಿವಾರಣೆ ಮಾಡಬಹುದು ಎಂದು ಶಾಸಕ ಸಿ.ಬಿ.ಸುರೇಶ್ಬಾಬು ತಿಳಿಸಿದರು.
ಹಂದನಕೆರೆ ಹೋಬಳಿಯ ಚೌಳಕಟ್ಟೆ ಗ್ರಾಪಂ ವ್ಯಾಪ್ತಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 22ನೇ ವಾರದ ಮನೆಬಾಗಿಲಿಗೆ ಮನೆಮಗ ಕಾರ್ಯಕ್ರಮದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಕಾರ್ಯಕ್ರಮದ ಮೂಲಕ ಸಾರ್ವಜನಿಕರು ವೈಯಕ್ತಿಕ ಇಲ್ಲವೇ ಸಾಮಾಜಿಕ ಸಮಸ್ಯೆಗಳ ಬಗ್ಗೆ ಅರ್ಜಿಗಳನ್ನು ನೀಡಬಹುದು. ಈ ಸಮಸ್ಯೆಗಳನ್ನು ಸಾಧ್ಯವಾದರೆ ಇಲ್ಲೇ ಬಗೆಹರಿಸಲಾಗುವುದು ಎಂದರು.
ಜನಸ್ಪಂದನಾ ಕಾರ್ಯಕ್ರಮವನ್ನು ಸಾರ್ವಜನಿಕರು ಬಳಸಿಕೊಳ್ಳುವ ಮೂಲಕ ಲಂಚ, ಮಧ್ಯವರ್ತಿಗಳ ಹಾವಳಿಗಳಿಂದ ದೂರವಾಗಬೇಕಿದೆ. ಶಿಕ್ಷಕರಿಗೆ ಒಂದು ಗ್ರಾಮವನ್ನೇ ಬದಲಾಯಿಸುವ ಶಕ್ತಿ ಇರುತ್ತದೆ. ಪ್ರತಿ ಗ್ರಾಮದಲ್ಲಿರುವ ಶಿಕ್ಷಕರು ಆ ಗ್ರಾಮದಲ್ಲಿನ ಸಮಸ್ಯೆಗಳ ಬಗ್ಗೆ ಗಮನ ಹರಿಸಿ ಪರಿಹಾರಕ್ಕೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ಇಒ ದೊಡ್ಡಸಿದ್ದಯ್ಯ ಮಾತನಾಡಿ, ರಾಜ್ಯದಲ್ಲೇ ಯಾವುದೇ ಶಾಸಕರು ಮಾಡದಿರುವ ಕೆಲಸವನ್ನು ಈ ೇತ್ರದ ಶಾಸಕರು ಮಾಡುತ್ತಿದ್ದು, ಇದರಿಂದ ಆ ಗ್ರಾಮದಲ್ಲಿ ಕೆಲವು ಸಮಸ್ಯೆಗಳು ಬಗೆಹರಿಯುತ್ತವೆ. ನಿಮ್ಮ ವೈಯಕ್ತಿಕ ಸಮಸ್ಯೆಗಳಿಗೆ ಹಾಗೂ ಸಾಮಾಜಿಕ ಸಮಸ್ಯೆಗಳಿಗೆ ಲಿಖಿತದಲ್ಲಿ ಮನವಿ ಸಲ್ಲಿಸಿ, ಅರ್ಜಿಯಲ್ಲಿ ನಿಮ್ಮ ಮೊಬೈಲ್ ಸಂಖ್ಯೆ ನೋಂದಾಯಿಸಿ. ಈ ಮೂಲಕ ನಿಮ್ಮ ಅರ್ಜಿಗಳ ವಿಲೇವಾರಿಯ ಬಗ್ಗೆ ಮಾಹಿತಿ ನೀಡಲಾಗುವುದು ಎಂದರು.
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಶಿವರಾಜ್ಕುಮಾರ್ ಮಾತನಾಡಿ, ಕೃಷಿ ಇಲಾಖೆಯಿಂದ ಲಕ್ಷಿ$್ಮಪುರ ಗ್ರಾಮಕ್ಕೆ ಉಚಿತ ಬಿತ್ತನೆಬೀಜ ನೀಡಿದ್ದೇವೆ. 7,200 ಜನರಿಗೆ ತುಂತುರು ನೀರಾವರಿ ಸೌಲಭ್ಯಗಳನ್ನು ನೀಡಲಾಗಿದೆ. ಈ ಹಿಂದೆಲ್ಲ 2 ಎಕರೆ ಮೇಲೆ ಜಮೀನಿದ್ದವರಿಗೆ ನೀಡಲಾಗುತ್ತಿತ್ತು. ಅದರೆ ಈಗ ಅರ್ಧ ಎಕರೆ ಜಮೀನಿದ್ದವರಿಗೂ ಈ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಇನ್ನು ಇದರೊಂದಿಗೆ ಗೊಬ್ಬರ, ಕೀಟನಾಶಕಗಳು ಸೇ ಅನೇಕ ಸೌಲಭ್ಯಗಳನ್ನು ಇಲಾಖೆಯಿಂದ ರೈತರಿಗೆ ನೀಡಲಾಗುತ್ತಿದೆ ಎಂದರು.