Janapada loka 
ರಾಜ್ಯ

ವಿದ್ಯಾರ್ಥಿ ಜಾನಪದ ಲೋಕೋತ್ಸವ

ಪಂಕಜ ಕೆ.ಎಂ.

ಪ್ರಮುಖ ಮುಖ್ಯಾಂಶಗಳು

  • * ಯುವ ಜನರನ್ನು ಮರಳಿ ಜಾನಪದಕ್ಕೆ ಸೆಳೆಯುವ ಆಶಯ
ಬೆಂಗಳೂರು: ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರದ ಬೆಂಗಳೂರು-ಮೈಸೂರು ಹಳೇ ಹೆದ್ದಾರಿಯಲ್ಲಿರುವ ಜಾನಪದ ಲೋಕದಲ್ಲಿ ಫೆ.7 ಮತ್ತು 8ರಂದು ಪ್ರತಿಷ್ಠಿತ ‘ವಿದ್ಯಾರ್ಥಿ ಜಾನಪದ ಲೋಕೋತ್ಸವ -2026’ ಹಮ್ಮಿಕೊಳ್ಳಲಾಗಿದೆ.
ಈ ಲೋಕೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿ ಜನಪದ ಕಲಾವಿದರೇ ಭಾಗವಹಿಸುತ್ತಿರುವುದು ವಿಶೇಷವಾಗಿದೆ. ಯುವ ಜನರನ್ನು ಮತ್ತೆ ಮರಳಿ ಜಾನಪದಕ್ಕೆ ಸೆಳೆಯುವ ಆಶಯದೊಂದಿಗೆ ಈ ವಿದ್ಯಾರ್ಥಿ ಜಾನಪದ ಲೋಕೋತ್ಸವ ಹಮ್ಮಿಕೊಳ್ಳಲಾಗಿದ್ದು, ನಾಡಿನ ನಾನಾ ಶಾಲಾ-ಕಾಲೇಜುಗಳ ಆಸಕ್ತ ವಿದ್ಯಾರ್ಥಿಗಳು ಜನಪದ ಕಲೆಗಳನ್ನೂ, ಜನಪದ ಗಾಯನವನ್ನೂ ಕಲಿತು ಪ್ರದರ್ಶನ ನೀಡಲಿದ್ದಾರೆ. ಅಂಥವರಿಗಾಗಿಯೇ ಈ ಲೋಕೋತ್ಸವವನ್ನು ಮುಡಿಪಾಗಿಡುವ ಮೂಲಕ, ಮತ್ತಷ್ಟು ವಿದ್ಯಾರ್ಥಿ ಸಮುದಾಯವನ್ನು ಆಕರ್ಷಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಜನಪದ ಲೋಕ ತಿಳಿಸಿದೆ.
ಇಂದಿನ ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವು ಜನಪ್ರಿಯ ಕಾರ್ಯಕ್ರಮಗಳಲ್ಲಿ ಕಳೆದು ಹೋಗುತ್ತಿರುವ ಯುವ ಸಮುದಾಯದ ಮನಸ್ಸುಗಳನ್ನು ಮತ್ತೆ ಪರಂಪರೆಯ ಮೌಲ್ಯಯುತ ಆಲೋಚನೆಗೆ ಹಚ್ಚುವ ಕಾರ್ಯ ಆಗಬೇಕಾಗಿದೆ. ಈ ದೃಷ್ಟಿಯಿಂದ ವಿದ್ಯಾರ್ಥಿ ಜಾನಪದ ಲೋಕೋತ್ಸವ ಮಹತ್ವ ಪಡೆದಿದೆ.