ಯಾದಗಿರಿಯಲ್ಲಿ ಸೋಮವಾರ ಜನಜಾತಿ ಗೌರವ ಉತ್ಸವ&2026ರ ಕರಪತ್ರವನ್ನು ಜಿಪಂ ಸಿಇಒ ಲವೀಶ್​ ಒರ್ಡಿಯಾ, ಎಡಿಸಿ ರಮೇಶ ಕೋಲಾರ ಬಿಡುಗಡೆ ಮಾಡಿದರು. ವಿವಿಧ ಇಲಾಖೆಗಳ ಅಧಿಕಾರಿಗಳಾದ ಕುಮಲಯ್ಯ, ಸಿ.ಎಸ್​.ಮುದೋಳ, ಸಿದ್ದಣ್ಣ ಅಣಬಿ ಇತರರಿದ್ದರು. 
ರಾಜ್ಯ

ಜನಜಾತಿ ಗೌರವ ಉತ್ಸವ-2026ಕ್ಕೆ ಅದ್ದೂರಿ ಚಾಲನೆ

ಯಾದಗಿರಿ: ಜನ ಜಾತಿ ಗೌರವ ಉತ್ಸವ-2026ಕ್ಕೆ ಸೋಮವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಚಾಲನೆ ನೀಡಲಾಯಿತು.
ಜಿಪಂ ಸಿಇಒ ಲವೀಶ್​ ಒರ್ಡಿಯಾ, ಅಪರ್​ ಜಿಲ್ಲಾಧಿಕಾರಿ ರಮೇಶ ಕೋಲಾರ, ಮುಖ್ಯ ಯೋಜನಾಧಿಕಾರಿ ಕುಮಲಯ್ಯ ಹಾಗೂ 17 ಜಿಲ್ಲಾ ಮಟ್ಟದ ಅನುಷ್ಠಾನ ಅಧಿಕಾರಿಗಳ ಸಹಯೋಗದಲ್ಲಿ ಪಿಎಂ&ಜನಮನ ಮತ್ತು ಡಿಎ&ಜೆಗುಯುಎ ಯೋಜನೆಯಡಿ ಸಬ್​ಸೇ ದೂರ, ಸಬ್​ಸೇ ಪೈಲೆ ಅಭಿಯಾನದ ಭಾಗವಾಗಿ ಕರಪತ್ರವನ್ನು ಬಿಡುಗಡೆ ಮಾಡುವ ಮೂಲಕ ಇಂದು ಅಧಿಕೃತ ಚಾಲನೆ ನೀಡಲಾಯಿತು. ಪರಿಶಿಷ್ಟ ಪಂಗಡ ಸಮುದಾಯದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದಿಂದ ಸಿಗಬೇಕಾದ ಮೂಲಭೂತ ಸೌಲಭ್ಯ ತಲುಪಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ. ಎಲ್ಲ ಬುಡಕಟ್ಟು ಸಮುದಾಯದವರು ಈ ಅಭಿಯಾನದ ಪ್ರಯೋಜನ ಪಡೆದು ತಮ್ಮ ಕುಂದು ಕೊರತೆಗಳನ್ನು ಬಗೆಹರಿಸಿಕೊಳ್ಳಲು ಇದೊಂದು ಮುಖ್ಯ ವೇದಿಕೆಯಾಗಲಿದೆ ಎಂದು ಜಿಪಂ ಸಿಇಒ ಲವೀಶ್​ ಒರ್ಡಿಯಾ ಅವರು ಈ ವೇಳೆ ಹೇಳಿದರು. ಡಿಡಿಪಿಐ ಸಿ.ಎಸ್​.ಮುದೋಳ, ಸಿದ್ದಣ್ಣ ಅಣಬಿ, ಡಿಎಚ್​ಒ ಡಾ.ಮಹೇಶ ಬಿರಾದಾರ ಇತರರಿದ್ದರು.