Jambusavari performed at Kalpotsava 
ರಾಜ್ಯ

ಕಲ್ಪೋತ್ಸವದಲ್ಲಿ ಮೇಳೈಸಿದ ಜಂಬೂಸವಾರಿ

 ತಿಪಟೂರು: ನಗರದಲ್ಲಿ ಹಮ್ಮಿಕೊಂಡಿರುವ  ಕಲ್ಪೋತ್ಸವ&2025 ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಕನ್ನಡ ರಾಜ್ಯೋತ್ಸವದ ಅಂಗವಾಗಿ ಗುರುವಾರ ಬೆಳಗ್ಗೆ ನಾಡದೇವತೆಯ ಭಾವಚಿತ್ರವನ್ನು ಜಂಬೂಸವಾರಿಯಲ್ಲಿ ಕಲ್ಪತರು ಕ್ರೀಡಾಂಗಣಕ್ಕೆ ಕರೆತರಲಾಯಿತು.
ಬೆಳಗ್ಗೆ ಗ್ರಾಮದೇವತೆ ಶ್ರೀ ಕೆಂಪಮ್ಮ ದೇವಿ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮೂಲಕ ಜಂಬೂಸವಾರಿಗೆ ಚಾಲನೆ ನೀಡಲಾಯಿತು. ದೇವಾಲಯದಿಂದ ಹೊರಟ ಮೆರವಣಿಗೆ ಕೋಡಿಸರ್ಕಲ್​, ದೊಡ್ಡಪೇಟೆ ಮಾರ್ಗವಾಗಿ ಬಿ.ಎಚ್​. ರಸ್ತೆಯಲ್ಲಿ ಸಾಗಿ ಹಾಸನ ವೃತ್ತ ಬಳಸಿಕೊಂಡು ಕಲ್ಪತರು ಕ್ರೀಡಾಂಗಣ ತಲುಪಿತು. 
ನೊಣವಿನಕೆರೆ ಶ್ರೀ ಕಾಡಸಿದ್ದೇಶ್ವರಸ್ವಾಮಿ ಮಠದಿಂದ ಕರೆಸಲಾಗಿದ್ದ ಆನೆ ಲ್ಮ, ಜನಸಾಗರದ ನಡುವೆ ಗಾಂಭೀರ್ಯದಿಂದ ಹೆಜ್ಜೆ ಹಾಕಿ ಪ್ರಶಂಸೆಗೆ ಪಾತ್ರವಾಯಿತು.
ಮೆರವಣಿಗೆಯಲ್ಲಿ ಪುರದ ಬಸವೇಶ್ವರ ಬೆಳ್ಳಿರಥದ ಉತ್ಸವ, ನಂದಿ ಧ್ವಜಕುಣಿತ, ಲಿಂಗದ ವೀರರ ಕುಣಿತ, ನಾಸಿಕ್​ ಡೋಲ್​, ಡೊಳ್ಳುಕುಣಿತ, ತಮಟೆವಾದ್ಯ, ಚಿಟ್ಟೆಮೇಳ, ಎತ್ತು ಮತ್ತು  ಕುದುರೆಗಳು ಸೇರಿದಂತೆ ಸಾಂಸತಿಕ ಕಲಾತಂಡಗಳು ಮೆರವಣಿಗೆಯ ಮೆರುಗು ಹೆಚ್ಚಿಸಿದ್ದವು. ಪೂರ್ಣಕುಂಭ ಹೊತ್ತ ಮಹಿಳೆಯರು ಹಾಗೂ ಸಾಂಪ್ರದಾಯಿಕ ಪೇಟಧರಿಸಿದ ಯುವತಿಯರು ಮೆರವಣಿಗೆಯಲ್ಲಿ  ಗಮನ ಸೆಳೆದರು.
 ಉಪವಿಭಾಗಾಧಿಕಾರಿ ಬಿ.ಕೆ. ಸಪ್ತಶ್ರೀ, ನಗರಾಯುಕ್ತ ವಿಶ್ವೇಶ್ವರ ಬದರಗಡೆ, ತಹಸೀಲ್ದಾರ್​ ಜಿ.ವಿ.ಮೋಹನ್​ಕುಮಾರ್​, ಗ್ರೇಡ್​&2 ತಹಸೀಲ್ದಾರ್​ ಎಸ್​.ಕೆ. ಜಗನ್ನಾಥ್​, ಡಿವೈಎಸ್​ಪಿ ಜಯಲ್ಮ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಇತರರು ಇದ್ದರು.