ಬಾಗಲಕೋಟೆ ಜಿಲ್ಲೆ ಜಮಖಂಡಿ ಹೊರ ವಲಯದ ಉಪ ಕಾರಾಗೃಹದಲ್ಲಿ ಭಾನುವಾರ ಸಂಜೆ ನಡೆದ ಗಲಾಟೆ ಬಿಡಿಸಲು ಹೋಗಿದ್ದ ಅಽಕ್ಷಿಕ ವಿ.ಡಿ.ಕುಂಬಾರ ಮೇಲೆ ವಿಚಾರಣಾಽÃನ ಬಂಽಗಳು ನಡೆಸಿದ ಹಲ್ಲೆಯಿಂದ ಎಡಗೈ ಮೂಳೆ ಮುರಿದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದು. 
ರಾಜ್ಯ

ಖೈದಿಗಳಿಂದ ಜೈಲರ್ ಮೇಲೆ ಹಲ್ಲೆ

ಸಂತೋಷ ದೇಶಪಾಂಡೆ
ಬಾಗಲಕೋಟೆ:
ಉಪ ಕಾರಾಗೃಹದಲ್ಲಿ ಇರುವ ವಿಚಾರಣಾಽಧಿನ ಖೈದಿಗಳಿಂದ ಜೈಲರ್ ಮೇಲೆಯೇ ಹಲ್ಲೆ ನಡೆಸಿದ್ದು, ಘಟನೆಯಲ್ಲಿ ಅಧಿಕಾರಿಯ ಎಡಗೈ ಮುರಿದಿರುವ ಪ್ರಕರಣ ಜಮಖಂಡಿ ನಗರದ ಹೊರವಲಯದಲ್ಲಿ ಇರುವ ಸಬ್ ಜೈಲಿನಲ್ಲಿ ಭಾನುವಾರ ಸಂಜೆ ನಡೆದಿದೆ.
ಜಮಖಂಡಿ ಉಪ ಕಾರಾಗೃಹದ ಜೈಲರ್ ವಿ.ಡಿ.ಕುಂಬಾರ ಎನ್ನುವವರ ಮೇಲೆ ನಾಲ್ವರು ಆರೋಪಿಗಳು ಕೈಗಳಿಂದ ಹೊಡೆದು ಹಲ್ಲೆ ಮಾಡಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ಜಮಖಂಡಿ ಸಿಪಿಐ ಅವರು ಭೇಟಿ ನೀಡಿ ಪರಿಶೀಲಿಸಿದ್ದು, ಜಮಖಂಡಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಬಗ್ಗೆ ತನಿಖೆ ನಡೆಸಲಾಗುತ್ತದೆ. ಸದ್ಯ ಅಲ್ಲಿ ನಡೆದಿರುವ ಪ್ರಕರಣದ ಬಗ್ಗೆ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸುವುದಾಗಿ ಹೇಳಿದ್ದಾರೆ.
ಏನಿದು ಘಟನೆ:
ಜಮಖಂಡಿ ಉಪ ಕಾರಾಗೃಹದಲ್ಲಿ ಇರುವ ವಿಚಾರಣಾಧಿನ ಖೈದಿಗಳ ನಡುವೆ ಭಾನುವಾರ ಸಂಜೆ ಬೀಗ ಮುದ್ರೆ ಮಾಡುವ ವೇಳೆ ಎರಡು ಕಡೆಯವರ ನಡುವೆ ಮಾತಿನ ಚಕುಮಕಿ ನಡೆದು, ಅದು ತಾರಕಕ್ಕೆ ಹೋಗಿ ನಾಲ್ವರು ಸೇರಿಕೊಂಡು ಇನ್ನಿಬ್ಬರ ಮೇಲೆ ಹಲ್ಲೆ ಮಾಡಿದ್ದಾರೆ. ಆಗ ಉಪಕಾರಾಗೃಹದ ಅಽಕ್ಷಿಕ ವಿ.ಡಿ.ಕುಂಬಾರ ಅವರು ಜಗಳ ಬಿಡಿಸಲು ಮುಂದಾಗಿ, ಹೊಡೆಯುತ್ತಿದ್ದವರನ್ನು ಹಿಡಿದುಕೊಂಡಿದ್ದಾರೆ. ಆಗ ಗಲಾಟೆ ನಿಲ್ಲಿಸಿದ ಆರೋಪಿಗಳು ತಮ್ಮನ್ನು ಹಿಡಿದುಕೊಂಡಿದ್ದ ಅಽಕಾರಿಗೂ ಹೊಡೆದಿದ್ದಾರೆ. ಇದರಿಂದ ಅವರ ಎಡಗೈ ಮೂಳೆ ಮುರಿದಿದ್ದು, ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡೆಸಿದ್ದಾರೆ. ಸದ್ಯ ಅವರು ಸುಧಾರಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಧಿಕಾರಿ ಮೇಲೆ ಹಲ್ಲೆ ಮಾಡಿರುವ ನಾಲ್ವರು ಆರೋಪಿಗಳಾದ ಜಾಕೀರಹುಸೇನ್ ಮಕಾಂದಾರ, ಮಕಾಂದಾರ, ಸಚಿನ್ ನಾಯ್ಕೋಡಿ ಮತ್ತು ಅರ್ಪಾತ್ ತಾಳಿಕೋಟೆ ಎಂಬುವವರು ಸೇರಿಕೊಂಡು ಜೈಲಿನಲ್ಲಿ ಇರುವ ವಿಚಾರಣಾಧಿನ ಬಂಧಿಗಳಾದ ಪ್ರವೀಣ ಮ್ಯಾಗೇರಿ ಮತ್ತು ದುರ್ಗಪ್ಪ ವಾಲ್ಮೀಕಿ ಮೇಲೆ ಹಲ್ಲೆ ಮಾಡುತ್ತಿದ್ದರು. ಆಗ ಇವರ ನಡುವಿನ ಗಲಾಟೆ ಬಿಡಿಸಲು ಹೋಗಿದ್ದ ಅಽಕಾರಿಗೆ ಹೊಡೆದು ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆಂದು ಕುಂಬಾರ ಅವರು ದೂರಿನಲ್ಲಿ ತಿಳಿಸಿದ್ದಾರೆ.