ಯಾದಗಿರಿ ನಗರದ ವೈದ್ಯಕಿಯ ವಿಜ್ಞಾ ನ ಸಂಸ್ಥೆಯಲ್ಲಿ ಮಂಗಳವಾರ ಹಮ್ಮಿಕೊಂಡ ಎಂಟಿಪಿ ಕಾಯ್ದೆ-2021 ಕುರಿತು ತರಬೇತಿ ಕಾರ್ಯಾಗಾರವನ್ನು ಜಿಪಂ ಸಿಇಒ ಲವೀಶ್ ಒರ್ಡಿಯಾ ಉದ್ಘಾಟಿಸಿದರು. ಡಾ.ಸಂದೀಪ, ಡಾ.ಮಲಪ್ಪ ಕೆ, ಡಾ.ಉಷಾ, ಡಾ.ಶಿವುಕುಮಾರ, ಡಾ.ಪೂಜಾ ಇತರರಿದ್ದರು.
- ಜಿಪಂ ಸಿಇಒ ಲವೀಶ್ ಎಚ್ಚರಿಕೆ
- ಅರಿವು ಮೂಡಿಸುವ ಕಾರ್ಯಗಾರ
ಯಾದಗಿರಿ: ಖಾಸಗಿ ಆಸ್ಪತ್ರೆಗಳಲ್ಲಿ 24 ವಾರಗಳಿಗಿಂತ ಹೆಚ್ಚು ದಿನ ತುಂಬಿರುವ ಗರ್ಭಿಣಿಯರ ಗರ್ಭಪಾತ ಮಾಡಿಸಲು ಕಡ್ಡಾಯವಾಗಿ ಜಿಲ್ಲೆಯ ವೈದ್ಯಕಿಯ ಮಂಡಳಿಯಿಂದ ಅನುಮತಿ ಪಡೆಯಬೇಕು. ತಪ್ಪಿದರೆ ಎಂಟಿಪಿ ಕಾಯ್ದೆ&2021ರ ಉಲಂನೆಯಾಗಿ ಜೈಲು ಶಿಕ್ಷೆಯಾಗಲಿದೆ ಎಂದು ಜಿಪಂ ಸಿಇಒ ಲವೀಶ್ ಒರ್ಡಿಯಾ ಎಚ್ಚರಿಕೆ ನೀಡಿದರು.
ನಗರದ ವೈದ್ಯಕಿಯ ವಿಾನ ಸಂಸ್ಥೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಆರೋಗ್ಯ ಮಿಷನ್, ಯೀಮ್ಸ ಹಾಗೂ ಐಪಿಎಎಸ್ ಬೆಂಗಳೂರು ತಾಂತ್ರಿಕ ಸಂಸ್ಥೆ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡ ಎಂಟಿಪಿ ಕಾಯ್ದೆ&2021 ಕುರಿತು ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಎಂಟಿಪಿ ಕಾಯ್ದೆ &2021ರ ಉಲ್ಲಂನೆಯಾದಲ್ಲಿ ಜೈಲು ಶಿೆ ವಿಧಿಸಲಾಗುತ್ತದೆ. ಹಾಗೂ ಸಂಬಂದಪಟ್ಟ ಆಸ್ಪತ್ರೆಯ ನೊಂದಣಿ ಶಾಶ್ವತವಾಗಿ ರದ್ದು ಪಡಿಸಲಾಗುತ್ತದೆ. ಖಾಸಗಿ ಆಸ್ಪತ್ರೆಯವರು ಯಾವುದೇ ಕಾರಣಕ್ಕೂ ಭ್ರೂಣ ಲಿಂಗ ಪತ್ತೆ ಪಿಸಿಪಿಎನ್ಡಿಟಿ ಕಾಯ್ದೆ ಉಲಂನೆ ಮಾಡುವಂತಿಲ್ಲ ಎಂದು ಹೇಳಿದರು.
ಡಿಎಚ್ಒ ಡಾ.ಮಹೇಶ ಬಿರಾದಾರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಾಗಾರದಲ್ಲಿ ಯೀಮ್ಸ್ ನಿರ್ದೇಶಕ ಡಾ.ಸಂದೀಪ, ಡಾ.ಮಲಪ್ಪ ಕೆ, ಡಾ.ಉಷಾ, ಡಾ.ಶಿವುಕುಮಾರ, ಪ್ರಾಧ್ಯಾಪಕಿ ಡಾ.ಪೂಜಾ,ದೊಡ್ಡಣ್ಣ ಗೌಡ, ಲಕ್ಷಿ$್ಮ ಮುಂಡಾಸ, ಮನೋಹರ ಪಾಟೀಲ್, ಶಂಕರಾನಂದ ಇತರರಿದ್ದರು. ತುಳಸಿರಾಮ ಚವಾಣ್ ವಂದಿಸಿದರು.
ಖಾಸಗಿ ಆಸ್ಪತ್ರೆಗಳ ಹಾಗೂ ಸರ್ಕಾರಿ ಆಸ್ಪತ್ರೆಯ ವೈದ್ಯರು ಜಿಲ್ಲೆಯಲ್ಲಿ ಸಂಭವಿಸುವ ಶಿಶು ಮರಣ ಮತ್ತು ನಿರ್ಜೀವ ಜನನಗಳ ಗರ್ಭಪಾತದ ಮಾಹಿತಿಯನ್ನು ಕಡ್ಡಾಯವಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸಲ್ಲಿಸಬೇಕು. ಈ ವರದಿಯಿಂದ ಶಿಶು ಮರಣ ತಾಯಿ ಮರಣ ತಡೆಗಟ್ಟಲು ಎಲ್ಲ ಹಂತಗಳಲ್ಲಿ ಕ್ರಮವಹಿಸಲು ಮೂಲಭೂತ ಸೌಕರ್ಯ ನೀಡಲು ಅನೂಕೂಲವಾಗುತ್ತದೆ. ತಾಯಿ ಮರಣ ಶಿಶು ಮರಣ, ನಿರ್ಜೀವ ಜನನಗಳ ಗರ್ಭಪಾತದ ವರದಿ ನೀಡದಿರುವ ಖಾಸಗಿ, ಸರ್ಕಾರಿ ಆಸ್ಪತ್ರೆಗಳ ಮುಖ್ಯಸ್ಥರ ವಿರುದ್ಧ ನಿರ್ದಾಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಸಿಇಒ ಲವೀಶ್ ಒರ್ಡಿಯಾ ಹೇಳಿದರು.