Jagjivan Ram, Ambedkar Jayanti on April 14
ಗೌರಿಬಿದನೂರು : ತಾಲೂಕು ಆಡಳಿತದಿಂದ ಏ.14ರಂದು ಡಾ.ಬಾಬು ಜಗಜೀವನ್ ರಾಮ್, ಅಂಬೇಡ್ಕರ್ ಜಯಂತಿ ಆಚರಿಸಲಾಗುವುದು ಎಂದು ತಹಸೀಲ್ದಾರ್ ಅರವಿಂದ್ ತಿಳಿಸಿದರು.
ತಾಲೂಕು ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಅಧಿಕಾರಿಗಳ ಮತ್ತು ದಲಿತ ಮುಖಂಡರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ದಲಿತ ಮುಖಂಡರು, ಸರ್ಕಾರಿ ಅಧಿಕಾರಿಗಳ ಜತೆಗೂಡಿ ಒಗ್ಗಟ್ಟಿನಿಂದ ಕೆಲಸ ಮಾಡಿ ಕಾರ್ಯಕ್ರಮ ಯಶಸ್ವಿಗೊಳಿಸಿ ಎಂದರು.
ದಲಿತ ಮುಖಂಡರು ನಗರದಲ್ಲಿ ಅಂಬೇಡ್ಕರ್ ವೃತ್ತದಲ್ಲಿ ಅವರ ಪುತ್ತಳಿ ನಿರ್ಮಿಸಿ ಜಯಂತಿ ಮಾಡಬೇಕೆಂದು ಒತ್ತಾಯಿಸಿದರು.
ಸಮಾಜ ಕಲ್ಯಾಣ ಅಧಿಕಾರಿ ಚೆನ್ನಪ್ಪ ಗೌಡ ಎಸ್ ನಾಯಕರ್, ದಲಿತ ಮುಖಂಡರಾದ ಎಂ.ಆರ್.ಸತ್ಯನಾರಾಯಣ, ಎಚ್.ಎನ್.ಸನಂದಕುಮಾರ್, ಟಿ.ಬಾಲಯ್ಯ, ಕಡಬೂರು ಅಶ್ವತಪ್ಪ, ಇಡುಗೂರು ಸೋಮಯ್ಯ, ವೈಟಿ ಪ್ರಸನ್ನ ಕುಮಾರ್, ಮಲ್ಲಸಂದ್ರ ಗಂಗಾಧರಪ್ಪ, ಕಲ್ಲಿನಾಯಕನಹಳ್ಳಿ ಮುನಿಯಪ್ಪ, ನಾಗಾರ್ಜುನ, ಕೃಷ್ಣಪ್ಪ ಇದ್ದರು.