ಶಾಸಕ ಎಸ್.ಟಿ.ಸೋಮಶೇಖರ್ ಅವರಿಗೆ ಜಗಜ್ಯೋತಿ ಬಸವೇಶ್ವರ ಪುತ್ಥಳಿಯನ್ನು ನೀಡಿ ಸನ್ಮಾನಿಸಲಾಯಿತು. ಸಿದ್ದಗಂಗೆ ಶ್ರೀಗಳು, ಆದಿಚುಂಚನಗಿರಿ ಶ್ರೀಗಳು, ಆರ್.ಬಿ.ಬಸವರಾಜ್ ಮತ್ತಿತರರಿದ್ದರು.  
ರಾಜ್ಯ

ಭಾರತ್‌ನಗರದಲ್ಲಿ ಜಗಜ್ಯೋತಿ ಬಸವೇಶ್ವರ ಜಯಂತಿ

ಪ್ರಮುಖ ಮುಖ್ಯಾಂಶಗಳು

  • ಭಾರತ್‌ನಗರದಲ್ಲಿ ಜಗಜ್ಯೋತಿ ಬಸವೇಶ್ವರ ಜಯಂತಿ
  • ಸಿದ್ದಗಂಗೆಯ ಶ್ರೀ ಶಿವಕುಮಾರ ಸ್ವಾಮೀಜಿ 119ನೇ ಜಯಂತಿ
  • ಆದಿಚುಂಚನಗಿರಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ 81ನೇ ಜಯಂತಿ

ಬೆಂಗಳೂರು:ಯಶವಂತಪುರವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವಹೇರೋಹಳ್ಳಿ ಸಮೀಪದ ಭಾರತ್ ನಗರದಲ್ಲಿಇತ್ತೀಚೆಗೆ ಜಗಜ್ಯೋತಿ ಬಸವೇಶ್ವರಜಯಂತಿ ಹಾಗೂ ಸಿದ್ದಗಂಗಾ ಶ್ರೀಶಿವಕುಮಾರ ಸ್ವಾಮೀಜಿಯವರ 119ನೇಜಯಂತಿ, ಆದಿಚುಂಚನಗಿರಿಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ81ನೇಜಯಂತಿ ಕಾರ್ಯಕ್ರಮವನ್ನುಅದ್ದೂರಿಯಾಗಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗಸ್ವಾಮೀಜಿ,ಆದಿಚುಂಚನಗಿರಿಶ್ರೀ ನಿರ್ಮಲಾನಂದನಾಥ ಸ್ವಾಮೀಜಿಸಾನ್ನಿಧ್ಯ ವಹಿಸಿದ್ದರು.ಸಮಾರಂಭದಲ್ಲಿಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯಪಿಯುಸಿ ಪರೀಕ್ಷೆಯಲ್ಲಿ ಅತಿಹೆಚ್ಚುಅಂಕ ಪಡೆದ ಸ್ಥಳೀಯ ಪ್ರತಿಭಾನ್ವಿತವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ನೀಡಿ ಗೌರವಿಸಲಾಯಿತು.

ಈಸಂದರ್ಭದಲ್ಲಿ ಆಶೀರ್ವಚನ ನೀಡಿದಶ್ರೀ ಸಿದ್ದಲಿಂಗ ಸ್ವಾಮೀಜಿ,ವಿದ್ಯಾರ್ಥಿಗಳುಕೇವಲ ಪಠ್ಯದಲ್ಲಿ ಉತ್ತಮ ಸಾಧನೆಮಾಡಿ ಪ್ರತಿಭಾನ್ವಿತರಾದರೆಸಾಲದು, ಮಾನವೀಯಮೌಲ್ಯಗಳನ್ನು ಬೆಳೆಸಿಕೊಂಡುಉತ್ತಮ ಆಚಾರ ವಿಚಾರಗಳನ್ನುಮೈಗೂಡಿಸಿಕೊಳ್ಳಬೇಕು ಎಂದುಕಿವಿಮಾತು ಹೇಳಿದರು.

ಶ್ರೀನಿರ್ಮಲಾನಂದನಾಥ ಸ್ವಾಮೀಜಿಮಾತನಾಡಿ, ಮಕ್ಕಳುಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿಉತ್ತಮ ಸಾಧನೆ ಮಾಡಿ ದೇಶದ ದೊಡ್ಡಶಕ್ತಿಯಾಗಿ ಬೆಳೆಯಬೇಕು ಎಂದುಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿಯಶವಂತಪುರ ಕ್ಷೇತ್ರದ ಶಾಸಕಎಸ್.ಟಿ.ಸೋಮಶೇಖರ್,ಸಮಸ್ತ ವೀರಶೈವಲಿಂಗವಂತ ಸಮಾಜದ ಅಧ್ಯಕ್ಷಆರ್.ವಿ.ಬಸವರಾಜ್ಮತ್ತಿತರರು ಉಪಸ್ಥಿತರಿದ್ದರು.