ನೂತನ ಸಿಪಿಐ ಆಗಿ ಜಗದೀಶ್ ಅಧಿಕಾರ ಸ್ವೀಕಾರ cpi-leader
ಬೇತಮಂಗಲ: ಕೆಜಿಎ್ ತಾಲೂಕು ಬೇತಮಂಗಲ ಪೊಲೀಸ್ ವೃತ್ತದ ನೂತನ ವೃತ್ತ ನಿರೀಕ್ಷಕರಾಗಿ (ಸಿಪಿಐ) ಎಸ್.ಆರ್. ಜಗದೀಶ್ ಅವರು ಗುರುವಾರ ಅಧಿಕಾರ ಸ್ವೀಕರಿಸಿದರು. ಇಲ್ಲಿಯವರೆಗೆ ವೃತ್ತ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸಿದ್ದ ರಂಗಶಾಮಯ್ಯ ಅವರು ನೂತನ ಅಧಿಕಾರಿ ಜಗದೀಶ್ ಅವರಿಗೆ ಶುಕ್ರವಾರ ಅಧಿಕಾರ ಹಸ್ತಾಂತರಿಸಿದರು.cpi-leader
ಎಸ್.ಆರ್. ಜಗದೀಶ್ ಅವರು ಸುಮಾರು 13 ವರ್ಷದ ಹಿಂದೆ ಇದೇ ಠಾಣೆಯಲ್ಲಿ ಸಬ್ ಇನ್ಸ್ಪೆಕ್ಟರ್ (ಪಿಎಸ್ಐ) ಆಗಿ ಕಾರ್ಯನಿರ್ವಹಿಸಿದ್ದರು. ಅಂದು ತಮ್ಮ ಕಟ್ಟುನಿಟ್ಟಾದ ಕೆಲಸದ ಮೂಲಕ ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಹಾಕಿದ್ದರು. ರೌಡಿಗಳ ಪಾಲಿಗೆ ಸಿಂಹಸ್ವಪ್ನವಾಗಿದ್ದ ಅವರನ್ನು ಅಂದಿನ ದಿನಗಳಲ್ಲಿ ಸ್ಥಳಿಯರು ಪ್ರೀತಿಯಿಂದ "ಸಿಂಗಂ' ಎಂದೇ ಕರೆಯುತ್ತಿದ್ದರು. ಈಗ ಅದೇ ಠಾಣೆಗೆ ಉನ್ನತ ಅಧಿಕಾರಿಯಾಗಿ ಮರಳಿರುವುದು ವಿಶೇಷವಾಗಿದೆ.
ಅಧಿಕಾರ ಸ್ವೀಕರಿಸಿ ಮಾತನಾಡಿದ ಎಸ್.ಆರ್.ಜಗದೀಶ್, ಠಾಣೆ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ಮತ್ತು ಸಾರ್ವಜನಿಕರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುವುದು ಮೊದಲ ಆದ್ಯತೆ. ಸಾರ್ವಜನಿಕರು, ಸಂಘ-&ಸಂಸ್ಥೆಗಳು ಮತ್ತು ಮಾಧ್ಯಮದವರ ಸಹಕಾರದೊಂದಿಗೆ ಅಹಿತಕರ ಘಟನೆಗಳಿಲ್ಲದೆ ಶಾಂತಿಯುತ ವಾತಾವರಣ ನಿರ್ಮಿಸಲು ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.
ಕಳೆದ ಎರಡು ವರ್ಷಗಳ ಕಾಲ ವೃತ್ತ ನಿರೀಕ್ಷಕರಾಗಿ ಸೇವೆ ಸಲ್ಲಿಸಿ, ಸಭ್ಯ ಅಧಿಕಾರಿಯಾಗಿ ಹೆಸರುಗಳಿಸಿದ್ದ ರಂಗಶಾಮಯ್ಯ ಅವರು, ಇದೀಗ ಬೆಂಗಳೂರಿನ ಸಿಐಡಿ ಕೇಂದ್ರ ಕಚೇರಿಗೆ ವರ್ಗಾವಣೆಗೊಂಡಿದ್ದಾರೆ.