ಬೈಲಹೊಂಗಲದಲ್ಲಿ ರೇಣುಕಾಚಾರ್ಯ ಜಯಂತಿ ಆಚರಿಸಲಾಯಿತು. ಪ್ರಭುನೀಲಕಂಠ ಸ್ವಾಮೀಜಿ, ಡಾ.ವಿಶ್ವನಾಥ ಪಾಟೀಲ, ಡಾ.ಮಹಾಂತಯ್ಯಶಾಸ್ತ್ರಿ ಆರಾದ್ರಿಮಠ ಇತರರಿದ್ದರು. 
ರಾಜ್ಯ

ಜಗದ್ಗುರು ರೇಣುಕಾಚಾರ್ಯರ ಸಿದ್ಧಾಂತ ಅನುಕರಣೀಯ

ವಿಜಯವಾಣಿ ಸುದ್ದಿಜಾಲ ಬೈಲಹೊಂಗಲ
ವೀರಶೈವ ಧರ್ಮದ ಸ್ಥಾಪಕರಾದ ಜಗದ್ಗುರು ರೇಣುಕಾಚಾರ್ಯರು ಸಮಾಜ ಸುಧಾರಣೆ ಮತ್ತು ಆಧ್ಯಾತ್ಮಿಕ ಜಾಗೃತಿಗೆ ದಾರಿದೀಪವಾಗಿದ್ದಾರೆ. ಅವರ ತತ್ತ್ವ, ಸಿದ್ಧಾಂತ ಅನುಕರಣೀಯ ಎಂದು ಶಾಖಾ ಮೂರುಸಾವಿರ ಮಠದ ಪ್ರಭುನೀಲಕಂಠ ಸ್ವಾಮೀಜಿ ಹೇಳಿದರು.
ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜಗದ್ಗುರು ರೇಣುಕಾಚಾರ್ಯರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
ರೇಣುಕಾಚಾರ್ಯರು ಜಾತಿ, ಧರ್ಮ ಭೇದವಿಲ್ಲದೆ ಸಮಾಜ ಸೇವೆ ಸಲ್ಲಿಸಿದ ಶಿವಯೋಗಿಗಳು. ಅವರು ಬೋಧಿಸಿದ ಷಟಸ್ಥಲ ತತ್ತ್ವ, ಅಷ್ಟಾವರ್ಣ ಹಾಗೂ ಪಂಚಾಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಜಯಂತಿ ಆಚರಣೆಗೆ ನಿಜ ಅರ್ಥ ಬರುತ್ತದೆ ಎಂದರು. ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, ಸಮಾಜದಲ್ಲಿ ಏಕತೆ, ಶಾಂತಿ ಹಾಗೂ ಸೌಹಾರ್ದ ಬೆಳೆಸುವಲ್ಲಿ ಪಂಚಪೀಠಗಳ ಕಾರ್ಯ ಶ್ಲಾನೀಯ. ಜಗದ್ಗುರುಗಳು ತೋರಿದ ಸನ್ಮಾರ್ಗದಲ್ಲಿ ಮುನ್ನಡೆದರೆ ಬದುಕು ಉತ್ತಮವಾಗುತ್ತದೆ ಎಂದರು.
ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಮಾತನಾಡಿ, ಪ್ರತಿಯೊಬ್ಬರೂ ರೇಣುಕಾಚಾರ್ಯರ ತತ್ತ್ವ ಹಾಗೂ ಆದರ್ಶ ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ನಗರದಲ್ಲಿ ಜಗದ್ಗುರು ರೇಣುಕಾಚಾರ್ಯರ ಮಂದಿರ ನಿರ್ಮಾಣ ಮಾಡಬೇಕೆಂದು ಜಂಗಮ ಸಮುದಾಯದವರು ಮನವಿ ಮಾಡಿದರು.
ಧಾರ್ಮಿಕ ದತ್ತಿ ಇಲಾಖೆ ನಿರ್ದೇಶಕ ಡಾ.ಮಹಾಂತಯ್ಯಶಾಸ್ತ್ರಿ ಆರಾದ್ರಿಮಠ, ಮಾಜಿ ಶಾಸಕ ಮಹಾಂತೇಶ ದೊಡಗೌಡರ, ಡಿವೈಎಸ್ಪಿ ಡಾ.ವೀರಯ್ಯ ಹಿರೇಮಠ, ತಹಸೀಲ್ದಾರ್​
ಎಚ್​.ಎನ್​.ಶಿರಹಟ್ಟಿ, ಜಂಗಮ ಸಮುದಾಯದ ತಾಲೂಕಾಧ್ಯ ಪ್ರಮೋದಕುಮಾರ ವಕ್ಕುಂದಮಠ, ಸೋಮನಾಥ ಸೊಪ್ಪಿಮಠ, ಮಹಾಂತೇಶ ಮತ್ತಿಕೊಪ್ಪ, ನಾನಾಸಾಹೇಬ ಪಾಟೀಲ, ಗುರು ಮೆಟಗುಡ್ಡ, ಬಿ.ಬಿ. ಗಣಾಚಾರಿ, ಉಮೇಶ ಹಿರೇಮಠ, ಶ್ರೀಶೈಲ ಯಡಳ್ಳಿ, ಮಡಿವಾಳಪ್ಪ ಹೋಟಿ ಇತರರಿದ್ದರು.