ಬೆಂಗಳೂರು ಪೂರ್ವ ತಾಲ್ಲೂಕು ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಶ್ರೀ ಮಹಾಯೋಗಿ ವೇಮನ ಅವರ ಜಯಂತಿಯಲ್ಲಿ ಸ್ಥಳಿಯ ಮುಖಂಡರಾದ ಬಾಬುರೆಡ್ಡಿ,ಬಾಣಸವಾಡಿ ಜಯರಾಮರೆಡ್ಡಿ,ರಾಮಕೃಷ್ಣ ರೆಡ್ಡಿ,ರಜಾರೆಡ್ಡಿ,ಗಣೇಶ್ ರೆಡ್ಡಿ,ವಿನಯ್ ರೆಡ್ಡಿ, ಗುಂಜುರು ಮಂಜುನಾಥ ರೆಡ್ಡಿ, ನಾಗರಾಜರೆಡ್ಡಿ,ಅಭಿಲಾಷ್ ಪಾಲ್ಗೋಂಡಿದ್ದರು.
ವಿಜಯವಾಣಿ ಸುದ್ದಿಜಾಲ ಕೆ.ಆರ್.ಪುರ:
ವೇಮನ ಅವರು ತಮ್ಮ ಕವನಗಳ ಮೂಲಕ ಜಾತಿ ಪದ್ಧತಿ, ಮೂಢನಂಬಿಕೆ, ಸಾಮಾಜಿಕ ಸಮಾನತೆ, ಮಾನವತಾವಾದ ಮತ್ತು ಆಧ್ಯಾತ್ಮಿಕ ಜ್ಞಾನವನ್ನು ಸಾರಿದ ಮಹಾನ್ ವ್ಯಕ್ತಿ ಎಂದು ಬೆಂಗಳೂರು ಪೂರ್ವ ತಾಲ್ಲೂಕು ರೆಡ್ಡಿ ಜನಸಂಘದ ಆಡಳಿತ ಮಂಡಳಿ ಸದಸ್ಯ ಜಯಚಂದ್ರರೆಡ್ಡಿ ತಿಳಿಸಿದರು.
ಬೆಂಗಳೂರು ಪೂರ್ವ ತಾಲ್ಲೂಕು ಕಚೇರಿಯಲ್ಲಿ ಶ್ರೀ ಮಹಾಯೋಗಿ ವೇಮನ ಅವರ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು.
ಅವರು ಕವಿಯಾಗಿ, ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಸಮಾಜ ಸುಧಾರಕರಾಗಿದ್ದರು. ಜನರ ಹಾಡು ಭಾಷೆಯಲ್ಲಿ ಬೊಧನೆ ಮಾಡತ್ತಾ ಜನಪರ ನಿಲುವಿನ ರಾಜಯೊಗಿಯಾದರು. ಇವರ ತತ್ವ ಆದರ್ಶಗಳು ಯುವ ಪೀಳಿಗೆಗೆ ಮಾರ್ಗದರ್ಶನವಾಗಿದೆ. ಈ ನಿಟ್ಟಿನಲ್ಲಿ ಯುವಕರು ಮಹಾನ್ ಚೇತನರ ಆದರ್ಶಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ಸಮಾಜದ ಸುಧಾರಣೆಗೆ ಒತ್ತು ನೀಡುವಂತೆ ಸಲಹೆ ನೀಡಿದರು.
ಸಿದ್ಧ ಸಾಧಕರು ಸತ್ಯದ ಸಾಕ್ಷಾತ್ಕಾರ ಹೊಂದಿ ಲೊಕಕ್ಕೆ ಬೆಳಕಾದ ಮಹಾಯೋಗಿ ವೇಮನ ಅದ್ಭುತ, ದೈತ್ಯಪ್ರತಿಭೆಯ ಚಿಂತಕರಾಗಿದ್ದರು. ಸಮಾಜ ಸುಧಾರಕರಾಗಿ, ಕ್ರಾಂತಿಕಾರಿಯಾಗಿ ನೀಡಿದ ಕೊಡುಗೆ ಅಸಾಧಾರಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪೂರ್ವ ತಾಲ್ಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ ರೆಡ್ಡಿ ಅವರು ಸಮಾಜದ ಸಮಗ್ರ ಅಭಿವೃದ್ಧಿಗೆ ವೇಮನ ಅವರು ಹಾಕಿದ ಮಾರ್ಗವನ್ನು ಪ್ರತಿಯೊಬ್ಬರು ಪಾಲಿಸುವಂತೆ ಮನವಿ ಮಾಡಿದರು.
ಈ ಕಾರ್ಯಕ್ರಮದಲ್ಲಿ ಬಾಬುರೆಡ್ಡಿ,ಬಾಣಸವಾಡಿ ಜಯರಾಮರೆಡ್ಡಿ,ರಾಮಕೃಷ್ಣ ರೆಡ್ಡಿ,ರಜಾರೆಡ್ಡಿ,ಗಣೇಶ್ ರೆಡ್ಡಿ,ವಿನಯ್ ರೆಡ್ಡಿ, ಗುಂಜುರು ಮಂಜುನಾಥ ರೆಡ್ಡಿ, ನಾಗರಾಜರೆಡ್ಡಿ,ಅಭಿಲಾಷ್ ಇದ್ದರು.