It would be an insult to the state if Param CM did this.
cm ಶಿರಾ: ರಾಜ್ಯದ ಕಾಂಗ್ರೆಸ್ ಅಧ್ಯಕ್ಷರಾಗಿ, ಉಪಮುಖ್ಯಮಂತ್ರಿ, ಹಲವು ಖಾತೆ ಸಚಿವರಾಗಿ ಅನುಭವ ಹೊಂದಿರುವ ಡಾ.ಜಿ ಪರಮೇಶ್ವರ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿ ಸ್ಥಾನ ಕೊಡದಿದ್ದರೆ ಅದು ರಾಜ್ಯಕ್ಕೆ ಮಾಡಿದ ಅಪಮಾನವಾಗುತ್ತದೆ ಎಂದು ಚನ್ನೇನಹಳ್ಳಿ ಛಲವಾದಿ ಮಠ ಪೀಠಾಧ್ಯಕ್ಷರಾದ ಬಸವ ಲಿಂಗವಂತ ಸ್ವಾಮಿಜಿ ಒತ್ತಾಯಿಸಿದರು.
ಡಾ. ಜಿ. ಪರಮೇಶ್ವರ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಒತ್ತಾಯಿಸಿ ಶಿರಾ ನಗರದಲ್ಲಿ ಮಂಗಳವಾರ ವಿವಿಧ ಮಠಾಧೀಶರು ಹಾಗೂ ವಿವಿಧ ಸಂಟನೆಯಿಂದ ಹಮ್ಮಿಕೊಂಡಿದ್ದ ಹಕ್ಕೋತಾಯ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿ, ಈ ನಾಡು ಕಂಡ ಅಜಾತ ಶತ್ರು, ಸುಧೀರ್ 50 ವರ್ಷಗಳ ರಾಜಕೀಯ ಅನುಭವ ಇರುವ ಪ್ರಸ್ತುತ ರಾಜ್ಯ ಸರ್ಕಾರದ ಗೃಹ ಸಚಿವರಾಗಿ ದಕ್ಷ ಆಡಳಿತ ನಡೆಸುತ್ತಿರುವ ಡಾ.ಜಿ.ಪರಮೇಶ್ವರ ಅವರನ್ನು ಮುಖ್ಯಮಂತ್ರಿ ಮಾಡಲೇಬೇಕು ಎಂದು
ಹೈಕಮಾಂಡ್ಗೆ ಒತ್ತಾಯ ಮಾಡುತ್ತಿದ್ದೇವೆ. ಸಿದ್ದರಾಮಯ್ಯ ಅವರನ್ನು ಬದಲಿಸುವುದಾದರೆ ಆ ಸ್ಥಾನಕ್ಕೆ ಡಾ.ಜಿ.ಪರಮೇಶ್ವರ ಅವರನ್ನು ಪರಿಗಣಿಸಿ ಎಂದು ಒತ್ತಾಯಿಸಿದರು.
ವನಕಲ್ಲು ಮಠ ಪೀಠಾಧ್ಯಕ್ಷ ಶ್ರೀ ಬಸವ ರಾಮಾನಂದ ಸ್ವಾಮೀಜಿ ಮಾತನಾಡಿ, ತುಮಕೂರು ಜಿಲ್ಲೆಯಲ್ಲಿ ಇದುವರೆಗೂ ಯಾರು ಸಿಎಂ ಆಗಿಲ್ಲ. ತುಮಕೂರು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಡಾ.ಜಿ.ಪರಮೇಶ್ವರ ಮುಖ್ಯಮಂತ್ರಿ ಮಾಡಬೇಕು. ಪರಮೇಶ್ವರ ಅವರು ತುಮಕೂರನ್ನು ಗ್ರೇಟರ್ ತುಮಕೂರು ಮಾಡಲು ಶ್ರಮಿಸುತ್ತಿದ್ದಾರೆ. ಹಾಗೂ ಜಯದೇವ ಹೃದಯ ಆಸ್ಪತ್ರೆಯ ಶಾಖೆಯನ್ನು ಶಿರಾದಲ್ಲಿ ಸ್ಥಾಪಿಸಬೇಕು. ಶಿರಾ ೇತ್ರದ ಶಾಸಕ ಟಿ.ಬಿ.ಜಯಚಂದ್ರ ಅವರನ್ನು ಉಪಮುಖ್ಯಮಂತ್ರಿ ಮಾಡಬೇಕು ಎಂದು ಮನವಿ ಮಾಡಿದರು.
ಆದಿಜಾಂಭವ ಮಠದ ಪೀಠಾಧ್ಯಕ್ಷ ಶ್ರೀ ಷಡಕ್ಷರಿ ಸ್ವಾಮೀಜಿ ಮಾತನಾಡಿ, ಎಲ್ಲ ಸಮುದಾಯದ ಹಿತ ಕಾಯುವಂತ ಡಾ.ಜಿ ಪರಮೇಶ್ವರ ಅವರು ಸಿಎಂ ಆಗಬೇಕು. ಅವರು ಪಕ್ಷ ನಿಷ್ಟೆ ದೂರದೃಷ್ಟಿ ಉಳ್ಳವರು. ಅವರು ನಾಡಿನ ಮುಖ್ಯಮಂತ್ರಿ ಆಗಬೇಕು. ಎಲ್ಲ ಸಮುದಾಯದವರು ಸಿಎಂ ಆಗಿದ್ದಾರೆ. ದಲಿತರು ಸಿಎಂ ಆಗಿಲ್ಲ. ಆದ್ದರಿಂದ ಈ ಬಾರಿ ಡಾ.ಜಿ.ಪರಮೇಶ್ವರ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಒತ್ತಾಯಿಸಿದರು.
ಬೃಹತ್ ಹಕ್ಕೊತ್ತಾಯ ಪ್ರತಿಭಟನೆ: ಡಾ.ಜಿ.ಪರಮೇಶ್ವರ ಅವರನ್ನು ಮುಖ್ಯಮಂತ್ರಿ ಮಾಡಬೇಕೆಂದು ಒತ್ತಾಯಿಸಿ ನಗರದ ದರ್ಗಾ ಸರ್ಕಲ್ನಿಂದ ಕಾಲ್ನಡಿಗೆ ಜಾಥಾ ನಡೆಸಿ ನಂತರ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಲ್ನಲ್ಲಿ ಹಕ್ಕೊತ್ತಾಯ ಪ್ರತಿಭಟನೆ ನಡೆಸಲಾಯಿತು. ಬೆಳ್ಳಾವಿ ಮಠದ ಶ್ರೀ ಕಾರದ ವೀರಬಸವ ಸ್ವಾಮೀಜಿ, ಶ್ರೀ ಯಾದವ ರಾಮಾನಂದ ಸ್ವಾಮೀಜಿ, ತುರುವೇರೆ ಶ್ರೀ ತಿಪ್ಪೇರುದ್ರ ಸ್ವಾಮೀಜಿ, ಹರಳಯ್ಯ ಗುರುಪೀಠದ ಶ್ರೀ ಹರಳಯ್ಯ ಸ್ವಾಮೀಜಿ, ಕೊರಟಗೆರೆ ಶ್ರಿ ನಾಗೇಂದ್ರ ಸ್ವಾಮೀಜಿ, ಕರ್ನಾಟಕ ಭೀಮಸೇನೆ ಸಂಟನೆಯ ಜಿಲ್ಲಾಧ್ಯಕ್ಷ ಎನ್.ದಾಸಪ್ಪ, ತಾವರೆಕೆರೆ ಬಲರಾಮ್, ರಾಜಸಿಂಹ, ಹರೀಶ್ ಇತತರು ಇದ್ದರು.