It was Kuvempu who truly revealed the vision of Rama.
ಕುವೆಂಪು ಶ್ರೀ ರಾಮಾಯಣ ದರ್ಶನಂ ಮತ್ತು ಶೂದ್ರತಪಸ್ವಿ ಮೂಲಕ ನಿಜದ ರಾಮನ ದರ್ಶನ ಮಾಡಿಸಿದರು ಎಂದು ಡಾ.ಎಚ್.ಎನ್.ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ, ಮಾಜಿ ಸಚಿವ ಎನ್.ಎಚ್.ಶಿವಶಂಕರ ರೆಡ್ಡಿ ಹೇಳಿದರು.
ಪ್ರಾಧಿಕಾರ ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಸಹಯೋಗದಲ್ಲಿ ತಾಲೂಕಿನ ವಿದುರಾಶ್ವತ್ಥದ ದಿ.ಎನ್.ಸಿ.ನಾಗಯ್ಯರೆಡ್ಡಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ನಾಟಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಸಾವಿರಾರು ರಾಮಾಯಣಗಳು, ಅವುಗಳ ಕರ್ತೃಗಳು ಕಣ್ಮುಂದೆ ತಂದಿಟ್ಟಿರುವ ಸಾವಿರಾರು ರಾಮರುಗಳ ಪೈಕಿ ಕೆಲವೇ ಕೆಲವರು ರಾಮಾಯಣ ಕರ್ತೃಗಳು ಜನಾನುರಾಗಿ ರಾಮನನ್ನು ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ. ಅವರುಗಳಲ್ಲಿ ರಾಮನನ್ನು, ಜನಾನುರಾಗಿ, ಸತ್ಯ ಪಕ್ಷಪಾತಿ ರಾಮನನ್ನು ಯಶಸ್ವಿಯಾಗಿ ಕಟ್ಟಿಕೊಟ್ಟವರು ಕುವೆಂಪು. ಅವರಂತೆಯೇ ಶಿಕ್ಷಣ ತ ಡಾ.ಎಚ್.ನರಸಿಂಹಯ್ಯ ಮೌಢ್ಯ ವಿರೋಧಿ, ಸತ್ಯಾನ್ವೇಷಿಯಾಗಿದ್ದರು.
ತಾಲೂಕಿನಲ್ಲಿ ಕಲಿಕಾರ್ಥಿಗಳಿಗೆ ಕೋಲಾರದ ಆದಿಮ ಮಾದರಿಯಲ್ಲಿ ರಂಗ ಡಿಪ್ಲೊಮೊ ಪ್ರಾರಂಭಿಸುವ ಹಾಗೂ ಕಲಾಭವನಗಳನ್ನು ಉನ್ನತಿಕರಿಸುವ ಯೋಜನೆಯಿದೆ ಎಂದು ಶಿವಶಂಕರ ರೆಡ್ಡಿ ಹೇಳಿದರು.
ಬೆಂಗಳೂರಿನ ಶಿವಕುಮಾರ್ ಹೊನ್ನಿಗನಹಳ್ಳಿ ನಿರ್ದೇಶನದ ಕುವೆಂಪು ವಿರಚಿತ ಶೂದ್ರ ತಪಸ್ವಿ ನಾಟಕ ನೆರೆದಿದ್ದ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
ನಿವೃತ್ತ ಮುಖ್ಯಶಿಕ್ಷಕ ಚಂದ್ರಶೇಖರ ರೆಡ್ಡಿ ವಿದುರಾಶ್ವತ್ಥ ಸತ್ಯಾಗ್ರಹದ ಕುರಿತು ಲಾವಣಿ ಹಾಡಿದರು.
ಹಿರಿಯ ಕಲಾವಿದರಾದ ನರಸರಾಜು, ನಿವೃತ್ತ ಶಿಕ್ಷಕ ಗೋಪಣ್ಣ, ಶಿಕ್ಷಕರಾದ ಓಬಳೇಶ್, ಕೆ.ನರಸಿಂಹಮೂರ್ತಿ, ರಾಜಶೇಖರ್, ಕಲಾವಿದ ವೀರಸೌಧ ರಾಮಕೃಷ್ಣ ರಂಗಗೀತೆಗಳ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ನಿವೃತ್ತ ಶಿಕ್ಷಕ ಸಂಜೀವರಾಯಪ್ಪ ತಬಲ ಮತ್ತು ಉಪ್ಪಾರಹಳ್ಳಿಯ ನಂಜುಂಡಪ್ಪ ಹಾಮೋರ್ನಿಯಂ ಸಾತ್ ಕೊಟ್ಟರು. ಗ.ನಾ.ಅಶ್ವತ್ಥ ಹೋರಾಟದ ಗೀತೆಯನ್ನು ಹಾಡಿದರು.
ವೀರಸೌಧ ಪ್ರಾಂಗಣದಲ್ಲಿ ಕಾರ್ಯನಿರ್ವಹಿಸುತ್ತಿರುವ 9 ಜನರಿಗೆ ಬೆವರ ಸಂಸತಿ ಗೌರವ ನೀಡಲಾಯಿತು. ನಾಟಕ ಅಕಾಡೆಮಿ ಸದಸ್ಯ ಕೆ.ವಿ.ನಾಯಕ, ರಂಗಕರ್ಮಿ ಪ್ರದಿಪ್ ತಿಪಟೂರು, ಸಂಟಕ ವೈ.ಟಿ.ಪ್ರಸನ್ನಕುಮಾರ್ ಇದ್ದರು.