ತೂಬಗೆರೆ ಕೆರೆಕಟ್ಟೆ ಮೇಲೆ ಸುರಿದಿರುವ ರಾಶಿರಾಶಿ ಕೋಳಿತ್ಯಾಜ್ಯ.
ತೂಬಗೆರೆ : ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಕೋಳಿ ತ್ಯಾಜ್ಯವನ್ನು ಕೆಲವು ಅಂಗಡಿ ಮಾಲೀಕರು ಕಾಚಹಳ್ಳಿ ಸಮೀಪದ ತೂಬಗೆರೆ ಕೆರೆಏರಿ ಮೇಲೆ ಸುರಿಯುತ್ತಿದ್ದು, ದುರ್ವಾಸನೆ ಬೀರುತ್ತಿದೆ. ಸಾರ್ವಜನಿಕರು ಮೂಗುಮುಚ್ಚಿಕೊಂಡು ಓಡಾಡುವ ದುಸ್ಥಿತಿ ನಿಮಾರ್ಣವಾಗಿದೆ.
ತೂಬಗೆರೆ ವ್ಯಾಪ್ತಿಯಲ್ಲಿನ ಕೋಳಿ ಮಾಂಸ ಮಾರಾಟದ ಅಂಗಡಿ ಮಾಲೀಕರು ಕೋಳಿ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡದಿರುವುದೇ ಈ ದುಸ್ಥಿತಿಗೆ ಕಾರಣವಾಗಿದೆ.
ತೂಬಗೆರೆ ಕೆರೆ-ಕಟ್ಟೆ ಸುತ್ತಮುತ್ತಲ ಗ್ರಾಮಗಳ ಜಾನುವಾರುಗಳ ಕುಡಿಯುವ ನೀರಿನ ತಾಣವಾಗಿದೆ. ಆದರೆ, ಕೋಳಿ ತ್ಯಾಜ್ಯ ಕೆರೆಏರಿ ಮೂಲಕ ಕೆರೆ ಒಡಲು ಸೇರುತ್ತಿದ್ದು, ಕೆರೆ ನೀರೂ ಮಲೀನವಾಗುತ್ತಿದೆ. ಇದನ್ನೇ ಕುಡಿದ ಜಾನುವಾರುಗಳು ಹಲವು ರೋಗಗಳಿಗೆ ತುತ್ತಾಗಿ ಅವುಗಳ ಪ್ರಾಣಕ್ಕೂ ಕಂಟವಾಗುತ್ತಿದೆ ಎಂದು ಹೈನುಗಾರರು ಆತಂಕ ವ್ಯಕ್ತಪಡಿಸಿದ್ದಾರೆ. ಜಿಲ್ಲಾಡಳಿತ ಕೆರೆ-ಕಟ್ಟೆಗಳ ಜೀರ್ಣೊದ್ಧಾರಕ್ಕೆ ಆಂದೋಲನ ನಡೆಸುತ್ತಿದೆ. ಆದರೆ, ಇರುವ ಜಲಮೂಲದ ರಕ್ಷಣೆ ಬಗ್ಗೆ ಪಂಚಾಯಿತಿ ರ್ನಿಲಕ್ಷ್ಯ ಧೋರಣೆ ಅನುಸರಿಸುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆರೆ&ಕಟ್ಟೆ ಮೇಲೆ ಕೋಳಿ ತ್ಯಾಜ್ಯ : ಕೋಳಿತ್ಯಾಜ್ಯ ಸುರಿಯುತ್ತಿರುವ ಬಗ್ಗೆ ಹಲವು ಬಾರಿ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನ ಆಗುತ್ತಿಲ್ಲ. ಏಕೆಂದರೆ ನಾವು ಹೇಳಿದಾಗ ಸ್ವಚ್ಛತೆ ಮಾಡುತ್ತಾರೆ. ಸ್ವಚ್ಛತೆ ಆದ ಮೇಲೆ ಮತ್ತೆ ಯಥಾಸ್ಥಿತಿ ಕಂಡುಬರುತ್ತದೆ, ಇದು ಪಂಚಾಯಿತಿಯ ಬೇಜವಾಬ್ದಾರಿಯಾಗಿದೆ. ಎಲ್ಲ ಕೋಳಿ ಅಂಗಡಿಗೂ ನೋಟಿಸ್ ಜಾರಿ ಮಾಡಿ ಅಗತ್ಯ ಕೈಗೊಂಡರೆ ಪರಿಸ್ಥಿತಿ ಸರಿ ಹೋಗುತ್ತದೆ. ಇಲ್ಲದಿದ್ದರೆ ಕೋಳಿ ತ್ಯಾಜ್ಯ ದುರ್ವಾಸನೆಯಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗುತ್ತದೆ. ಇದಕ್ಕೆ ಮುಕ್ತಿ ನೀಡಬೇಕೆಂದು ಸ್ಥಳಿಯರ ಆಗ್ರಹವಾಗಿದೆ. ತೂಬಗೆರೆ ಗ್ರಾಮ ಪಂಚಾಯಿತಿಗೆ ಲಕ್ಷಾಂತರ ರೂಪಾಯಿ ಅನುದಾನ ಬರುತ್ತದೆ, ಆದರೆ, ಅನುದಾನವನ್ನು ಏನು ಮಾಡುತ್ತಿದ್ದಾರೆ ಎಂಬುದೇ - ತಿಳಿಯುತ್ತಿಲ್ಲ, ಕಸ ನಿರ್ವಹಣೆ ಹಣ ಸಮರ್ಪಕ ಬಳಕೆಂದುಬುದು ಗ್ರಾಮಸ್ಥರ ಆಗ್ರಹವಾಗಿದೆ.
ಗ್ರಾಪಂ ಅಭಿವೃದ್ಧಿ ಅಧಿಕಾರಿ ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ, ಹಾಗಾಗಿ ಕೆರೆ-&ಕಟ್ಟೆ ಮೇಲೆ ದಿನನಿತ್ಯ ಓಡಾಡುವ ಕಾಚಹಳ್ಳಿ ಗ್ರಾಮಸ್ಥರು ಮೂಗು ಮುಚ್ಚಿಕೊಂಡು ಹೋಗಬೇಕಾದ ಪರಿಸ್ಥಿತಿ ಉದ್ಭವವಾಗಿದೆ, ಎಲ್ಲ ಅಂಗಡಿಗಳಿಗೂ ನೋಟಿಸ್ ನೀಡಿ ಅವರಿಗೆ ಒಂದು ಜಾಗ ಗುರುತು ಮಾಡಿ ಅಲ್ಲೇ ತ್ಯಾಜ್ಯವನ್ನು ಹಾಕುವಂತೆ ಹೇಳಬೇಕು ಹಾಗೂ ಕೆರೆಕಟ್ಟೆ ಮೇಲೆ ಕ್ಯಾಮರಾ ಅಳವಡಿಸಲು ತಿಳಿಸಿದ್ದರೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ.
ಕೆರೆ ಏರಿ ಬಳಿ ಉದ್ದಕ್ಕೂ ಸುರಿದಿರುವ ಕೋಳಿ ತ್ಯಾಜ್ಯದಿಂದ ಸೊಳ್ಳೆ, ನೊಣಗಳ ಕಾಟ ವಿಪರೀತವಾಗಿದೆ. ಇವುಗಳಿಂದ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ. ಇವುಗಳೊಂದಿಗೆಬೀದಿ ನಾಯಿಗಳ ಉಪಟಳವೂ ಹೆಚ್ಚಿದೆ. ಕೋಳಿ ತ್ಯಾಜ್ಯ ತಿನ್ನಲು ಮುಗಿಬೀಳುವ ಶ್ವಾನಗಳು ದಾರಿಹೋಕರ ಮೇಲೂ ದಾಳಿ ನಡೆಸುವ ಪ್ರಕರಣಗಳು ನಡೆಯುತ್ತಿವೆ. ಶ್ವಾನಗಳು ಕೆರೆಏರಿ ಬಳಿಯೇ ಸುಳಿದಾಡುತ್ತಿದ್ದು ಒಂಟಿಯಾಗಿ ಸಂಚರಿಸುವುದೇ ಕಷ್ಟವಾಗಿದೆ.