/ಹುಮನಾಬಾದ್ ತಹಸಿಲ್ ಕಚೇರಿಯಲ್ಲಿ ಮಂಗಳವಾರ ನೂತನ ತಹಸೀಲ್ದಾರ್ ಜಗದೀಶ ಚೌರ್ಹಾಗೂ ವರ್ಗಾವಣೆಗೊಂಡ ತಹಸೀಲ್ದಾರ್ ಅಂಜುಮ್ ತಬಸ್ಸುಮ್ ಅವರನ್ನು ಸನ್ಮಾನಿಸಲಾಯಿತು. ಅಧಿಕಾರಿಗಳಾದ ಮಂಜುನಾಥ ಪಂಚಾಳ, ಡಾ.ಗೋವಿಂದ, ನಿಂಗರಾಜ ಅರಸ್, ವೆಂಕಟ ಸಿಂಧೆ, ವೆಂಕಟೇಶ ಗೂಡಾಳ, ಶರಣಕುಮಾರ ಕಲ್ಯಾಣಿ ಇತರರಿದ್ದರು.
- ತಹಸೀಲ್ದಾರ್ ಜಗದೀಶ ಚೌರ್ ಹೇಳಿಕೆ
- ಹುಮನಾಬಾದ್ನಲ್ಲಿ ಕಾರ್ಯಕ್ರಮ
ಹುಮನಾಬಾದ್: ಕಚೇರಿಗೆ ಬರುವ ಪ್ರತಿಯೊಬ್ಬ ನಾಗರಿಕರಿಗೂ ಉತ್ತಮ ಸೇವೆ ಒದಗಿಸುವುದು ಅಧಿಕಾರಿಗಳ ಜವಾಬ್ದಾರಿಯಾಗಿದ್ದು, ಎಲ್ಲ ಇಲಾಖೆಗಳ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಿ ಅಭಿವೃದ್ಧಿ ಕಾರ್ಯಗಳಿಗೆ ಸಹಕರಿಸಬೇಕು ಎಂದು ತಹಸೀಲ್ದಾರ್ ಜಗದೀಶ ಚೌರ್ ಹೇಳಿದರು.
ಪಟ್ಟಣದ ತಹಸಿಲ್ ಕಚೇರಿಯಲ್ಲಿ ಮಂಗಳವಾರ ನೂತನ ತಹಸೀಲ್ದಾರ್ರ ಸ್ವಾಗತ ಹಾಗೂ ವರ್ಗಾವಣೆಗೊಂಡ ತಹಸೀಲ್ದಾರ್ ಅಂಜುಮ್ ತಬಸ್ಸುಮ್ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸರ್ಕಾರದ ಯೋಜನೆ ಮತ್ತು ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಲಾಗುವುದು ಎಂದು ತಿಳಿಸಿದರು.
ತಾಲೂಕು ಆಡಳಿತವನ್ನು ಜನಸ್ನೇಹಿಯಾಗಿ ರೂಪಿಸುವುದರೊಂದಿಗೆ ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತ ಸ್ಪಂದನೆ ನೀಡಲಾಗುವುದು. ತಾಲೂಕಿನ ಅಭಿವೃದ್ಧಿ ಹಾಗೂ ಆಡಳಿತಾತ್ಮಕ ಕಾರ್ಯಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಆದ್ಯತೆ ನೀಡಲಾಗುವುದು. ಸಾರ್ವಜನಿಕರ ವಿಶ್ವಾಸಕ್ಕೆ ತಕ್ಕಂತೆ ಕರ್ತವ್ಯ ನಿರ್ವಹಿಸಿ ಉತ್ತಮ ಆಡಳಿತ ನೀಡಲು ಬದ್ಧನಾಗಿದ್ದೇನೆ ಎಂದು ಹೇಳಿದರು.
ಚಿಟಗುಪ್ಪ ತಹಸೀಲ್ದಾರ್ ಮಂಜುನಾಥ ಪಂಚಾಳ, ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ.ಗೋವಿಂದ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ನಿಂಗರಾಜ ಅರಸ್, ಬಿಇಒ ವೆಂಕಟೇಶ ಗೂಡಾಳ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶರಣಕುಮಾರ ಕಲ್ಯಾಣಿ, ತೋಟಗಾರಿಕೆ ಇಲಾಖೆ ಅಧಿಕಾರಿ ಲಕ್ಷಿ$್ಮ ಪಾಟೀಲ್, ಲೋಕೊಪಯೋಗಿ ಇಲಾಖೆ ಎಇಇ ವೆಂಕಟ ಸಿಂಧೆ, ಗ್ರೇಡ್&2 ತಹಸೀಲ್ದಾರ್ ಗೀತಾ ಹಿರೇಮಠ, ಉಪತಹಸೀಲ್ದಾರ್ ವಿಜಯಕುಮಾರ ಸ್ವಾಮಿ, ಜಿಲ್ಲಾ ಕಂದಾಯ ಇಲಾಖೆ ನೌಕರರ ಸಂದ ಅಧ್ಯ ರಾಹುಲ್ ದೇವಪ್ರಸಾದ, ತಾಲೂಕು ಅಧ್ಯ ಮೌನೇಶ್ವರ ಸ್ವಾಮಿ, ಗ್ರಾಮ ಆಡಳಿತಾಧಿಕಾರಿಗಳ ಸಂದ ತಾಲೂಕು ಅಧ್ಯ ಮಹಾಂತೇಶ ಚಟರಕಿ, ಸುಭಾಷ ಆರ್ಯ, ಅಲಿಸಾಬ್ ಇತರರಿದ್ದರು.
ಧರ್ಮಣ್ಣಾ ಹಂಜಗಿ ಸ್ವಾಗತಿಸಿ ನಿರೂಪಣೆ ಮಾಡಿದರು. ತಹಸೀಲ್ದಾರ್ ಜಗದೀಶ ಚೌರ ಹಾಗೂ ವರ್ಗಾವಣೆಗೊಂಡ ತಹಸೀಲ್ದಾರ್ ಅಂಜುಮ್ ತಬಸ್ಸುಮ್ ಅವರನ್ನು ವಿವಿಧ ಇಲಾಖೆಯ ಅಧಿಕಾರಿಗಳು ಸನ್ಮಾನಿಸಿದರು.