ಆಳಂದನಲ್ಲಿ ಪೊಲೀಸ್ ವಸತಿಗೃಹ ಕಟ್ಟಡವನ್ನು ಶಾಸಕ ಬಿ.ಆರ್.ಪಾಟೀಲ್ ಲೋಕಾರ್ಪಣೆಗೊಳಿಸಿದರು. ಎಸ್ಪಿ ಅಡ್ಡೂರು ಶ್ರೀನಿವಾಸುಲು, ಹೆಚ್ಚುವರಿ ಎಸ್ಪಿ ಮಹೇಶ ಮೇಣ್ಣನವರ್, ಡಿವೈಎಸ್ಪಿ ತಮ್ಮಾರಾವ ಪಾಟೀಲ್ ಇದ್ದರು
- ಶಾಸಕ ಬಿ.ಆರ್.ಪಾಟೀಲ್ ಹೇಳಿಕೆ
- ಆಳಂದನಲ್ಲಿ ವಸತಿಗೃಹ ಲೋಕಾರ್ಪಣೆ
ಆಳಂದ: ಪೊಲೀಸ್ ಇಲಾಖೆ ಸಿಬ್ಬಂದಿ ನಿತ್ಯ ಜನರ ಭದ್ರತೆಗೆ ಶ್ರಮಿಸುತ್ತಿದ್ದು, ಅವರಿಗೆ ಉತ್ತಮ ವಸತಿ ಸೌಲಭ್ಯ ಒದಗಿಸುವುದು ಸರ್ಕಾರದ ಕರ್ತವ್ಯ. ಹೊಸ ವಸತಿಗೃಹದಿಂದ ಸಿಬ್ಬಂದಿ ಮತ್ತು ಅವರ ಕುಟುಂಬಕ್ಕೆ ಅನುಕೂಲವಾಗಲಿದೆ ಎಂದು ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯರೂ ಆದ ಶಾಸಕ ಬಿ.ಆರ್.ಪಾಟೀಲ್ ಹೇಳಿದರು.
ಪೊಲೀಸ್ ಠಾಣೆ ಆವರಣದಲ್ಲಿ ಕಲಬುರಗಿ ಜಿಲ್ಲಾ ಪೊಲೀಸ್ ಹಾಗೂ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮದಿಂದ ಪೊಲೀಸ್ ಗೃಹ-2025 ಹಂತ-4 ಯೋಜನೆಯಡಿಯಲ್ಲಿ 3.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ 12 ವಸತಿಗೃಹಗಳ ಕಾಗಿಣಾ ಬ್ಲಾಕ್ ಅನ್ನು ಲೋಕಾರ್ಪಣೆಗೊಳಿಸಿ ಮಾತನಾಡಿ, ಸಕಾರಿ ಕಟ್ಟಡಗಳು ಕೇವಲ ನಿರ್ಮಾಣವಾಗುವುದಷ್ಟೇ ಅಲ್ಲ, ದೀರ್ಕಾಲ ಬಾಳಿಕೆ ಬರುವಂತೆ ಗುಣಮಟ್ಟದ ಕಾಮಗಾರಿ ನಡೆಯಬೇಕು. ಸಾರ್ವಜನಿಕರ ಹಣದಿಂದ ನಿರ್ಮಾಣವಾಗುವ ಕಟ್ಟಡಗಳು ಹಲವು ವರ್ಷಗಳವರೆಗೆ ಉಪಯೋಗವಾಗಬೇಕು ಎಂದರು.
ಎಸ್.ಪಿ ಅಡ್ಡೂರು ಶ್ರೀನಿವಾಸುಲು, ಹೆಚ್ಚುವರಿ ಎಸ್ಪಿ ಮಹೇಶ ಮೇಣ್ಣನವರ್, ಡಿವೈಎಸ್ಪಿ ತಮ್ಮಾರಾಯ ಪಾಟೀಲ್, ಸಿಪಿಐ ಜಗದೀಶ ಕೆ.ಜಿ., ಪಿಐ ಶರಣಬಸಪ್ಪ ಕೋಡ್ಲಾ, ಕ್ರೆಂ ಪಿಎಸ್ಐ ಸಂಜೀವ ರೆಡ್ಡಿ, ಪ್ರಮುಖರಾದ ಸಿದ್ದರಾಮ ಪ್ಯಾಟಿ, ಈರಣ್ಣ ಹತ್ತರಕಿ, ಸಂಜಯ ಪಾಟೀಲ್ ಭೂಸನೂರ, ರಾಮ ಹತ್ತರಕಿ, ಸಿದ್ದರಾಮ ದೇಸಾಯಿ, ದಯಾನಂದ ಶೇರಿಕರ, ಮಹಾದೇವ ಜಿಡ್ಡೆ ಇತರರಿದ್ದರು.