ಕಲಬುರಗಿ ಗಂಧರ್ವ ಸಾಂಸತಿಕ ಕಲಾ ಸಂಸ್ಥೆ ಬುಧವಾರ ಆಯೋಜಿಸಿದ್ದ ಗಾಯನ ವಾದ್ಯ ವೈಭವ ಸಾಂಸ್ಕೃತಿಕ ಕಾರ್ಯಕ್ರಮವನ್ನು ಪಿಎಸ್ಐ ಅಂಬಿಕಾ ಎಚ್.ಕೆ ಉದ್ಘಾಟಿಸಿದರು. ಡಾ.ಎಂ.ಎಸ್.ಪಾಟೀಲ್, ಪಂ.ರೇವಯ್ಯ ವಸದಮಠ, ಪಂ.ಜಯರಾವ್ ಕುಲಕರ್ಣಿ, ಡಾ.ಶಿವರಾಜ ಶಾಸಿ ಹೆರೂರ್, ಡಾ.ಛಾಯಾ ಭರತನೂರ, ಷಣ್ಮುಖ ಪಾಟೀಲ, ಕವಿತಾ ಮಠಪತಿ ಇದ್ದರು.
- ಪಿಎಸ್ಐ ಅಂಬಿಕಾ ಎಚ್.ಕೆ ಹೇಳಿಕೆ
- ಗಂಧರ್ವ ಸಾಂಸ್ಕೃತಿಕ ಕಲಾ ಸಂಸ್ಥೆ ಗಾಯನ ವಾದ್ಯ ವೈಭವ
ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗವು ಅನಾದಿ ಕಾಲದಿಂದಲೂ ವಚನ, ತತ್ವಪದ ಮತ್ತು ಜಾನಪದ ಸಂಗೀತದ ನೆಲೆವೀಡು. ಶಾಸಿಯ ಸಂಗೀತದ ಜತೆಗೆ ಈ ಮಣ್ಣಿನ ಸೊಗಡು ಬಿಂಬಿಸುವ ಜಾನಪದ ಕಲೆ ಉಳಿಸಿ, ಬೆಳೆಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯ ಎಂದು ಪಿಎಸ್ಐ ಅಂಬಿಕಾ ಎಚ್.ಕೆ ಹೇಳಿದರು.
ಚನ್ನವಿರೇಶ್ವರ ವಿರಕ್ತಮಠದಲ್ಲಿ ಗಂಧರ್ವ ಸಾಂಸತಿಕ ಕಲಾ ಸಂಸ್ಥೆ ಹಾಗೂ ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಗಾಯನ ವಾದ್ಯ ವೈಭವ ಸಾಂಸತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಮತ್ತು ಪ್ರತಿಭಾವಂತ ಯುವ ಕಲಾವಿದರಿಗೆ ಸೂಕ್ತ ತರಬೇತಿ ಮತ್ತು ವೇದಿಕೆ ಕಲ್ಪಿಸುವುದು ಅವಶ್ಯ. ಸಂಗೀತವನ್ನು ನಂಬಿ ಬದುಕುವ ಕಲಾವಿದರಿಗೆ ಸರ್ಕಾರದಿಂದ ವಿಶೇಷ ಮಾಸಾಶನ, ಆರೋಗ್ಯ ವಿಮೆ ಮತ್ತು ಆರ್ಥಿಕ ನೆರವು ಯೋಜನೆಗಳನ್ನು ಬಲಪಡಿಸಬೇಕು ಎಂದು ಸಲಹೆ ನೀಡಿದರು.
ಪ್ರಾಧ್ಯಾಪಕ ಡಾ.ಶಿವರಾಜ ಶಾಸಿ ಹೇರೂರ್, ಡಾ.ಎಂ.ಎಸ್.ಪಾಟೀಲ್ ಮಾತನಾಡಿದರು. ಕಲಾವಿದರಾದ ಪಂ.ರೇವಯ್ಯ ವಸದಮಠ, ಪಂ.ಜಯರಾವ ಕುಲಕರ್ಣಿ, ಡಾ.ಛಾಯಾ ಭರತನೂರ, ವಿಜಯೇಂದ್ರ ಸಗರ, ಪವಿತ್ರಾ ವಿಶ್ವನಾಥ, ಡಾ.ಚನ್ನಮ್ಮ ಜೀವಣಗಿ, ಉಷಾ ಎಚ್., ಶ್ರೀನಿಧಿ ಪಾಟೀಲ್, ವೈಷ್ಣವಿ ದೇಶಪಾಂಡೆ, ಭಾಗ್ಯಶ್ರೀ ಕಲಶೆಟ್ಟಿ, ಶರಣಯ್ಯ ಮಠಪತಿ, ಗುರುರಾಜ ಪಾಟೀಲ, ಜಗದೀಶ ಮಾನು, ನಿಕಿತಾ, ಮಹಾಲಕ್ಷಿ$್ಮ, ನಾಗರತ್ನ, ಅಂಕಿತಾ, ಶ್ರೀದೇವಿ, ಐಶ್ವರ್ಯ ಮೋರೆ, ವಿನಯ ಪಾಟೀಲ್ ಇತರರಿದ್ದರು. ಸಂಸ್ಥೆಯ ಅಧ್ಯಕ್ಷ ಷಣ್ಮುಖ ಪಾಟೀಲ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ವೀರಭದ್ರಯ್ಯ ಸ್ಥಾವರಮಠ ನಿರೂಪಣೆ ಮಾಡಿದರು. ಕವಿತಾ ಮಠಪತಿ ವಂದಿಸಿದರು.