ಔರಾದ್​ ತಾಲೂಕಿನ ಸಂತಪುರನ ಸುಭಾಷ್ಚಂದ್ರ ಭೋಸ್​ ಪ್ರೌಢಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಏಕ ವ್ಯಕ್ತಿ ಚಿತ್ರಕಲಾ ಪ್ರದರ್ಶನ ಕಾರ್ಯಕ್ರಮದಲ್ಲಿ ಕರ್ನಾಟಕ ಪಬ್ಲಿಕ್​ ಸಂಸ್ಥೆ ಕಾರ್ಯದರ್ಶಿ ನಂದಾದೀಪ ಬೋರಾಳೆ ಮಾತನಾಡಿದರು. ಮುಖ್ಯಗುರು ಮನೋಹರರಾವ ಬಿರಾದಾರ್​, ಗಣಪತಿ ವಾಸುದೇವ, ಸತೀಶ ನಾಗೂರೆ ಇತರರಿದ್ದರು. 
ರಾಜ್ಯ

ಕಲಾವಿದರ ಕಲೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ

ಔರಾದ್​: ಕಲೆಯನ್ನು ಕರಗತ ಮಾಡಿಕೊಂಡು ತನ್ನ ಚಿತ್ರಕಲೆಯ ಮುಖಾಂತರ ಅದರಲ್ಲಿನ ಭಾವನೆಗಳನ್ನು ಪರರಿಗೆ ಧಾರೆಯೆರೆಯುವವನೇ ನಿಜವಾದ ಕಲಾವಿದನಾಗಿ ಹೊರಹೊಮ್ಮುತ್ತಾನೆ ಎಂದು ಕರ್ನಾಟಕ ಪಬ್ಲಿಕ್​ ಸಂಸ್ಥೆ ಕಾರ್ಯದರ್ಶಿ ನಂದಾದೀಪ ಬೋರಾಳೆ ಹೇಳಿದರು.
ತಾಲೂಕಿನ ಸಂತಪುರನ ಸುಭಾಷ್ಚಂದ್ರ ಭೋಸ್​ ಪ್ರೌಢಶಾಲೆಯಲ್ಲಿ ಕರ್ನಾಟಕ ಕನ್ನಡ ಮತ್ತು ಸಂಸತಿ ಇಲಾಖೆ ಬೆಂಗಳೂರು ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಯುವ ಕಲಾವಿದ ಪ್ರಭು ವಾಸುದೇವ ರಚಿಸಿದ ಏಕ ವ್ಯಕ್ತಿ ಚಿತ್ರಕಲಾ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಚಿತ್ರ ಕಲಾವಿದರ ಶ್ರಮ ಮತ್ತು ಶ್ರದ್ಧೆ ಪ್ರಶಂಸನೀಯವಾಗಿದ್ದು, ಕಲಾವಿದರ ಕಲೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದರು.
ಗ್ರಾಮೀಣ ಭಾಗದ ಶೆಂಬೆಳ್ಳಿಯ ಬಡ ಕುಟುಂಬದ ಯುವಕ ಪ್ರಭು ಎಸ್​. ವಾಸುದೇವ ತನ್ನ ಸಹಸ್ರಾರು ಕಲಾಕೃತಿಗಳ ಮೂಲಕ ಉತ್ತಮ ಕಲಾವಿದನಾಗಿ ಸಮಾಜದಲ್ಲಿ ಅನೇಕ ಜಾಗೃತಿ ಮೂಡಿಸಿ ಅನೇಕ ಯುವ ಪ್ರತಿಭೆಗಳಿಗೆ ಗುರುವಾಗಿ ಹೊರಹೊಮ್ಮಿದ್ದು, ಇಂತಹ ಕಲಾವಿದರನ್ನು ಎಲ್ಲರೂ ಪ್ರೋತ್ಸಾಹಿಸುವುದು ಅಗತ್ಯವಾಗಿದೆ ಎಂದು ತಿಳಿಸಿದರು.
ಮುಖ್ಯಗುರು ಮನೋಹರ ಬಿರಾದಾರ್​ ಮಾತನಾಡಿ, ವಾಸುದೇವ ಕಲಾಕೃತಿಗಳಲ್ಲಿ ತಂತ್ರಗಾರಿಕೆಗೆ ಮಹತ್ವ ನೀಡಿದ್ದಾರೆ. ನಮ್ಮ ಭಾಗದ ವಿದ್ಯಾರ್ಥಿಗಳಿಗೆ ಅವರ ಕಲಾಕೃತಿಗಳಿಂದ ಉಪಯುಕ್ತ ಮಾಹಿತಿ ಸಿಕ್ಕಂತಾಗಿದೆ ಎಂದು ಹೇಳಿದರು.
ಗಣಪತಿ ವಾಸುದೇವ, ಸತೀಶ ನಾಗೂರೆ ಇತರರಿದ್ದರು. ಶಿಕ್ಷಕಿ ಸಂಗೀತಾ ಹೊಸಖಂಡೆ ಸ್ವಾಗತಿಸಿದರು. ರಾಜಶೇಖರ ಕುಶನೂರೆ ನಿರೂಪಣೆ ಮಾಡಿದರು.