ಕಲಬುರಗಿಯಲ್ಲಿ ಶ್ರೀಸಾಯಿ ಜನಜಾಗೃತಿ ಕಲಾಸಂ ಗುರುವಾರ ಆಯೋಜಿಸಿದ್ದ ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮವನ್ನು ವಾರ್ತಾ ಇಲಾಖೆ ಉಪನಿರ್ದೇಶಕ ಜಡಿಯಪ್ಪ ಗೆದ್ಲಗಟ್ಟಿ ಉದ್ಘಾಟಿಸಿದರು. ಸುಭಾಷ ಬನ್ನಪಟ್ಟಿ, ವೆಂಕಟೇಶ ಮಾಲಿಪಾಟೀಲ್, ರಾಜು ದೇಶಮುಖ, ಕಲ್ಪನಾ ಗೋಲ್ಡ್ ಸ್ಮಿತ್, ಬಸಯ್ಯ ಗುತ್ತೇದಾರ್, ವಿಜಯಕುಮಾರ ತೇಗಲತಿಪ್ಪಿ, ಜಯಶ್ರೀ ಗುತ್ತೇದಾರ್ ಇತರರಿದ್ದರು.
- ವಾರ್ತಾ ಇಲಾಖೆ ಉಪ ನಿರ್ದೇಶಕ ಗೆದ್ಲಗಟ್ಟಿ ಅಭಿಮತ
- ಕಲಬುರಗಿಯಲ್ಲಿ ಸಂಗೀತ-ಸಾಂಸ್ಕೃತಿಕ ಕಾರ್ಯಕ್ರಮ
ಕಲಬುರಗಿ: ಪ್ರಸಕ್ತ ಸಮಯದಲ್ಲಿ ಪ್ರತಿಯೊಬ್ಬ ಕಲಾವಿದ ಹಾಗೂ ಸಾರ್ವಜನಿಕರು ನಮ್ಮ ನಾಡಿನ ಕಲೆ ಮತ್ತು ಸಂಸ್ಕೃತಿ ಬೆಳೆಸುವುದಕ್ಕಿಂತ ಮುಂದಿನ ಪೀಳಿಗೆಗಾಗಿ ಉಳಿಸಿಕೊಂಡು ಹೋಗುವುದು ಅತ್ಯಂತ ಪ್ರಮುಖವಾಗಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿರ್ದೇಶಕ ಜಡಿಯಪ್ಪ ಗೆದ್ಲಗಟ್ಟಿ ಹೇಳಿದರು.
ನಗರದ ಕನ್ನಡ ಭವನದಲ್ಲಿ ಶ್ರೀಸಾಯಿ ಜನಜಾಗೃತಿ ಕಲಾ ಸಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಡಿ ಗುರುವಾರ ಆಯೋಜಿಸಿದ್ದ ಸಂಗೀತ ಮತ್ತು ಸಾಂಸ್ರ್ಕತಿಕ ಕಾರ್ಯಕ್ರಮ ಉದ್ಘಾಟಿಸಿದ ಅವರು, ಸರ್ಕಾರ ಕಲೆ ಮತ್ತು ಸಂಸ್ಕೃತಿ ಉಳಿಸಲು ನಿರಂತರ ಶ್ರಮಿಸುತ್ತಿದೆ. ಬೀದಿ ನಾಟಕ, ಸಂಗೀತ, ರಂಗಾಯಣ ಮೂಲಕ ಅತ್ಯುತ್ತಮ ಕೃತಿಗಳನ್ನು ರಂಗಭೂಮಿಗೆ ತರುವುದು ಹಾಗೂ ಗ್ರಾಮೀಣ ಮಟ್ಟದಲ್ಲಿ ಜಾನಪದ ಕಲೆ ಪೋಷಿಸುವಂತಹ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಸರ್ಕಾರ ತನ್ನ ಜವಾಬ್ದಾರಿ ನಿರ್ವಹಿಸುತ್ತಿದೆ ಎಂದರು.
ಹಿಂದಿನ ಕಾಲದಲ್ಲಿ ಪ್ರತಿಯೊಂದು ಊರಿನಲ್ಲೂ ಭಜನೆ ಮತ್ತು ಶೋಬಾನೆ ಪದಗಳನ್ನು ಹಾಡುವ ಕಲಾವಿದರು ಇಡೀ ಊರಿಗೆ ಪರಿಚಿತರಾಗಿರುತ್ತಿದ್ದರು. ಯಾವುದೇ ಶುಭ ಕಾರ್ಯವಿದ್ದರೂ ರಾತ್ರಿಯಿಡೀ ಭಜನೆ ಮತ್ತು ಶೋಬಾನೆ ಪದಹಾಡಿ ಸಂಭ್ರಮಿಸುತ್ತಿದ್ದರು. ಆದರೀಗ ಕಾಲ ಬದಲಾಗಿದೆ. ತಂತ್ರಜ್ಞಾನ ಬೆಳೆದಿದೆ. ಪ್ರತಿಯೊಬ್ಬರ ಕೈಯಲ್ಲೂ ಮೊಬೈಲ್ ಬಂದಿದ್ದು, ಮನೆಗೊಬ್ಬ ಕಲಾವಿದ ಹುಟ್ಟಿಕೊಳ್ಳುತ್ತಿದ್ದಾನೆ. ಮೊಬೈಲ್, ರೇಡಿಯೋ, ಟಿವಿ ಹಾಗೂ ಸೋಷಿಯಲ್ ಮೀಡಿಯಾಗಳ ಮೂಲಕ ನಮ್ಮ ಕಲೆ ಕೆಲವೇ ಕ್ಷಣಗಳಲ್ಲಿ ಪ್ರಪಂಚದಾದ್ಯಂತ ತಲುಪಿಸಬಹುದಾಗಿದೆ ಎಂದು ಹೇಳಿದರು.
ಸರ್ಕಾರ ಹಮ್ಮಿಕೊಳ್ಳುವ ಕಲಾ ಕಾರ್ಯಕ್ರಮಗಳು ಹೆಚ್ಚಿನ ಜನರನ್ನು ತಲುಪುವಂತಾಗಬೇಕು. ಪೂರ್ವಜರಿಂದ ಬಳುವಳಿಯಾಗಿ ಬಂದಿರುವ ಜಾನಪದ, ಡೊಳ್ಳು, ಕಂಸಾಳೆ ಸೇರಿ ಎಲ್ಲ ಸಾಂಪ್ರದಾಯಿಕ ಕಲಾ ಪ್ರಕಾರಗಳ ಮೂಲಗುಣ ಕಾಪಾಡಿಕೊಳ್ಳಬೇಕಿದೆ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ರಂಗಭೂಮಿ ಹಾಗೂ ಚಲನಚಿತ್ರ ಕಲಾವಿದ ಸುಭಾಷ ಬನ್ನಪಟ್ಟಿ, ಮಣ್ಣೂರ ಗಂಗಾ ಮಾತೋಶ್ರೀ ಅಂಗವಿಕಲರ ಸಂ ಕಾರ್ಯದರ್ಶಿ ವೆಂಕಟೇಶ ಮಾಲಿಪಾಟೀಲ್, ಪತ್ರಕರ್ತ ರಾಜು ದೇಶಮುಖ, ಮಿನುಗುತಾರೆ ಮಹಿಳಾ ಕಲಾವಿದರ ಸಂದ ಅಧ್ಯೆ ಕಲ್ಪನಾ ಗೋಲ್ಡ್ ಸ್ಮಿತ್, ಆಕಾಶವಾಣಿ ಕಲಾವಿದ ಬಸಯ್ಯ ಗುತ್ತೇದಾರ್, ಜಯಶ್ರೀ ಗುತ್ತೇದಾರ್, ನಿವೃತ್ತ ಶಿಕ್ಷಕಿ ಸುಗಂಧಾಬಾಯಿ ಪಸಾರ, ಪಿ.ಆರ್. ಪಾಂಡು, ಮಲ್ಲಿಕಾರ್ಜುನ ಜಾನೆ ಇತರರಿದ್ದರು.
"
ಅಭಿವ್ಯಕ್ತಿಗೊಳಿಸುವ ಸಾಧನಗಳು ಬದಲಾಗಿದ್ದರೂ ಹಾಡು, ನೃತ್ಯ, ನಾಟಕ, ಬೀದಿ ನಾಟಕಗಳಂತಹ ಕಲೆಯ ಮೂಲ ಸತ್ವ ಎಂದಿನಂತೆಯೇ ಇದೆ. ಮೊಬೈಲ್ ಮತ್ತು ಡಿಜಿಟಲ್ ಮಾಧ್ಯಮಗಳಿಂದಾಗಿ ಇಂದು ಹಳ್ಳಿಯ ಮೂಲೆಯಲ್ಲಿದ್ದ ಕಲಾವಿದನೊಬ್ಬ ಅಮೆರಿಕವರೆಗೂ ಕ್ಷಣಮಾತ್ರದಲ್ಲಿ ಪ್ರಸಿದ್ಧಿ ಪಡೆಯಲು ಸಾಧ್ಯವಾಗಿದೆ.
— > ಜಡಿಯಪ್ಪ ಗೆದ್ಲಗಟ್ಟಿ ಉಪ ನಿರ್ದೇಶಕ, ವಾರ್ತಾ ಇಲಾಖೆ