ನೆಲಮಂಗಲದ ಸುಭಾಷನಗರದಲ್ಲಿ ಶಿಶು ಪಾಲನಾ ಕೇಂದ್ರದಲ್ಲಿ ರೋಟರಿ ಬೆಂಗಳೂರು ಅರುಣೋದಯ ಸಂಸ್ಥೆಯಿಂದ ಆಯೋಜಿಸಿದ್ದ ವಾಟರ್​ ಪ್ಲಾಂಟ್​ ವಿತರಣಾ ಕಾರ್ಯಕ್ರಮದಲ್ಲಿ ಸಂಸ್ಥೆ ಅಧ್ಯಕ್ಷ ಗಂಗಣ್ಣ ಪ್ಲಾಂಟ್​ ವಿತರಿಸಿದರು. ಅರುಣೋದಯ ಸಂಸ್ಥೆ ಕಾರ್ಯದರ್ಶಿ ಸಿ.ಕೇಶವಮೂರ್ತಿ, ಖಜಾಂಚಿ ಕಿರಣಕುಮಾರ್​, ಉಪಾಧ್ಯಕ್ಷ ಸುರೇಶ್​ ಇದ್ದರು.  
ರಾಜ್ಯ

ಚಿಣ್ಣರಿಗೆ ಉತ್ತಮ ವಾತಾವರಣ ಕಲ್ಪಿಸುವುದು ಎಲ್ಲರ ಹೊಣೆ / NELAMANGAL

ನೆಲಮಂಗಲ : ಮಕ್ಕಳ ಆರೋಗ್ಯಕ್ಕೆ ಶುದ್ಧ ಕುಡಿಯುವ ನೀರು ಹಾಗೂ ಪೌಷ್ಟಿಕಾಂಶಯುಳ್ಳ ಆಹಾರ ಮುಖ್ಯ ಎಂದು ರೋಟರಿ ಬೆಂಗಳೂರು ಅರುಣೋದಯ ಸಂಸ್ಥೆ ಅಧ್ಯಕ್ಷ ಗಂಗಣ್ಣ ಹೇಳಿದರು. ನಗರದ ಸುಭಾಷನಗರದಲ್ಲಿ ಶಿಶು ಪಾಲನಾ ಕೇಂದ್ರದಲ್ಲಿ ರೋಟರಿ ಬೆಂಗಳೂರು ಅರುಣೋದಯ ಸಂಸ್ಥೆಯಿಂದ ಆಯೋಜಿಸಿದ್ದ ವಾಟರ್​ ಪ್ಲಾಂಟ್​ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿಶು ಪಾಲನ ಕೇಂದ್ರದ ಸುತ್ತಮುತ್ತಲಿನ ಸ್ವಚ್ಛತೆ ಜತೆಗೆ ಮಕ್ಕಳ ಆರೋಗ್ಯಕ್ಕೆ ಆದ್ಯತೆ ನೀಡಬೇಕು. ಉತ್ತಮ ಆರೋಗ್ಯದ ಜತೆಗೆ ಉತ್ತಮ ವಾತಾವರಣ ಕಲ್ಪಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.
ರೋಟರಿ ಬೆಂಗಳೂರು ಅರುಣೋದಯ ಸಂಸ್ಥೆ ಸಲಹೆಗಾರ ಎಂ.ಟಿ.ನವೀನ್​ಕುಮಾರ್​ ಮಾತನಾಡಿ, ಸಂಸ್ಥೆಯಿಂದ ಶಿಶುಗಳ ಆರೈಕೆ ಕೇಂದ್ರಕ್ಕೆ ವಾಟರ್​ ಪ್ಲಾಂಟ್​ ವಿತರಣೆ ಮಾಡಲಾಗಿದ್ದು, ಶಿಕ್ಷಕರು ಮಕ್ಕಳಿಗೆ ಶುದ್ಧ ಕುಡಿಯುವ ನೀರು ನೀಡಬೇಕು. ಆರೋಗ್ಯವಂತ ಮಕ್ಕಳಿಗೆ ಶುದ್ಧ ಕುಡಿಯುವ ನೀರು ಮುಖ್ಯವಾಗಿದ್ದು, ಹೆಚ್ಚು ಹೆಚ್ಚು ನೀರು ಕುಡಿಯಲು ಶಿಕ್ಷಕರು ಪಾಲಕರಿಗೆ ನಿರ್ದೇಶನ ನೀಡಬೇಕು ಎಂದರು. ನಿಯೋಜಿತ ಅಧ್ಯಕ್ಷ ಹನುಮಂತರಾಜು, ನಿರ್ದೇಶಕ ನಟರಾಜು, ನಿರ್ದೇಶಕ ಪ್ರಸನ್ನಕುಮಾರ್​, ವಿಜಯ್​ಕುಮಾರ್​, ಸಲಹೆಗಾರ ಎಂ.ಟಿ.ನವೀನಕುಮಾರ್​, ಶಿಶುಪಾಲನ ಕೇಂದ್ರ ಸಹಾಯಕಿ ಮಂಜುಳಾ, ವಿನುತಾ ಇತರರು ಇದ್ದರು.
ರೋಟರಿ ಸಂಸ್ಥೆಗೆ ಧನ್ಯವಾದಗಳು : ಶಿಶು ಪಾಲನಾ ಕೇಂದ್ರದ ಶಿಕ್ಷಕಿ ಸೌಮ್ಯ ಮಾತನಾಡಿ, ಕೇಂದ್ರದಲ್ಲಿ 6 ತಿಂಗಳ ಮಕ್ಕಳಿಂದ 5 ವರ್ಷದ ಮಕ್ಕಳಿದ್ದು, ಕುಡಿಯುವ ನೀರಿನ ಸಮಸ್ಯೆ ಇದ್ದು, ಕ್ಯಾನ್​ ಮೂಲಕ ನೀರು ತರಬೇಕಾಗಿತ್ತು. ಮಕ್ಕಳಿಗೆ ಅನುಕೂಲವಾಗಲು ವಾಟರ್​ ಪ್ಲಾಂಟ್​ ನೀಡಿದ್ದ ರೋಟರಿ ಅರುಣೋದಯ ಸಂಸ್ಥೆಗೆ ಧನ್ಯವಾದ ಎಂದರು.