ಲೋಕಾಪುರ ಪಟ್ಟಣದ ಜಿಆರ್‌ಬಿಸಿ ಕಚೇರಿಯಲ್ಲಿ ನೀರಾವರಿ ಇಲಾಖೆಯ 15 ಎಕರೆ ಪ್ರದೇಶಕ್ಕೆ ಕಂಪೌಂಡ್ ನಿರ್ಮಾಣಕ್ಕೆ ಶಾಸಕ ಆರ್.ಬಿ.ತಿಮ್ಮಾಪೂರ ಭೂಮಿ ಪೂಜೆ ನೆರವೇರಿಸಿದರು. ಅಶೋಕ ಕಿವಡಿ, ಶಿವಾನಂದ ಉದಪುಡಿ, ಭೀಮನಗೌಡ ಪಾಟೀಲ, ಸುಭಾಸ ಗಸ್ತಿ ಇತರರಿದ್ದರು. 
ರಾಜ್ಯ

ಸರ್ಕಾರದ ಆಸ್ತಿ ಉಳಿಸುವುದು ಎಲ್ಲರ ಜವಾಬ್ದಾರಿ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಆರ್.ಬಿ.ತಿಮ್ಮಾಪೂರ ಸೂಚನೆ
  • 15 ಎಕರೆ ಪ್ರದೇಶಕ್ಕೆ ಕಂಪೌಂಡ್ ಗೋಡೆ ನಿರ್ಮಾಣಕ್ಕೆ ಭೂಮಿ ಪೂಜೆ
ಲೋಕಾಪುರ: ಸರ್ಕಾರಿ ಭೂಮಿಯನ್ನು ಒತ್ತುವರಿ ತಡೆಗಟ್ಟಲು ಮತ್ತು ಸಂರಕ್ಷಿಸಲು ನಮ್ಮ ಸರ್ಕಾರ ಮೊದಲ ಆದ್ಯತೆ ಆಗಿದೆ ಎಂದು ಶಾಸಕ ಆರ್.ಬಿ.ತಿಮ್ಮಾಪೂರ ಹೇಳಿದರು.
ಪಟ್ಟಣದ ಜಿಆರ್‌ಬಿಸಿ ಕಚೇರಿಯಲ್ಲಿ ಶುಕ್ರವಾರ 2.40 ಕೋಟಿ ರೂ.ಗಳ ವೆಚ್ಚದಲ್ಲಿ ನೀರಾವರಿ ಇಲಾಖೆಯ 15 ಎಕರೆ ಪ್ರದೇಶಕ್ಕೆ ಕಂಪೌಂಡ್ ಗೋಡೆ ನಿರ್ಮಾಣಕ್ಕೆ ಭೂಮಿ ಪೂಜೆ ನೇರವೇರಿಸಿ ಅವರು ಮಾತನಾಡಿದರು.
ಸರ್ಕಾರಿ ಭೂಮಿ ಯಾರು ಒತ್ತುವರಿ ಮಾಡಬಾರದು, ಒತ್ತುವರಿ ಮಾಡುವವರ ವಿರುದ್ಧ ಅಧಿಕಾರಿಗಳು ಕಠಿಣ ಕ್ರಮ ಜರುಗಿಸಬೇಕು, ಸರ್ಕಾರದ ಆಸ್ತಿ ಉಳಿಸುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದರು. ಅಭಿವೃದ್ಧಿ ಕಾಮಗಾರಿಗೆ ಯಾರು ತೊಂದರೆ ಉಂಟು ಮಾಡಬಾರದು, ರೈತರು ಕಾಮಗಾರಿ ಕೈಗೊಳ್ಳಲು ಸಹಕಾರ ನೀಡಬೇಕು, ಗುಣಮಟ್ಟದ ಕಾಮಗಾರಿಗಳನ್ನು ನಿರ್ಮಿಸಲು ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ಸೂಚಿಸಿದರು.
ಲೋಕಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕಿವಡಿ, ವೆಂಕಣ್ಣ ಗಿಡ್ಡಪ್ಪನವರ, ಬಿಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಶಿವಾನಂದ ಉದಪುಡಿ, ಸುಭಾಸ ಗಸ್ತಿ, ಭೀಮನಗೌಡ ಪಾಟೀಲ, ಬಾಗಲಕೋಟೆಯ ಜಿಆರ್‌ಬಿಸಿ ಕಾರ್ಯನಿರ್ವಾಹಕ ಇಂಜಿನಿಯರ್ ಎನ್.ಎಂ.ದಿವಟೆ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರಾಘವೇಂದ್ರ ಕಳ್ಳಿಮನಿ, ಲೋಕಾಪುರ ಜಿಆರ್‌ಬಿಸಿ ಎಇಇ ವಿಜಯಕುಮಾರ ಜೆ.ಕೆ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸಾಬಣ್ಣಾ ಪೂಜೇರ ಇದ್ದರು.