ಆನೇಕಲ್ ತಾಲೂಕಿನ ಮುತ್ತಾನಲ್ಲೂರಲ್ಲಿ ಸ್ವ್ಟ್ಿಸಿಟಿ ಯೋಜನೆ ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟಸ್ಥಳಕ್ಕೆ ವಿಧಾನಸಭೆ ವಿರೋಧ ಪದ ನಾಯಕ ಆರ್. ಅಶೋಕ್ ಭೇಟಿ ನೀಡಿ ಬೆಂಬಲ ಸೂಚಿಸಿದರು. ಶಾಸಕ ನಂದೀಶ್ ರೆಡ್ಡಿ, ವಿಧಾನ ಪರಿಷತ್ ಸದಸ್ಯ ಎಚ್.ಎಸ್ ಗೋಪಿನಾಥ ರೆಡ್ಡಿ, ನಿಕಟಪೂರ್ವ ಬಿಜೆಪಿ ಅಭ್ಯರ್ಥಿ ಹುಲ್ಲಹಳ್ಳಿ ಶ್ರೀನಿವಾಸ್ ಇತರರು ಪಾಲ್ಗೊಂಡಿದ್ದರು.
ಸರ್ಜಾಪುರ : ಆನೇಕಲ್ ತಾಲೂಕಿನ ಮುತ್ತಾನಲ್ಲೂರಲ್ಲಿ ಸ್ಟಾರ್ಟಪ್, ವರ್ಕಸ್ಪೇಸ್, ಇನ್ನೋವೇಷನ್, ೈನಾನ್ಸ್ ಮತ್ತು ಟೆಕ್ನಾಲಜಿ (ಸ್ವ್ಟ್ಿ)ಸಿಟಿ ಯೋಜನೆ ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟದ ಸ್ಥಳಕ್ಕೆ ವಿಧಾನಸಭೆ ವಿರೋಧ ಪದ ನಾಯಕ ಆರ್. ಅಶೋಕ್ ಭೇಟಿ ನೀಡಿ ಬೆಂಬಲ ಸೂಚಿಸಿದರು.
ಸರ್ಜಾಪುರ ಹೋಬಳಿಯ ಸುಮಾರು 2,450 ಎಕರೆ ಭೂಮಿಯನ್ನು ಸ್ವ್ಟ್ಿ ಸಿಟಿ ಯೋಜನೆಗಾಗಿ ಸ್ವಾಧಿನಪಡಿಸಿಕೊಳ್ಳಲು ಸರ್ಕಾರ ಅಧಿಸೂಚನೆ ಹೊರಡಿಸಿರುವುದನ್ನು ವಿರೋಧಿಸಿ ರೈತರು 362 ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಇತ್ತೀಚೆಗೆ ಹೋರಾಟವನ್ನು ತೀವ್ರಗೊಳಿಸುವ ನಿಟ್ಟಿನಲ್ಲಿ ಬೆಂಗಳೂರಿನತ್ತ ಹೊರಟ ರೈತರನ್ನು ಪೊಲೀಸರು ತಡೆದು ಲಾಠಿ ಪ್ರಹಾರ ನಡೆಸಿದ್ದರು. ಈ ವೇಳೆ ಮಹಿಳೆಯರು ಹಾಗೂ ವೃದ್ಧ ರೈತರೂ ಗಾಯಗೊಂಡಿದ್ದರು. ಪೊಲೀಸ್ ಕ್ರಮಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಹೋರಾಟನಿರತ ರೈತರನ್ನು ಭೇಟಿ ಮಾಡಿದ ಆರ್. ಅಶೋಕ್, ಹೋರಾಟಗಾರರ ಅಹವಾಲುಗಳನ್ನು ಆಲಿಸಿ ಚರ್ಚಿಸಿದರು.
ಉತ್ತರ ಕರ್ನಾಟಕ ಭಾಗದ ಜನಪ್ರತಿನಿಧಿಗಳು ತಮ್ಮ ಪ್ರದೇಶದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಿ ಉದ್ಯೋಗ ಸೃಷ್ಟಿ ಹಾಗೂ ಅಭಿವೃದ್ಧಿ ಮಾಡಲು ನಿರಂತರವಾಗಿ ಹೋರಾಟ ನಡೆಸುತ್ತಿದ್ದಾರೆ. ಆದರೆ, ಉತ್ತರ ಕರ್ನಾಟಕದವರೇ ಆಗಿರುವ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರು ತಮ್ಮ ಭಾಗದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸುವ ಬದಲು ಬೆಂಗಳೂರು ಸುತ್ತಮುತ್ತಲಿನ ಫಲವತ್ತಾದ ಕೃಷಿ ಭೂಮಿ ಸ್ವಾಧಿನಪಡಿಸಿಕೊಳ್ಳಲು ಮುಂದಾಗಿರುವುದು ಸರಿಯಲ್ಲ ಎಂದು ಆರ್. ಅಶೋಕ್ ಹೇಳಿದರು.
ಶ್ವೇತಪತ್ರ ಬಿಡುಗಡೆ ಮಾಡಲಿ: ಕಾಂಗ್ರೆಸ್ ಸರ್ಕಾರ ಯಾವುದೇ ಲಾಭವಿಲ್ಲದೆ ಏನನ್ನೂ ಮಾಡುವುದಿಲ್ಲ. ಇದು ಕಮಿಷನ್ ಸರ್ಕಾರವಾಗಿದೆ. ರೈತರು ನ್ಯಾಯಯುತ ಬೇಡಿಕೆಗಳನ್ನು ಸಲ್ಲಿಸಲು ತೆರಳಿದಾಗ ಅವರನ್ನು ಪೊಲೀಸರು ತಡೆದು ಲಾಠಿ ಪ್ರಹಾರ ನಡೆಸಿರುವುದು ಖಂಡನೀಯ ಎಂದು ಆರ್.ಅಶೋಕ್ ಹೇಳಿದರು,
ರಾಜ್ಯ ಸರ್ಕಾರ ತಣವೇ ಶ್ವೇತಪತ್ರ ಬಿಡುಗಡೆ ಮಾಡಿ, ರಾಜ್ಯದಲ್ಲಿ ಎಷ್ಟು ಕೈಗಾರಿಕಾ ಪ್ರದೇಶಗಳನ್ನು ನಿರ್ಮಿಸಲಾಗಿದೆ ಹಾಗೂ ಅವುಗಳಲ್ಲಿ ಎಷ್ಟು ಭೂಮಿ ಖಾಲಿ ಉಳಿದಿದೆ ಎಂಬ ಮಾಹಿತಿಯನ್ನು ಸಾರ್ವಜನಿಕರ ಮುಂದಿಡಬೇಕು ಎಂದು ಅವರು ಆಗ್ರಹಿಸಿದರು.
ಹೋರಾಟದಲ್ಲಿ ವಿಧಾನ ಪರಿಷತ್ ಸದಸ್ಯ ಎಚ್.ಎಸ್ ಗೋಪಿನಾಥರೆಡ್ಡಿ, ನಿಕಟಪೂರ್ವ ಬಿಜೆಪಿ ಅಭ್ಯರ್ಥಿ ಹುಲ್ಲಹಳ್ಳಿ ಶ್ರೀನಿವಾಸ್, ರೈತ ಮುಖಂಡರಾದ ರಾಮಸ್ವಾಮಿ ರೆಡ್ಡಿ, ಕೆ.ಸಿ.ದೇವರಾಜ್, ಜಯಪ್ರಕಾಶ್, ಚಂದ್ರ ರೆಡ್ಡಿ, ಡಾ.ಚಿನ್ನಪ್ಪ ವೈ ಚಿಕ್ಕಹಾಗಡೆ, ಹರೀಶ್ ಅಣ್ಣಯ್ಯ, ಕೇಶವ್ರೆಡ್ಡಿ, ಉಮಾ ಪರಶುರಾಮ್, ಬಸವರಾಜು, ಅಶೋಕ್, ಸತೀಶ್ ರೆಡ್ಡಿ, ವೆಂಕಟಸ್ವಾಮಿ ರೆಡ್ಡಿ, ಶ್ರೀನಿವಾಸ್, ರಾಜೇಶ್, ಸುನೀಲ, ಬಸವರಾಜು, ಬಿಜೆಪಿ ಮುಖಂಡರಾದ ಎಸ್.ಆರ್.ಟಿ ಅಶೋಕ್, ರಾಜಶೇಖರ್ ರೆಡ್ಡಿ, ಕತ್ರಿಗುಪ್ಪೆ ಯೋಗೇಶ್ ರೆಡ್ಡಿ, ಶಂಕರ್, ಆಂಜಿನಪ್ಪ, ಜಿಗಣಿ ಗೋಪಾಲಕೃಷ್ಣ, ಚಿಕ್ಕನಾಗಮಂಗಲ ಗುರು ಇದ್ದರು.
ರಿಯಲ್ ಎಸ್ಟೇಟ್ ವ್ಯವಹಾರಗಳಿಗೆ ಬಳಕೆ : ಕೈಗಾರಿಕೆಗಳಿಗಾಗಿ ಮೀಸಲಾಗಿರುವ ಭೂಮಿಯ ಬಹುಪಾಲು ಖಾಲಿ ಇದ್ದರೂ ಅದನ್ನು ಬಳಸಿಕೊಳ್ಳುವ ಪ್ರಯತ್ನ ಮಾಡದೆ ರೈತರ ಫಲವತ್ತಾದ ಭೂಮಿಯನ್ನು ಸ್ವಾಧಿನಪಡಿಸಿಕೊಳ್ಳಲು ಸರ್ಕಾರ ಮುಂದಾಗಿದೆ. ಕೈಗಾರಿಕೆ ಎಂಬ ಹೆಸರಿನಲ್ಲಿ ಭೂಮಿಯನ್ನು ಪಡೆದು ನಂತರ ರಿಯಲ್ ಎಸ್ಟೇಟ್ ವ್ಯವಹಾರಗಳಿಗೆ ಬಳಸುವ ಯತ್ನ ನಡೆಯುತ್ತಿದೆ ಎಂದು ಆರ್.ಅಶೋಕ್ ಆರೋಪಿಸಿದರು.
ಬೀಗ ಹಾಕುವ ಹೋರಾಟದಲ್ಲಿ ಭಾಗಿ : ಮುಂದಿನ ಹತ್ತು ದಿನಗಳೊಳಗೆ ತಾಲೂಕು ಕಚೇರಿಗೆ ಬೀಗ ಜಡಿಯುವ ಹೋರಾಟ ಹಮ್ಮಿಕೊಳ್ಳಿ. ಆ ಹೋರಾಟದಲ್ಲಿ ನಾನೂ ಭಾಗವಹಿಸುತ್ತೇನೆ. ಮುಂದಿನ ಅಧಿವೇಶನ ರೈತರ ಹೋರಾಟದ ಅಧಿವೇಶನವಾಗಲಿದೆ ಎಂದು ಆರ್.ಅಶೋಕ್ ಹೇಳಿದರು. ಬೆಂಗಳೂರು ಸುತ್ತಮುತ್ತ 12 ಸಾವಿರ ಎಕರೆಗೂ ಹೆಚ್ಚು ಭೂಮಿಯನ್ನು ಸರ್ಕಾರ ಸ್ವಾಧಿನಪಡಿಸಿಕೊಳ್ಳಲು ಮುಂದಾಗಿದ್ದು, ಇದು ಪೂರ್ವಯೋಜಿತ ಕ್ರಮವಾಗಿದೆ ಎಂದು ಟೀಕಿಸಿದರು.
ಕೈ ಎತ್ತಿದರೆ ಹುಷಾರ್ : ದೆಹಲಿಯಲ್ಲಿ ಸಿದ್ದರಾಮಯ್ಯನವರು ನಮ್ಮ ತೆರಿಗೆ ನಮ್ಮ ಹಕ್ಕು ಎಂದು ಹೇಳುತ್ತಾರೆ, ಇಲ್ಲಿ ರೈತರು ನಮ್ಮ ಭೂಮಿ ನಮ್ಮ ಹಕ್ಕು ಎಂದು ಹೇಳುತ್ತಿರುವ ಧ್ವನಿಯನ್ನೂ ಕೇಳಬೇಕು. ನಾನು ಗೃಹ ಸಚಿವನಾಗಿ ಕೆಲಸ ಮಾಡಿದ್ದೇನೆ.ಆ ಸ್ಥಾನದಲ್ಲಿ ಯಾರೂ ಶಾಶ್ವತವಲ್ಲ. ರೈತರ ಮೇಲೆ ದೌರ್ಜನ್ಯ ನಡೆಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಹೋರಾಟ ಮಾಡುತ್ತೇವೆ. ರೈತರ ಮೇಲೆ ಕೈ ಮಾಡಿದವರ ವಿಷಯವನ್ನು ವಿಧಾನಸಭೆಯಲ್ಲೂ ಪ್ರಸ್ತಾಪಿಸುತ್ತೇವೆ. ಇನ್ನು ಮುಂದಿನ ದಿನಗಳಲ್ಲಿ ಪೊಲೀಸರು ರೈತರ ಮೇಲೆ ಕೈ ಮಾಡಿದರೆ ಹುಷಾರ್ ಎಂದು ಆರ್.ಅಶೋಕ್ ಎಚ್ಚರಿಕೆ ನೀಡಿದರು.
ರೈತ ಹೋರಾಟಕ್ಕೆ ಬೆಂಬಲ : ಬೊಮ್ಮನಹಳ್ಳಿ ಶಾಸಕ ಎಂ. ಸತೀಶ್ ರೆಡ್ಡಿ ಮಾತನಾಡಿ, ರೈತರ ಒಪ್ಪಿಗೆ ಇಲ್ಲದೆ ಫಲವತ್ತಾದ ಕೃಷಿ ಭೂಮಿ ಸ್ವಾಧಿನಪಡಿಸಿಕೊಳ್ಳುವ ಯಾವುದೇ ಪ್ರಯತ್ನವನ್ನು ಬಿಜೆಪಿಬೆಂಬಲಿಸುವುದಿಲ್ಲ. ಅಭಿವೃದ್ಧಿಯ ಹೆಸರಿನಲ್ಲಿ ರೈತರ ಬದುಕನ್ನು ಸಂಕಷ್ಟಕ್ಕೆ ತಳ್ಳುವ ಕ್ರಮಗಳನ್ನು ಸರ್ಕಾರ ಕೈಬಿಡಬೇಕು. ಸರ್ಜಾಪುರ ಹೋಬಳಿಯ ರೈತರ ಹೋರಾಟಕ್ಕೆ ಬಿಜೆಪಿ ಸಂಪೂರ್ಣ ಬೆಂಬಲ ನೀಡಲಿದ್ದು, ರೈತರ ಹಕ್ಕುಗಳ ರಣೆಗೆ ಪದ ಎಲ್ಲ ಜನಪ್ರತಿನಿಧಿಗಳು ಅವರೊಂದಿಗೆ ನಿಲ್ಲಲಿದ್ದಾರೆ ಎಂದರು.
ವಿಷಾದ ವ್ಯಕ್ತಪಡಿಸಿದ ಸಂಸದ : ಸಂಸದ ಡಾ.ಸಿ.ಎನ್ ಮಂಜುನಾಥ್ ಮಾತನಾಡಿ, ಆನೇಕಲ್ ತಾಲೂಕಿನ ರಸ್ತೆಗಳ ಸ್ಥಿತಿ ಅತ್ಯಂತ ದುಸ್ಥಿತಿಯಲ್ಲಿದ್ದು, ರಸ್ತೆ, ಕುಡಿಯುವ ನೀರು ಹಾಗೂ ಮೂಲಸೌಕರ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕಾದ ಸರ್ಕಾರ, ಫಲವತ್ತಾದ ಕೃಷಿ ಭೂಮಿ ಸ್ವಾಧಿನಪಡಿಸಿಕೊಳ್ಳುವ ಕೆಲಸದಲ್ಲಿ ತೊಡಗಿರುವುದು ವಿಷಾದನೀಯ ಎಂದರು.
ಭೂಸ್ವಾಧಿನ ಪ್ರಕ್ರಿಯೆ ಕೈಬಿಡುವ ಕುರಿತು ಮುಂದಿನ ವಿಧಾನಸಭಾ ಚುನಾವಣೆಗೆ ಬಿಜೆಪಿ ಬಿಡುಗಡೆ ಮಾಡುವ ಪ್ರಣಾಳಿಕೆಯಲ್ಲಿ ಸ್ಪಷ್ಟ ಭರವಸೆ ನೀಡಬೇಕು ಮತ್ತು ರೈತರ ಭೂಮಿ ಮತ್ತು ಬದುಕಿನ ಪ್ರಶ್ನೆಗೆ ಶಾಶ್ವತ ಪರಿಹಾರ ಸಿಗಬೇಕಾದರೆ ರಾಜಕೀಯ ಪಗಳು ತಮ್ಮ ನಿಲುವನ್ನು ಸಾರ್ವಜನಿಕವಾಗಿ ೂಷಿಸಬೇಕು.
— > ವಿಶ್ವನಾಥ್ ರೆಡ್ಡಿ, ಗೌರವಾಧ್ಯಕ್ಷ, ಭೂಸ್ವಾಧಿನ ವಿರೋಧಿ ಹೋರಾಟ ಸಮಿತಿ