ಚಾಮರಾಜನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಡಿಸಿ ಶ್ರೀರೂಪಾ ಹನೂರಿನಲ್ಲಿ ವಿಷ ಮಿಶ್ರಿತ ನೀರು ಕುಡಿದು ಹಸುಗಳು ಮೃತಪಟ್ಟ ಮಾಲೀಕರಿಗೆ ಸೋಮವಾರ ಪರಿಹಾರದ ಆದೇಶ ಪತ್ರ ವಿತರಿಸಿದರು. ಪಶು ವೈದ್ಯಾಧಿಕಾರಿ ಡಾ.ಸಿದ್ದರಾಜು, ಹಸು ಮಾಲೀಕರಾದ ಪರಶಿವಮೂರ್ತಿ, ತಂಗರಾಜು ಮತ್ತು ಇತರರಿದ್ದರು. 
ರಾಜ್ಯ

ಪರಿಹಾರ ಆದೇಶ ಪತ್ರ ವಿತರಣೆ

ಚಾಮರಾಜನಗರ: ಹನೂರು ತಾಲೂಕಿನ ಶೆಟ್ಟಳ್ಳಿ ಮತ್ತು ರಾಮಾಪುರ ಸಮೀಪದ ಗುನ್ನೂರು ಗ್ರಾಮದಲ್ಲಿ ವಿಷ ಮಿಶ್ರಣ ನೀರು ಕುಡಿದು ಮೃತಪಟ್ಟ 11 ಹಸುಗಳ ಇಬ್ಬರು ಮಾಲೀಕರಿಗೆ ಜಿಲ್ಲಾಧಿಕಾರಿ ಶ್ರೀರೂಪಾ ಸೋಮವಾರ ಪರಿಹಾರದ ಆದೇಶ ಪತ್ರ ವಿತರಣೆ ಮಾಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮೃತ 6 ಹಸುಗಳ ಮಾಲೀಕ ಪರಶಿವಮೂರ್ತಿ ಮತ್ತು ಮೃತ 5 ಹಸುಗಳ ಮಾಲೀಕ ತಂಗರಾಜುಗೆ ತಲಾ 1 ಹಸುಗೆ 15 ಸಾವಿರ ರೂ.ಗಳಂತೆ ರಾಜ್ಯ ಸರ್ಕಾರದಿಂದ ಪರಿಹಾರ ನೀಡಲು ಆದೇಶ ಪತ್ರವನ್ನು ನೀಡಲಾಯಿತು. ಒಂದೆರಡು ದಿನಗಳಲ್ಲಿ ರೈತರ ಖಾತೆಗೆ ಪರಿಹಾರ ಹಣ ಜಮೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.