ವಿಜಯಪುರ ಪುರಸಭೆ ಕಚೇರಿಯಲ್ಲಿ ಪ್ರಜಾ ಸೇವಾ ಆಂದೋಲನದ ಪ್ರಯುಕ್ತ ದೂರು ಸಲ್ಲಿಸಲು ಸಾರ್ವಜನಿಕರಿಗೆ ಅಹವಾಲು ಅರ್ಜಿಗಳನ್ನು ವಿತರಿಸಲಾಯಿತು.
ವಿಜಯಪುರ : ಪಟ್ಟಣದ ಅನ್ನಪೂರ್ಣೇಶ್ವರಿ ಕಲ್ಯಾಣ ಮಂಟಪದಲ್ಲಿ ಜಿಲ್ಲೆಯ ಮೊದಲ ಪ್ರಜಾಸೇವಾ ಆಂದೋಲನ ಹಮ್ಮಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕುಂದು ಕೊರತೆ ಬಗ್ಗೆ ಲಿಖಿತ ದೂರು ನೀಡಲು ಸಾರ್ವಜನಿಕರಿಗೆ ಪುರಸಭೆಯಿಂದ ಫಾಮ್ರ್ಗಳನ್ನು ವಿತರಿಸಲಾಯಿತು.
ಪುರಸಭಾ ಮುಖ್ಯಾಧಿಕಾರಿ ಸತ್ಯನಾರಾಯಣ್ ಮಾತನಾಡಿ, ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ, ಮನೆ ಬಾಗಿಲಿನಲ್ಲಿಯೇ ಪರಿಹಾರ ಸೂಚಿಸಲು ಪ್ರಜಾ ಸೇವಾ ಆಂದೋಲನ ಹಮ್ಮಿಕೊಳ್ಳಲಾಗುತ್ತಿದೆ.
ಸಾರ್ವಜನಿಕರು ಪಿಂಚಣಿ, ವಸತಿ/ ನಿವೇಶನ, ಗ್ಯಾರಂಟಿ ಯೋಜನೆ, ಪಹಣಿ, ಪೋಡಿ, ಖಾತೆ ಬದಲಾವಣೆ, ಹೊಸ ಪಡಿತರ ಚೀಟಿ, ಸಾರಿಗೆ, ರಸ್ತೆ ಅಭಿವೃದ್ಧಿ, ಕುಡಿಯುವ ನೀರು, ದೇವಾಲಯಗಳ ಜೀಣೋರ್ದ್ಧಾರ, ಸರ್ಕಾರಿ ಶಾಲೆ, ಅಂಗನವಾಡಿ ಅಭಿವೃದ್ಧಿ, ವಿಬಿ ಜಿ ರಾಮ್ ಜಿ ಯೋಜನೆ, ಪೋಲಿಸ್ ಸೇವೆ, ಖಾಸಗಿ ಉದ್ಯೋಗ ಸೇರಿದಂತೆ ಸರ್ಕಾರ ಯಾವುದೇ ಸೇವೆಗಳಲ್ಲಿ ಸಮಸ್ಯೆ ಎದುರಿಸುತ್ತಿದ್ದರೆ ಅರ್ಜಿಯನ್ನು ಭರ್ತಿ ಮಾಡಿ ಕೊಟ್ಟು ಸ್ಥಳದಲ್ಲಿಯೇ ಪರಿಹಾರ ಪಡೆಯಬಹುದು ಎಂದು ತಿಳಿಸಿದರು. ಈಗಾಗಲೇ ಅರ್ಜಿಗಳನ್ನು ವಿತರಿಸಲಾಗಿದ್ದು, ಕಾರ್ಯಕ್ರಮದ ದಿನದಂದೂ ಪಡೆಯಬಹುದು ಎಂದು ತಿಳಿಸಿದರು.
ಪುರಸಭೆ ರೋಜ್ಗಾರ್ ಯೋಜನೆ ಅಧಿಕಾರಿ ಬಾಲಚಂದ್ರ, ಕಂದಾಯ ಅಧಿಕಾರಿ ಶಿವನಾಗೇಗೌಡ, ಪ್ರಥಮ ದರ್ಜೆ ಗುಮಾಸ್ತರಾದ ರತ್ನಮ್ಮ, ಹೇಮಾ, ಜನಾರ್ದನ್ ಇದ್ದರು.