ಪ್ರಮುಖ ಮುಖ್ಯಾಂಶಗಳು
ಬೆಂಗಳೂರು:ಆಷಾಡ ಮಾಸದಅಂಗವಾಗಿ ಪ್ರತಿವರ್ಷದಂತೆಬಾಳೆಹೊನ್ನೂರಿನ ಶ್ರೀ ರಂಭಾಪುರಿಡಾ.ವೀರಸೋಮೇಶ್ವರಜಗದ್ಗುರುಗಳ ಇಷ್ಟಲಿಂಗ ಮಹಾಪೂಜೆಮತ್ತು ಧರ್ಮ ಜಾಗೃತಿ ಸಮಾರಂಭವುಬೆಂಗಳೂರಿನಲ್ಲಿ ಜು.15ರಿಂದ ಜು.19ರವರೆಗೆನಡೆಯಲಿದೆ.
ವಿಜಯನಗರದಹೊಸಹಳ್ಳಿ ಮೆಟ್ರೋ ಸ್ಟೇಷನ್ಮುಂಭಾಗದಲ್ಲಿರುವ ಶ್ರೀ ಬಸವೇಶ್ವರಸುಜ್ಞಾನ ಮಂಟಪದಲ್ಲಿ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳ ಆಷಾಡ ಮಾಸದ ಪೂಜಾ ಸಮಿತಿ ಆಶ್ರಯದಲ್ಲಿಕಾರ್ಯಕ್ರಮ ನಡೆಯಲಿದೆ.ಪ್ರತಿದಿನಬೆಳಗ್ಗೆ 8ರಿಂದಇಷ್ಟಲಿಂಗ ಮಹಾಪೂಜೆ ಹಾಗೂ ಸಂಜೆ6ಕ್ಕೆಧರ್ಮ ಜಾಗೃತಿ ಸಮಾರಂಭ ಏರ್ಪಡಿಸಲಾಗಿದೆ.ಜು.14ರಂದುಜಗದ್ಗುರುಗಳು ಪುರಪ್ರವೇಶಮಾಡಲಿದ್ದಾರೆ.
ಜು.15ರಂದುಸಂಜೆ 6ಕ್ಕೆಜನಜಾಗೃತಿ ಧರ್ಮ ಸಮಾರಂಭವನ್ನುಅಖಿಲ ಭಾರತ ವೀರಶೈವ ಲಿಂಗಾಯತಮಹಾಸಭೆ ಅಧ್ಯಕ್ಷ ಹಾಗೂಗ್ರಾಮೀಣಾಭಿವೃದ್ದಿ ಸಚಿವ ಈಶ್ವರಖಂಡ್ರೆ ಉದ್ಘಾಟಿಸಲಿದ್ದಾರೆ.ವೀರಶೈವ ಲಿಂಗಾಯತಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷಬಿ.ಎಸ್.ಪರಮಶಿವಯ್ಯವಿವಿಧ ಮುಖಂಡರು ಪಾಲ್ಗೊಳ್ಳಲಿದ್ದಾರೆ.
ಜು.16ರಂದುಸಚಿವ ಡಾ.ಶರಣಪ್ರಕಾಶ್ಪಾಟೀಲ್, ಕೆಎಸ್‌ಡಿಎಲ್ಅಧ್ಯಕ್ಷ ಅಪ್ಪಾಜಿ ನಾಡಗೌಡಮತ್ತಿತರರು ಪಾಲ್ಗೊಳ್ಳಲಿದ್ದಾರೆ.ಜು.17ರಂದುಬಿಜೆಪಿ ರಾಜ್ಯಾಧ್ಯಕ್ಷಬಿ.ವೈ.ವಿಜಯೇಂದ್ರ, ಜು.18ರಂದುಸಚಿವ ಎಂ.ಬಿ.ಪಾಟೀಲ್,ವೀರಶೈವ ಲಿಂಗಾಯತಅಭಿವೃದ್ಧಿ ನಿಗಮದ ಅಧ್ಯಕ್ಷವಿಜಯಾನಂದ ಕಾಶಪ್ಪನವರ್ ಮುಖ್ಯಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
5 ದಿನಗಳಕಾರ್ಯಕ್ರಮದಲ್ಲಿ ಎಡೆಯೂರು,ಸಿದ್ಧರಬೆಟ್ಟ,ವಿಭೂತಿಪುರ,ಶಿವಗಂಗೆ ಸೇರಿದಂತೆವಿವಿಧ ಮಠಾಧೀಶರು,ರಾಜಕೀಯ ಮುಖಂಡರು,ಗಣ್ಯರುಪಾಲ್ಗೊಳ್ಳಲಿದ್ದಾರೆ.