ಪ್ರಮುಖ ಮುಖ್ಯಾಂಶಗಳು
ಪಣಜಿ:ಅಖಿಲ ಗೋವಾವೀರಶೈವ ಲಿಂಗಾಯತ ಸಮಾಜದ ಆಶ್ರಯದಲ್ಲಿಮಡಗಾಂವ್‌ನಲ್ಲಿ ಕಾಶೀ ಜಗದ್ಗುರುಗಳಸಾನ್ನಿಧ್ಯದಲ್ಲಿ ಇಷ್ಟಲಿಂಗದೀಕ್ಷೆ ಮತ್ತು ಧರ್ಮ ಜಾಗೃತಿಸಮಾರಂಭವು ಭಾನುವಾರ ನಡೆಯಿತು.
ಸಮಾರಂಭದಲ್ಲಿಆಶೀರ್ವಚನ ನೀಡಿದ ಕಾಶೀ ಜಗದ್ಗುರುಡಾ.ಚಂದ್ರಶೇಖರಶಿವಾಚಾರ್ಯ ಭಗವತ್ಪಾದರು, 2013ರಲ್ಲಿ ರಷ್ಯಾಪ್ರಜೆಗಳ ಅಪೇಕ್ಷೆಯಂತೆ ಮೊದಲಬಾರಿಗೆ ಕಾಶೀ ಪೀಠದಿಂದ ು ಇಷ್ಟಲಿಂಗದೀಕ್ಷೆ ನೀಡಿದ್ದು ದೇಶಾದ್ಯಂತದೊಡ್ಡ ಸುದ್ದಿಯಾಗಿತ್ತು.ಅದರಿಂದ ಪ್ರೇರಿತರಾದಗೋವಾದಲ್ಲಿರುವ ಸಮುದಾಯದ ಜನರುಪ್ರೇರಿತರಾಗಿ ಅಖಿಲ ಗೋವಾ ವೀರಶೈವಲಿಂಗಾಯತ ಸಮಾಜವನ್ನು ಸ್ಥಾಪಿಸಿಸಂಘಟಿತರಾಗಿದ್ದಾರೆ.ಸಮಾಜದರಾಜ್ಯಾಧ್ಯಕ್ಷೆಯಾಗಿರುವ ಜಯಶ್ರೀಹೊಸಮನಿ ನೇತೃತ್ವದಲ್ಲಿ ಉತ್ತಮಧಾರ್ಮಿಕ ಚಟುವಟಿಕೆಗಳನ್ನುನಡೆಸಲಾಗುತ್ತಿದೆ.ಮನುಷ್ಯನಆತ್ಮೋನ್ನತಿಗೆ ಲಿಂಗದೀಕ್ಷೆಅಗತ್ಯವಾಗಿದ್ದು,ವೀರಶೈವ ಲಿಂಗಾಯತಸಮುದಾಯದಲ್ಲಿ ಹುಟ್ಟಿದ ಪ್ರತಿಯೊಬ್ಬರುದೀಕ್ಷೆ ಪಡೆದು ಮೋಕ್ಷ ಮಾರ್ಗದಲ್ಲಿಮುನ್ನಡೆಯಬೇಕು.ಅದಕ್ಕೆ ಇಂತಹದೀಕ್ಷಾ ಸಮಾರಂಭಗಳು ಹೆಚ್ಚೆಚ್ಚುಆಗಬೇಕು ಎಂದರು.
ಸಮಾರಂಭದಲ್ಲಿಹುಕ್ಕೇರಿ ಹಿರೇಮಠದ ಶ್ರಿ ಚಂದ್ರಶೇಖರಶಿವಾಚಾರ್ಯ ಸ್ವಾಮೀಜಿ,ಕೆರೂರು ಮಠದಡಾ.ಶಿವಕುಮಾರಶಿವಾಚಾರ್ಯ ಸ್ವಾಮೀಜಿ,ಗುಳೇದಗುಡ್ಡದಡಾ.ಅಮರೇಶ್ವರಶಿವಾಚಾರ್ಯ ಸ್ವಾಮೀಜಿ,ಸಮಾಜದ ರಾಜ್ಯಾಧ್ಯಕ್ಷೆಜಯಶ್ರೀ ಹೊಸಮನಿ,ಪದಾಧಿಕಾರಿಗಳಾದ ಹನುಮಂತಪ್ಪ ಶಿರೂರರೆಡ್ಡಿ,ಮಹೇಶ್ ಆಲೂರು,ಅನಿಲ್ ಸನದಿ,ಭೀಮನಗೌಡ ಎಸ್ಪಾಟೀಲ್, ಶಿವಪ್ಪಗೌಡ ಧನ್ನೂರ,ಗೋವಾ ಕನ್ನಡಸಂಘದ ಮುರುಳಿ ಮನೋಹರ್ ಶೆಟ್ಟಿ,ಗಿರೀಶ್ ಪಿಳ್ಳೆ, ನಿಖಿತಾನಾಯಕ್ ಮತ್ತಿತರರು ಪಾಲ್ಗೊಂಡಿದ್ದರು.
ಕಾರ್ಯಕ್ರಮದಮೊದಲಿಗೆ ಗೋವಾ ಮಹಿಳೆಯರುಶ್ರೀಸಿದ್ಧಾಂತ ಶಿಖಾಮಣಿಪಾರಾಯಣವನ್ನು ಮಾಡಿದರು.ನಂತರ ವಿವಿಧಸಾಂಸ್ಕೃತಿಕ ಕಾರ್ಯಕ್ರಮಗಳುಜರುಗಿದವು.
ಕರ್ನಾಟಕದ ಗಡಿರಾಜ್ಯವಾಗಿರುವ ಗೋವಾದಲ್ಲಿ ಸುಮಾರು 5 ಲಕ್ಷದಷ್ಟು ಕನ್ನಡಿಗರು ಉದ್ಯೋಗ ಮಾಡುತ್ತಿದ್ದಾರೆ. ಜುವಾರಿನಗರ, ಪಣಜಿ, ಪೋಂಡಾ, ಬಿಚೋಲಿ, ಸಾಕಳಿ ಮತ್ತು ವಾಸ್ಕೋ ಪ್ರದೇಶದಲ್ಲಿ ಸಾವಿರಾರು ಸಂಖ್ಯೆಯಲ್ಲಿ ವೀರಶೈವ ಲಿಂಗಾಯತರಿದ್ದಾರೆ.