Is CDO Sunil's involvement in the illegality of MLAs?
ಕುಣಿಗಲ್: ಸಹಕಾರ ೇತ್ರದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಎಸಗಿರುವ ಆರೋಪವಿರುವ ಸಿಡಿಒ ಸುನೀಲ್ಗೆ ಶಾಸಕ ಡಾ.ಎಚ್.ಡಿ.ರಂಗನಾಥ್ ಕುಮ್ಮಕ್ಕು ನೀಡಿದ್ದು, ಅವರನ್ನು ತಾಲೂಕಿನಲ್ಲಿ ಉಳಿಸಿಕೊಂಡು ಮಾಡಬಾರದ ಅನಾಚಾರ ಮಾಡಿಸುತ್ತಿದ್ದಾರೆ ಎಂದು ತಾಲೂಕು ಜೆಡಿಎಸ್ ಅಧ್ಯ ಬಿ.ಎನ್.ಜಗದೀಶ್ ದಾಖಲೆ ಸಮೇತ ಗಂಭೀರ ಆರೋಪ ಮಾಡಿದರು.
ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಹಕಾರ ಅಭಿವೃದ್ಧಿ ಅಧಿಕಾರಿ ಸುನೀಲ್ ಮೇಲೆ ಸಂತೇಮಾವತ್ತೂರಿನ ವಿಎಸ್ಎಸ್ಎನ್ ಚುನಾವಣೆ ಅಕ್ರಮ ಒಂದೇ ಅಲ್ಲ, ಈ ಹಿಂದೆ ಹಾಸನ ಹಾಗೂ ಚಿಕ್ಕಮಂಗಳೂರು ಜಿಲ್ಲೆಯಲ್ಲಿ ಎಸಗಿರುವ ಭ್ರಷ್ಟಾಚಾರ, ಅಕ್ರಮ ಚುನಾವಣೆ ನಡೆಸಿರುವ ಆರೋಪವೂ ಇದೆ.
ಹೆಬ್ಬಾಳಲು ಹಾಸನ ಡೇರಿ ಚುನಾವಣೆ, ಕೋಡಿಹಳ್ಳಿ ಎಪಿಎಂಸಿ ಚುನಾವಣೆ, ಹಾಸನ ಜಿಲ್ಲೆ ಕೆಎಸ್ಆರ್ಟಿಸಿ ಗೃಹ ನಿರ್ಮಾಣ ಸಂದ ಚುನಾವಣೆ, ಸಂಜೀವಿನಿ ಸಹಕಾರ ಆಸ್ಪತ್ರೆ ವೆದ್ಯಕಿಯ ಶಿಣ ಸಂಶೋಧನಾ ಸಂಸ್ಥೆ ಚುನಾವಣೆ, ಚಿಕ್ಕಮಗಳೂರು ಜಿಲ್ಲಾ ಸಹಕಾರ ಬ್ಯಾಂಕ್ ಚುನಾವಣೆ ಸೇರಿ ಸುಮಾರು 15 ಅಕ್ರಮಗಳನ್ನು ನಡೆಸಿದ್ದಾರೆ, ಪ.ಜಾತಿ ಮಹಿಳೆ ಮೇಲಿನ ದೌರ್ಜನ್ಯ ಪ್ರಕರಣವೂ ದಾಖಲಾಗಿದೆ ಎಂದು ಆರೋಪಿಸಿದರು.
ಈ ಅಧಿಕಾರಿಯನ್ನು ಯಾವ ಚುನಾವಣೆ ಪ್ರಕ್ರಿಯೆಗೂ ತೆಗೆದುಕೊಳ್ಳಬಾರದೆಂದು ಸಹಕಾರ ಸಂಗಳ ಆಯುಕ್ತರು ಆದೇಶ ನೀಡಿದ್ದಾರೆ. ಹೀಗಾಗಿ ಸುನೀಲ್ ಅವರನ್ನು ನಮ್ಮ ಜಿಲ್ಲೆಗೆ ತರುವುದು ಬೇಡ ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ತಡೆದಿದ್ದರು ಎಂದರು.