ಏತ ನೀರಾವರಿ ಶ್ರೀ ಪೂರ್ಣಗೊಳಿಸಲು ಆಗ್ರಹಿಸಿ ಸಾಲಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ರೈತರ ಪ್ರತಿಭಟನೆಯಲ್ಲಿ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಸ್ವಾಮೀಜಿ ಮಾತನಾಡಿದರು. ವೀರಭದ್ರೇಶ್ವರ ಸ್ವಾಮೀಜಿ, ಚಂದ್ರಶೇಖರ ಶಿವಾಚಾರ್ಯರು, ಸಚ್ಚಿದಾನಂದ ಸ್ವಾಮೀಜಿ, ಸಿದ್ಧಲಿಂಗ ಶಿವಾಚಾರ್ಯರು, ಶಶಿಕಾಂತ ಗುರೂಜಿ, ಚೂನಪ್ಪ ಪೂಜಾರಿ ಇತರರಿದ್ದರು. 
ರಾಜ್ಯ

ನೀರಾವರಿ ವಿಳಂಬಕ್ಕೆ ಆಕ್ರೋಶ

ಎಂ.ಎಸ್​.ಹಿರೇಮಠ ಬೆಳಗಾವಿ
ವಿಜಯವಾಣಿ ಸುದ್ದಿಜಾಲ ರಾಮದುರ್ಗ
ತಾಲೂಕಿನ ವೀರಭದ್ರೇಶ್ವರ ಹಾಗೂ ಸಾಲಾಪುರ ಬಸವೇಶ್ವರ ಏತ ನೀರಾವರಿ ಕಾಮಗಾರಿ ಶ್ರೀ ಪೂರ್ಣಗೊಳಿಸಬೇಕೆಂದು ಆಗ್ರಹಿಸಿ ವಿವಿಧ ರೈತಪರ ಸಂಟನೆಗಳ ವತಿಯಿಂದ ತಾಲೂಕಿನ ಸಾಲಹಳ್ಳಿ ಗ್ರಾಮದಲ್ಲಿ ಬೆಳಗಾವಿ&ರಾಯಚೂರ ರಾಜ್ಯ ಹೆದ್ದಾರಿ ಸಂಚಾರ ತಡೆದು ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಏತ ನೀರಾವರಿ ಕಾಮಗಾರಿ ವ್ಯಾಪ್ತಿಯ ಗ್ರಾಮಗಳ ರೈತರು ಹಾಗೂ ತಾಲೂಕಿನ ರೈತ ಮುಖಂಡರು ನೀರಾವರಿ ಕಾಮಗಾರಿಗಳ ವಿಳಂಬ ಖಂಡಿಸಿ, ಜನಪ್ರತಿನಿಧಿಗಳು ಹಾಗೂ ಸರ್ಕಾರದ ವಿರುದ್ಧ ೂಷಣೆ ಕೂಗಿದರು. ಪ್ರತಿಭಟನೆಗೂ ಮುನ್ನ ತಾಲೂಕಿನ ಗೊಡಚಿ ವೀರಭದ್ರೇಶ್ವರ ದೇವಸ್ಥಾನದಿಂದ ಪಾದಯಾತ್ರೆ ಮೂಲಕ ಸಾಲಹಳ್ಳಿಯಲ್ಲಿ ನಿರ್ಮಿಸಿದ ಪ್ರತಿಭಟನಾ ವೇದಿಕೆ ತಲುಪಿ ಮೆರವಣಿಗೆ ಸಮಾವೇಶಗೊಂಡಿತು.
ರೈತ ಸಂದ ಅಧ್ಯಕ್ಷ ಚೂನಪ್ಪ ಪೂಜಾರಿ ಮಾತನಾಡಿ, ಬಿಟ್ಟಿ ಭಾಗ್ಯ ಕೊಡಲು ಸರ್ಕಾರಕ್ಕೆ ಹಣವಿದೆ. ಆದರೆ, ರೈತರು ನೀರಿಲ್ಲದೆ ಸಾಯುತ್ತಿದ್ದರೂ ನೀರಾವರಿ ಸೌಲಭ್ಯ ಒದಗಿಸಬೇಕೆಂಬ ಕಾಳಜಿಯಿಲ್ಲ. ಈಗಲಾದರೂ ಶಾಸಕ ಅಶೋಕ ಪಟ್ಟಣ ಶ್ರೀ ನೀರಾವರಿ ಇಲಾಖೆ ಎಂಡಿ ಅವರೊಂದಿಗೆ ಚರ್ಚಿಸಿ ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸುವ ಲಿಖಿತ ಭರವಸೆ ನೀಡಬೇಕು. ಇಲ್ಲವಾದಲ್ಲಿ ರಾಮದುರ್ಗ ತಾಲೂಕು ಬಂದ್​ ಮಾಡಲಾಗುವುದು ಎಂದು ಎಚ್ಚರಿಸಿದರು.
ಹೋರಾಟದ ಸಾನ್ನಿಧ್ಯ ವಹಿಸಿ ಮಾತನಾಡಿದ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಸ್ವಾಮೀಜಿ, ಹೋರಾಟ ಯಾರ ವಿರುದ್ಧವೂ ಅಲ್ಲ. ಅಭಿವೃದ್ಧಿಯಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಇಚ್ಛಾಶಕ್ತಿ ಕೊರತೆಯಿಂದ ಏತ ನೀರಾವರಿ ಕಾಮಗಾರಿ ವಿಳಂಬವಾಗಿವೆ. ನ್ಯಾಯ ದೊರೆಯುವವರೆಗೂ ರೈತರು ಹೋರಾಟದಿಂದ ಹಿಂದೆ ಸರಿಯಬಾರದು. ಹೋರಾಟಕ್ಕೆ ಎಲ್ಲ ಮಠಾಧೀಶರ ಬೆಂಬಲವಿದೆ ಎಂದರು.
ವಿವಿಧ ಮಠಾಧೀಶರ ಬೆಂಬಲ: ಎಂ.ಚಂದರಗಿಯ ವೀರಭದ್ರೇಶ್ವರ ಸ್ವಾಮೀಜಿ, ಮುಳ್ಳೂರಿನ ಚಂದ್ರಶೇಖರ ಶಿವಾಚಾರ್ಯರು, ಕಟಕೋಳದ ಸಚ್ಚಿದಾನಂದ ಸ್ವಾಮೀಜಿ, ಸಿದ್ರಾಯಜ್ಜನವರು, ಬನ್ನೂರ ಸಿದ್ಧಲಿಂಗ ಶಿವಾಚಾರ್ಯರು, ರಾಮದುರ್ಗದ ಶಾಂತವೀರ ಸ್ವಾಮೀಜಿ, ಹೊಸಕೋಟಿ ಅಭಿನವ ರೇವಯ್ಯ ಸ್ವಾಮೀಜಿ, ಕುಳ್ಳೂರಿನ ಬಸವಾನಂದ ಭಾರತಿ ಸ್ವಾಮೀಜಿ, ಸಾಲಹಳ್ಳಿ ಅಭಿನವ ಸಿದ್ಧಲಿಂಗೇಶ್ವರ ಸ್ವಾಮೀಜಿ, ಬೀಡಕಿ ಗಂಗಾಧರ ಸ್ವಾಮೀಜಿ, ಬಟಕುರ್ಕಿ ರೇವಯ್ಯ ಸ್ವಾಮೀಜಿ, ಭಾಗೋಜಿಕೊಪ್ಪ ಶಿವಲಿಂಗ ಮುರುರಾಜೇಂದ್ರ ಸ್ವಾಮೀಜಿ, ತೊಂಡಿಕಟ್ಟಿ ಅಭಿನವ ವೆಂಕಟೇಶ ಮಹಾರಾಜರು, ಹರ್ಲಾಪುರ ರೇಣುಕ ಶಿವಾಚಾರ್ಯರು ಹಾಗೂ ನಾಗನೂರು ಬಸವಗೀತಾ ತಾಯಿ, ಮಾಜಿ ಶಾಸಕ ಮಹಾದೇವಪ್ಪ ಯಾದವಾಡ, ಬಿಡಿಸಿಸಿ ಬ್ಯಾಂಕ್​ ನಿರ್ದೇಶಕ ಮಲ್ಲಣ್ಣ ಯಾದವಾಡ, ಬಿಜೆಪಿ ಮಂಡಲ ಅಧ್ಯ ಡಾ.ಕೆ.ವಿ.ಪಾಟೀಲ ಪಾಲ್ಗೊಂಡು ಬೆಂಬಲ ಸೂಚಿಸಿದರು.
ರೈತ ಸಂ ಹಾಗೂ ಹಸಿರು ಸೇನೆ ಗೌರವಾಧ್ಯ ಶಶಿಕಾಂತ ಗೂರೂಜಿ, ರೈತ ಸಂದ ತಾಲೂಕಾಧ್ಯ ಜಗದೀಶ ದೇವರಡ್ಡಿ, ಶಿವಾನಂದ ದೊಡವಾಡ, ವೈ.ಎಚ್​.ಪಾಟೀಲ, ಮಾರುತಿ ಕೊಪ್ಪದ ಸೇರಿದಂತೆ ರೈತ ಸಂದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ರೈತರು ತಮ್ಮ ಕೆಲಸಗಳಿಗಾಗಿ ಬೆಂಗಳೂರಿಗೆ ಹೋಗಬೇಕಿಲ್ಲ. ಸ್ಥಳಿಯ ಜನರ ಸಮಸ್ಯೆ ಇತ್ಯರ್ಥಕ್ಕಾಗಿ ಬೆಂಗಳೂರಿಗೆ ಹೋಗಿ ಬರಲು 3 ಲಕ್ಷ ರೂ. ಸಂಬಳ ನೀಡಿ ಶಾಸಕರನ್ನು ಇಟ್ಟುಕೊಂಡಿದ್ದೇವೆ. ರೈತರ ಅನ್ನ ಉಂಡ ಜನಪ್ರತಿನಿಧಿಗಳು ನೀರಾವರಿ ಸೌಲಭ್ಯ ಕಲ್ಪಿಸಲು ಮುಂದಾಗದಿರುವುದು ದುರ್ದೈವದ ಸಂಗತಿ.
> ಶಶಿಕಾಂತ ಗುರೂಜಿ
ಗೌರವಾಧ್ಯ, ರೈತ ಸಂ ಹಾಗೂ ಹಸಿರು ಸೇನೆ