ಮರಗಳ ಕೊರಳಿಗೆ ಕಬ್ಬಿಣದ ಉರುಳು
ಮಂಜುನಾಥ ಎಸ್. ಅಂಗಡಿ ಧಾರವಾಡ
ಅವಳಿನಗರದ ರಸ್ತೆ ಬದಿಯಲ್ಲಿ ಹಸಿರೀಕರಣ ಉದ್ದೇಶದಿಂದ ಆಗಾಗ ಗಿಡಗಳನ್ನು ನೆಡಲಾಗುತ್ತದೆ. ವಿವಿಧ ಸಂ& ಸಂಸ್ಥೆಗಳ ಸಹಯೋಗದೊಂದಿಗೆ ಆಥಿರ್ಕ ನೆರವು ಪಡೆದು ಸಾವಿರಾರು ಗಿಡಗಳನ್ನು ನೆಡಲಾಗಿದೆ. ಅವುಗಳ ಸಂರಕ್ಷಣೆಗೆ ಅಳವಡಿಸಿದ್ದ ಟ್ರೀ ಗಾರ್ಡ್ಗಳು ಮರಗಳ ಕೊರಳಿಗೆ ಉರುಳಾಗಿ ಪರಿಣಮಿಸಿವೆ. ಗಿಡಗಳನ್ನು ನೆಡುವಾಗ ಇದ್ದ ಪರಿಸರ ಕಾಳಜಿ ಮರಗಳಾದ ಮೇಲೆ ಇಲ್ಲ ಎಂಬುದಕ್ಕೆ ಇದು ನಿದರ್ಶನ.
ಪ್ರತಿವರ್ಷ ಮಳೆಗಾಲದಲ್ಲಿ ಹುಧಾ ಮಹಾನಗರ ಪಾಲಿಕೆ, ಅರಣ್ಯ ಇಲಾಖೆ, ವಿವಿಧ ಸಂ& ಸಂಸ್ಥೆಗಳು, ಪರಿಸರ ಹೆಸರಿನ ಸಂಗಳು ಅತ್ಯಂತ ಉತ್ಸಾಹದಿಂದ ಗಿಡಗಳನ್ನು ನೆಡುವುದು ಸಾಮಾನ್ಯ. ಇದೇರೀತಿ 8& 10 ವರ್ಷಗಳಿಂದ ಹಿಂದೆ ನಗರದಲ್ಲಿ ಸಾವಿರಾರು ಗಿಡಗಳನ್ನು ನೆಡಲಾಗಿತ್ತು. ಸಸಿಗಳನ್ನು ಬಿಡಾಡಿ ದನಗಳಿಂದ ಸಂರಸಲು ಟ್ರೀ ಗಾರ್ಡ್ಗಳನ್ನು ಅಳವಡಿಸಲಾಗಿತ್ತು.
ಸ್ಟೇಟ್ ಬ್ಯಾಂಕ್ ಆ್ ಇಂಡಿಯಾ, ಎಲ್ಐಸಿ, ಕೆವಿಜಿ ಬ್ಯಾಂಕ್ಗಳು ತಮ್ಮ ಸಿಎಸ್ಆರ್ ಅಡಿ ಹಣ ಖರ್ಚು ಮಾಡಿ ಟ್ರೀ ಗಾರ್ಡ್ಗಳನ್ನು ಕೊಡಿಸಿವೆ. ಗಿಡಗಳೀಗ ಮರಗಳಾಗಿ ಬೆಳೆದು ನಿಂತಿದ್ದು, ರಕ್ಷಣೆಗಾಗಿ ಅಳವಡಿಸಿದ್ದ ಟ್ರೀ ಗಾರ್ಡ್ಗಳೇ ಮರಗಳ ಬೆಳವಣಿಗೆ ಅಡ್ಡಿಯಾಗಿವೆ.
* ಪರಿಸರವಾದಿಗಳು ಗಪ್ಚುಪ್:
ಪರಿಸರ ದಿನಾಚರಣೆ ಮತ್ತು ಇತರ ಪರಿಸರಕ್ಕೆ ಸಂಬಂಧಿಸಿದ ದಿನಗಳಂದು ಭಾಷಣ ಹೊಡೆಯುವ ಪರಿಸರವಾದಿಗಳಿಗೇನು ಕೊರತೆ ಇಲ್ಲ. ದಿನಾಚರಣೆಗಳಂದು 4- 5 ಗಿಡ ನೆಟ್ಟು ಪೋಸು ಕೊಡುವ ಅನೇಕ ಪರಿಸರವಾದಿಗಳು ಗಪ್ಚುಪ್ ಇದ್ದಾರೆ. ಎಸ್ಬಿಐ, ಎಲ್ಐಸಿ ಮತ್ತು ಕರ್ನಾಟಕ ಕಾಲೇಜು ರಸ್ತೆ, ಜಿಲ್ಲಾಧಿಕಾರಿ ಕಚೆರಿಯ ಸುತ್ತಲಿನ ರಸ್ತೆಗಳು, ಕೇಂದ್ರ ಗ್ರಂಥಾಲಯ ರಸ್ತೆ, ಸಪ್ತಾಪುರ, ಶ್ರೀನಗರ ಪ್ರದೇಶದಲ್ಲಿ ಇಂಥ ನೂರಾರು ಮರಗಳು ಕಂಡರೂ ಪರಿಸರವಾದಿಗಳು ಕಣ್ಣಿದ್ದು ಕುರುಡರಂತೆ ವತಿರ್ಸುತ್ತಿದ್ದಾರೆ.
* ಪಾಲಿಕೆ, ಅರಣ್ಯ ಇಲಾಖೆ ನಿರ್ಲಕ್ಷ್ಯ:
ಈ ಬಗ್ಗೆ ಹುಬ್ಬಳ್ಳಿ& ಧಾರವಾಡ ನಾಗರಿಕ ಪರಿಸರ ಸಮಿತಿಯವರು ಪಾಲಿಕೆ ಮತ್ತು ಅರಣ್ಯ ಇಲಾಖೆಗೆ ಅನೇಕ ಬಾರಿ ಮನವಿ ನೀಡಿದ್ದಾರೆ. ಮರಗಳ ಕೊರಳಿಗೆ ಉರುಳಾಗುವ ಗಾರ್ಡ್ಗಳನ್ನು ತೆಗೆಸುವಂತೆ ವಿನಂತಿಸಿದ್ದಾರೆ. ಆದರೆ, ಪಾಲಿಕೆ ಮತ್ತು ಅರಣ್ಯ ಇಲಾಖೆ ಇದು ನಮಗೆ ಸಂಬಂಧಿಸಿದ್ದಲ್ಲ ಎಂದು ಮನವಿಯನ್ನು ಮೂಲೆಗೆ ಎಸೆದಿದ್ದಾರೆ. ಹಳೇ ಕಬ್ಬಿಣ, ತರಡು ಮಾರುವವರಿಗೆ ಹೇಳಿದರೆ ಒಂದೇ ದಿನದಲ್ಲಿ ಅನವಶ್ಯಕ ಟ್ರೀ ಗಾರ್ಡ್ಗಳನ್ನು ಕತ್ತರಿಸಿಕೊಂಡು ಹೋಗುತ್ತಾರೆ. ಅದಕ್ಕಾದರೂ ಸಂಬಂಧಪಟ್ಟ ಇಲಾಖೆಯವರು ಅನುಮತಿ ನೀಡಬೇಕು ಎನ್ನುತ್ತಾರೆ ಹುಧಾ ನಾಗರಿಕ ಪರಿಸರ ಸಮಿತಿ ಅಧ್ಯಕ್ಷ ಶಂಕರ ಕುಂಬಿ.
ಅವಳಿನಗರದ ರಸ್ತೆ ಬದಿ ಗಿಡಗಳನ್ನು ನೆಡುವಾಗ ಅವುಗಳ ರಕ್ಷಣೆಗಾಗಿ ಟ್ರೀ ಗಾರ್ಡ್ಗಳನ್ನು ಅಳವಡಿಸಲಾಗಿದೆ. ಗಿಡಗಳು ಈಗ ಮರಗಳಾಗಿದ್ದು, ಟ್ರೀ ಗಾರ್ಡ್ಗಳು ಉರುಳಾಗಿವೆ. ಮರಗಳ ಬೆಳವಣಿಗೆಗೆ ಅಡ್ಡಿಯಾಗುತ್ತಿದೆ. ಈ ಸಂಬಂಧ ಮಹಾನಗರ ಪಾಲಿಕೆ ಹಾಗೂ ಅರಣ್ಯ ಇಲಾಖೆಗೆ ಅನೇಕ ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.
- ಶಂಕರ ಕುಂಬಿ, ಹುಧಾ ನಾಗರಿಕ ಪರಿಸರ ಸಮಿತಿ ಅಧ್ಯಕ್ಷ