ಮಿದುಳಿನ ಬೆಳವಣಿಗೆಗೆ ಅಯೋಡಿನ್​ ಅವಶ್ಯ brain development 
ರಾಜ್ಯ

ಮಿದುಳಿನ ಬೆಳವಣಿಗೆಗೆ ಅಯೋಡಿನ್​ ಅವಶ್ಯ brain development

ಕೋಲಾರ ಡೆಸ್ಕ್

ಪ್ರಮುಖ ಮುಖ್ಯಾಂಶಗಳು

  • ಡಿವಿಜಿ ಶಾಲೆ ಮುಖ್ಯಶಿಕ ಸಿ.ಸೊಣ್ಣಪ್ಪ ಅನಿಸಿಕೆ
ಮುಳಬಾಗಿಲು: ಅಯೋಡಿನ್​ ಮಾನವನ ದೇಹಕ್ಕೆ ಅಗತ್ಯವಾದ ಖನಿಜವಾಗಿದ್ದು, ಮುಖ್ಯವಾಗಿ ಥೈರಾಯ್ಡ್​ ಹಾರ್ಮೊನ್​ಗಳ ಉತ್ಪಾದನೆಗೆ ಮತ್ತು ಮಿದುಳಿನ ಬೆಳವಣಿಗೆಗೆ ಅವಶ್ಯ ಇದೆ ಎಂದು ಡಿವಿಜಿ ಶಾಲೆ ಮುಖ್ಯಶಿಕ ಸಿ.ಸೊಣ್ಣಪ್ಪ ಹೇಳಿದರು. brain development
ನಗರದ ಡಿವಿಜಿ ಶಾಲೆಯಲ್ಲಿ ಸ್ಮಾರ್ಟ್​ ಇಂಡಿಯಾ ಸಂಸ್ಥೆಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಅಯೋಡಿನ್​ ಕೊರತೆ ನಿವಾರಣೆ ಜಾಗೃತಿ ಬೀದಿ ನಾಟಕಕ್ಕೆ ಚಾಲನೆ ನೀಡಿ ಮಾತನಾಡಿದರು.
ಇದು ಸಮುದ್ರ ಆಹಾರ, ಅಯೋಡಿಕರಿಸಿದ ಉಪ್ಪು, ಹಾಲು ಮತ್ತು ಮೊಟ್ಟೆಗಳಲ್ಲಿ ಕಂಡುಬರುತ್ತದೆ. ಅಯೋಡಿನ್​ ಕೊರತೆಯು ಗಾಯಿಟರ್​ (ಕುತ್ತಿಗೆಯಲ್ಲಿ ಊತ), ಮಕ್ಕಳಲ್ಲಿ ಮಾನಸಿಕ ಬೆಳವಣಿಗೆಯ ಕುಂಠಿತಕ್ಕೆ ಕಾರಣವಾಗಬಹುದು, ದೇಹದಲ್ಲಿನ ನರಗಳು ಮತ್ತು ಮೂಳೆಗಳ ಬೆಳವಣಿಗೆ, ಚಯಾಪಚಯ ಕ್ರಿಯೆ ನಿಯಂತ್ರಿಸುವುದು, ಮತ್ತು ಥೈರಾಯ್ಡ್​ ಗ್ರಂಥಿಯ ಸರಿಯಾದ ಕಾರ್ಯನಿರ್ವಹಣೆಗೆ ಇದು ಅವಶ್ಯ ಎಂದರು.
ಹೃದಯ ಬಡಿತ, ಚಯಾಪಚಯ, ದೇಹದ ಉಷ್ಣತೆ ಮತ್ತು ಸ್ನಾಯುಗಳ ಸಂಕೋಚನದಂತಹ ಅನೇಕ ದೈಹಿಕ ಕಾರ್ಯಗಳ ಮೇಲೆ ಪರಿಣಾಮ ಬೀರುವ ಗ್ರಂಥಿಯಾದ ಥೈರಾಯ್ಡ್​ ಗ್ರಂಥಿಗೆ ದೇಹಕ್ಕೆ ಅಗತ್ಯವಿರುವ ಸ್ಮೂ ಪೋಷಕಾಂಶವೆಂದರೆ ಅಯೋಡಿನ್​. ಗರ್ಭಾವಸ್ಥೆಯಲ್ಲಿ ಮತ್ತು ಬಾಲ್ಯದಲ್ಲಿ ಅಯೋಡಿನ್​ ಕೊರತೆಯು ವಿಶೇಷವಾಗಿ ಹಾನಿಕಾರಕವಾಗಿದೆ, ಏಕೆಂದರೆ ಇದು ಕಲಿಕಾ ಸಾಮರ್ಥ್ಯದ ನಷ್ಟ, ಮಾನಸಿಕ ಕುಂಠಿತ, ಗರ್ಭಪಾತಕ್ಕೆ ಕಾರಣವಾಗಬಹುದು. ಆದ್ದರಿಂದ ಅಯೋಡಿನ್​ ಅನ್ನು ಯಾರೂ ಕೀಳರಿಮೆ ಮನೋಭಾವದಿಂದ ಕಾಣಬಾರದು ಎಂದು ಸಲಹೆ ನೀಡಿದರು.
ಸ್ಮಾರ್ಟ್​ ಇಂಡಿಯಾ ಸಂಸ್ಥೆಯ ಸಂಯೋಜಕ ಶಿವರಾಜ್​ ಮಾತನಾಡಿ, ಅಯೋಡಿನ್​ ಕೊರತೆ, ಇದರ ದುಷ್ಪರಿಣಾಮ ಹಾಗೂ ನಿವಾರಣೆ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವುದು ಹಾಗೂ ಚಿಕಿತ್ಸೆ ಪಡೆದುಕೊಳ್ಳುವ ಕುರಿತು ಬೀದಿ ನಾಟಕ ಮೂಲಕ ಪ್ರತಿ ಸರ್ಕಾರದ ಶಾಲೆಗಳಲ್ಲಿ ಅರಿವು ಮೂಡಿಸುವ ಕಾರ್ಯದಲ್ಲಿ ನಮ್ಮ ಕಲಾ ತಂಡ ಸಿದ್ಧವಾಗಿದೆ ಎಂದು ತಿಳಿಸಿದರು.
ನಿರ್ಣಾಯಕ ಪಾತ್ರ: ಅಯೋಡಿನ್​ ಪೋಟೀನ್​ಗಳನ್ನು ತಯಾರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ದೇಹದಲ್ಲಿನ ನರಗಳು ಮತ್ತು ಮೂಳೆಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಇದರ ಕೊರತೆಯು ಗಾಯಿಟರ್​, ಹೈಪರ್​ ಥೈರಾಯ್ಡಿಸಮ್​ ಮುಂತಾದ ಗಂಭೀರ ಆರೋಗ್ಯ ಸ್ಥಿತಿಗಳಿಗೆ ಕಾರಣವಾಗಬಹುದು. ನಿತ್ಯದ ಜೀವನದಲ್ಲಿ ಅಯೋಡಿನ್​ ಸೇವನೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಈ ಎಲ್ಲ ಸ್ಥಿತಿಗಳನ್ನು ತಪ್ಪಿಸಬಹುದು. ಅಯೋಡಿನ್​ ಕೊರತೆಯ ಪರಿಣಾಮ ಮತ್ತು ಅದನ್ನು ಹೇಗೆ ತಡೆಗಟ್ಟಬಹುದು ಎಂಬುದರ ಕುರಿತು ಸಾರ್ವಜನಿಕ ಜಾಗೃತಿ ಮೂಡಿಸುವಲ್ಲಿ ವಿಶ್ವ ಅಯೋಡಿನ್​ ಕೊರತೆ ದಿನವು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಸಿ.ಸೊಣ್ಣಪ್ಪ ಹೇಳಿದರು.