ಬೆಂಗಳೂರು: ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿದು ಏಳು ಜನರು ಸಾವಿನ ಪ್ರಕರಣ ಸಂಬಂಧ ಬೆಂಗಳೂರು ಜಿಲ್ಲಾಧಿಕಾರಿ ನೇತೃತ್ವದಲ್ಲಿ ತನಿಖಾ ತಂಡವನ್ನು ರಚನೆ ಮಾಡಿ ಲೋಕೋಪಯೋಗಿ ಇಲಾಖೆ ಆದೇಶಿಸಿದೆ.
ಬೆಂಗಳೂರು ನಗರ ಜಿಲ್ಲಾಧಿಕಾರಿ, ಯಲಹಂಕ ತಹಶೀಲ್ದಾರ್ ತನಿಖಾ ತಂಡವನ್ನು ರಚನೆ ಮಾಡಿದೆ. ಇದಕ್ಕೆ ತಾಂತ್ರಿಕ ಸಮಿತಿಯಲ್ಲಿ ಲೋಕೋಪಯೋಗಿ ಇಲಾಖೆ ನಿವೃತ್ತ ಮುಖ್ಯ ಇಂಜಿನಿಯರ್ ಕೆ. ಮೋಹನ್ ಮತ್ತು ನಾಲ್ವರನ್ನು ಅಧೀಕ್ಷಕ ಇಂಜಿನಿಯರ್‌ಗಳನ್ನು ನೇಮಕ ಮಾಡಿ ಸರ್ಕಾರ ಸೂಚಿಸಿದೆ. ಏಳು ದಿನಗಳ ಒಳಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಲೋಕೋಪಯೋಗಿ ಇಲಾಖೆ ಸೂಚನೆ ನೀಡಿದೆ.
ಕಟ್ಟಡ ನಿರ್ಮಿಸಿದ ವರ್ಷ, ಬಳಕೆ ನಿರ್ಮಾಣಕ್ಕೆ ಬಳಸಿರುವ ಸಾಮಗ್ರಿಗಳು, ದುರ್ಘಟನೆಗೆ ಸಂಭವಿಸಲು ಕಾರಣವಾದ ಸಂಭವನೀಯ ಅಂಶಗಳು, ಕಟ್ಟಡ ನಿರ್ವಹಣೆ, ಆವರಣದ ಗೋಡೆಯನ್ನು ದುರ್ಬಲಗೊಳಿಸಲು ಕಾರಣಗಳು ಏನೆಂಬುದರ ಬಗ್ಗೆ ಪರಿಶೀಲನೆ ನಡೆಸಬೇಕು. ತಡೆಗೋಡೆಯ ಜೀವಿತಾವಧಿ ಎಷ್ಟು ಮತ್ತು ತನಿಖಾ ತಂಡ ಕೇಳುವ ಎಲ್ಲ ಮಾಹಿತಿಯನ್ನು ಒದಗಿಸುವಂತೆ ಬೌರಿಂಗ್ ಆಸ್ಪತ್ರೆಯ ಅಧಿಕಾರಿ,ಸಿಬ್ಬಂದಿಗೆ ಸರ್ಕಾರ ಆದೇಶಿಸಿದೆ.