kempegowda ನಾಡಪ್ರಭು ಕೆಂಪೇಗೌಡ ಹಾಗೂ ಡಿ. ಬನುಮಯ್ಯ ಜಯಂತ್ಯುತ್ಸವ ಶಾಸಕ ಟಿ.ಬಿ. ಜಯಚಂದ್ರ, ಮಾಜಿ ಶಾಸಕ ಡಾ.ಸಿ.ಎಂ.ರಾಜೇಶ್​ ಗೌಡ, ಕೌಶಲಾಅಭಿವೃದ್ಧಿ ನಿಗಮ ಮಾಜಿ ಅಧ್ಯ ಮುರುಳೀಧರ್​ ಹಾಲಪ್ಪ ಇದ್ದರು. 
ರಾಜ್ಯ

ಯುವಜನತೆಗೆ ಕೆಂಪೇಗೌಡರನ್ನು ಪರಿಚಯಿಸಿ kempegowda

ಶಿರಾ: ನಾಡಪ್ರಭು ಕೆಂಪೇಗೌಡರ ದೂರದೃಷ್ಟಿ, kempegowda ನಾಯಕತ್ವ ಹಾಗೂ ಆಡಳಿತ ವೈಖರಿಯನ್ನು ಇಂದಿನ ಯುವಜನತೆಗೆ ಪರಿಚಯಿಸುವ ನಿಟ್ಟಿನಲ್ಲಿ ಅವರ ಇತಿಹಾಸವನ್ನು ಎಕೆಜಿಯಿಂದ ಪದವಿ ವರೆಗಿನ ಪಠ್ಯದಲ್ಲಿ ಅಳವಡಿಸಬೇಕು. ಬೆಂಗಳೂರಿನ ರೇಸ್​ ಕೋಸ್​ ಜಾಗದಲ್ಲಿ ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ಕೇಂದ್ರ ಕಚೇರಿ ಸ್ಥಾಪಿಸಬೇಕು ಎಂದು ಸ್ಫಟಿಕಪುರಿ ಮಹಾಸಂಸ್ಥಾನ ಮಠದ ಶ್ರೀ ನಂಜವದೂತ ಸ್ವಾಮೀಜಿ ಸರ್ಕಾರವನ್ನು ಆಗ್ರಹಿಸಿದರು. kempegowda
ನಗರದ ರಂಗನಾಥ ಕಾಲೇಜು ಆವರಣದಲ್ಲಿ ನಾಡಪ್ರಭು ಕೆಂಪೇಗೌಡ ಹಾಗೂ ಡಿ. ಬನುಮಯ್ಯ ಜಯಂತ್ಯುತ್ಸವ ಆಚರಣಾ ಸಮಿತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಮಾತನಾಡಿ, 500 ವರ್ಷಗಳ ಹಿಂದೆಯೇ ಅಂತಾರಾಷ್ಟ್ರೀಯ ಮಾರುಕಟ್ಟೆ ನಿರ್ಮಾಣ ಮಾಡಿ ದೇಶದ ಯಾವ ಮಹಾರಾಜರೂ ಯೋಚಿಸದಂತಹ ಪರಿಕಲ್ಪನೆ ಕೆಂಪೇಗೌಡರದಾಗಿತ್ತು. ಸಮಾಜದ ಕಟ್ಟಕಡೆಯ ಸಮುದಾಯಗಳನ್ನು ಗುರುತಿಸಿ ಅವರ ಕಸುಬು ಮತ್ತು ಉತ್ಪನ್ನಗಳ ಗುಣಮಟ್ಟವನ್ನು ಹೆಚ್ಚಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.
ಅವರು ಕೇವಲ ಬೆಂಗಳೂರನ್ನು ಮಾತ್ರ ಕಟ್ಟಲಿಲ್ಲ, ಅಂದು ಅವರು ಬೆಂಗಳೂರನ್ನು ಕಟ್ಟದಿದ್ದರೆ ಇಂದು 'ಕರ್ನಾಟಕ ಏಕೀಕರಣ' ಎಷ್ಟರ ಮಟ್ಟಿಗೆ ಸಾಧ್ಯವಾಗುತ್ತಿತ್ತೋ ತಿಳಿಯದು. ಅವರ ಸಾಮ್ರಾಜ್ಯ ಶಿರಾ, ಚಿತ್ತೂರಿನಿಂದ ಹಿಡಿದು ಕೇರಳದ ಗಡಿಯವರೆಗೂ ಹಬ್ಬಿತ್ತು. ಹೊಸ ಕನ್ನಡ ನಾಡಿನ ಉದಯಕ್ಕೆ ಕಾರಣರಾದ ಕೆಂಪೇಗೌಡರನ್ನು ಸದಾ ಪ್ರಸ್ತುತವಾಗಿಡಬೇಕಾದ ಅಗತ್ಯವಿದೆ ಎಂದರು.
ಶಿರಾ ಸೀಮೆ ಕೂಡ ಕೆಂಪೇಗೌಡರ ಆಳ್ವಿಕೆಗೆ ಒಳಪಟ್ಟಿತ್ತು. ಹಾಗಾಗಿ, ಸ್ಥಳಿಯ ತಾಲೂಕು ಆಡಳಿತ ಹಾಗೂ ತಹಸೀಲ್ದಾರ್​ ಶಿರಾದ ಪ್ರಮುಖ ರಸ್ತೆಯೊಂದಕ್ಕೆ ಕೆಂಪೇಗೌಡರ ಹೆಸರಿಡಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಮುಖಂಡರಾದ ಹರೀಶ್​ ತಾಲೂಕು ಆಡಳಿತದ ಅಧಿಕಾರಿಗಳಿಗೆ ಇದೇ ವೇಳೆ ಮನವಿ ಮಾಡಿದರು.
ಸರ್ಕಾರದ ಮುಂದಿಟ್ಟ ಬೇಡಿಕೆ: ಕೆಂಪೇಗೌಡರ ಹೆಸರಿನಲ್ಲಿ ಬೃಹತ್​ 'ಕೌಶಲಾಭಿವೃದ್ಧಿ ವಿಶ್ವವಿದ್ಯಾಲಯ' ಸ್ಥಾಪಿಸಬೇಕು ಅಥವಾ ಹಾಲಿ ಇರುವ ಯಾವುದಾದರೂ ದೊಡ್ಡ ವಿಶ್ವವಿದ್ಯಾಲಯಕ್ಕೆ ಅವರ ಹೆಸರಿಡಬೇಕು. ರೇಸ್​ ಕೋರ್ಸ್​ ಜಾಗದಲ್ಲಿ ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ಮುಖ್ಯ ಕಚೇರಿ ಹಾಗೂ ಕೆಂಪೇಗೌಡರ ಬೃಹತ್​ ಪ್ರತಿಮೆ ನಿರ್ಮಿಸಬೇಕು. ಬೆಂಗಳೂರಿನ ಮೆಜೆಸಿಕ್​ ಬಸ್​ ನಿಲ್ದಾಣವನ್ನು ಕೇವಲ ಕೆಂಪೇಗೌಡ ಬಸ್​ ರ್ಟಮಿನಲ್​' ಎಂದೇ ಕರೆಯುವಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.
ತಾಲೂಕು ಜೆಡಿಎಸ್​ ಅಧ್ಯ ಸತ್ಯಪ್ರಕಾಶ್​, ಜೆಡಿಎಸ್​ ಮುಖಂಡ ಆರ್​.ಉಗ್ರೇಶ್​, ಜೀನಿ ಸಂಸ್ಥಾಪಕ ದಿಲೀಪ್​ ಕುಮಾರ್​, ತಹಸೀಲ್ದಾರ್​ ಆನಂದ್​ ಕುಮಾರ್​, ತಾಪಂ ಇಒ ಹರೀಶ್​, ತುಮುಲ್​ ನಿರ್ದೇಶಕ ಎಸ್​. ಆರ್​.ಗೌಡ, ಶಿರಾ ಕುಂಚಿಗ ಸಂದ ಅಧ್ಯ ಮುಕುಂದಪ್ಪ, ಗ್ಯಾರಂಟಿ ಸಮಿತಿ ಸದಸ್ಯ ಪ್ರಧಾನ್​ ನಾಗರಾಜ್​, ಜಿಪಂ ಮಾಜಿ ಸದಸ್ಯ ರಾಮಕೃಷ್ಣ, ಲಕ್ಕನಹಳ್ಳಿ ಡಿ.ವೈಎಸ್​ಪಿ ರವಿ, ಡಾ.ರಾಮಕೃಷ್ಣ ಇತರರು ಇದ್ದರು.