Introduce Kannada literature to children 
ರಾಜ್ಯ

ಮಕ್ಕಳಿಗೆ ಕನ್ನಡ ಸಾಹಿತ್ಯ ಪರಿಚಯಿಸಿ

ತುರುವೇಕೆರೆ: ಕನ್ನಡ ಭಾಷಯೊಳಗೆ ಸಾಂಸತಿಕ ಮತ್ತು ಮಾನವೀಯ ಮೌಲ್ಯಗಳು ಅಡಕವಾಗಿವೆ ಎಂದು ಸರ್ಕಾರ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಎಸ್​.ಎಲ್​.ವಿಜಯ ಕುಮಾರ್​ ಅಭಿಪ್ರಾಯಪಟ್ಟರು.
ಪಟ್ಟಣದ ಜೆ.ಪಿ.ಶಾಲಾ ಆವಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ತಾಲೂಕು ಪ್ರೌಢಶಾಲಾ ಕನ್ನಡ ಭಾಷಾ ಬೋಧಕರ ಸಂಘಯಿಂದ ಶನಿವಾರ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ, ಪ್ರತಿಭಾ ಪುರಸ್ಕಾರ, ಕನ್ನಡ ಭಾಷಾ ಶಿಕ್ಷಕರತ್ನ ಪ್ರಶಸ್ತಿ ಪ್ರದಾನ ಹಾಗೂ ಶೈಕ್ಷಣಿಕ ಕಾರ್ಯಾಗಾರ ಸಮಾರಂಭದಲ್ಲಿ ಮಾತನಾಡಿದರು.
ಕನ್ನಡ ಸಾಹಿತ್ಯದೊಳಗೆ ಸಾಕಷ್ಟು ಜನಪರ ಹೋರಾಟಗಳು, ಒತ್ತಾಸೆಗಳ ಕೂಗು ಮಾರ್ಧನಿಸಿದೆ.  ಕನ್ನಡ ಕೇವಲ ಭಾಷೆಯಾಗಿರದೆ ಕನ್ನಡಿಗರ ಜೀವನ ಕ್ರಮವಾಗಿದೆ. ಕನ್ನಡ ಸಾಹಿತ್ಯದಲ್ಲಿ ವಚನ ಚಳವಳಿ, ಭಕ್ತಿಪಂಥ, ಕೀರ್ತನಕಾರರು ಸಮಾಜ ತಿದ್ದುವ ಬಹುದೊಡ್ಡ ಕೆಲಸ ಮಾಡಿದ್ದಾರೆ. ಪ್ರತಿಯೊಬ್ಬರು ಕನ್ನಡಕ್ಕಾಗಿ ದುಡಿಯುವ ಮೂಲಕ  ಈ ಮಣ್ಣಿನ ಋಣ ತೀರಿಸಬೇಕು ಎಂದರು.
ಬಿಇಒ ಎನ್​.ಸೋಮಶೇಖರ್​ ಮಾತನಾಡಿ, ಶಿಕ್ಷಕರು ಮಕ್ಕಳಿಗೆ ಕನ್ನಡ ಸಾಹಿತ್ಯ ಚರಿತ್ರೆ ಹಾಗೂ ಭಾಷಾ ಕೌಶಲಗಳ ಬಗ್ಗೆ ಅರ್ಥಪೂರ್ಣವಾಗಿ ಕಲಿಸಬೇಕು. ಎಲ್ಲರೂ ಕನ್ನಡ ಮಾತನಾಡಿ, ಹೃದಯದ ಭಾಷೆಯನ್ನು ಗಟ್ಟಿಗೊಳಿಸಿ. ತಾಲೂಕಿನ ಎಲ್ಲ ಶಾಲೆಗಳ ಶಿಕ್ಷಕರು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ತರುವಂತೆ ಮಕ್ಕಳಿಗೆ ಅಭ್ಯಾಸ ಮಾಡಿಸಬೇಕು ಎಂದರು.
ಜೆ.ಪಿ.ಆಂಗ್ಲ ಪ್ರೌಢ ಶಾಲೆಯ  ಕನ್ನಡ ಶಿಕ್ಷಕ ಎಚ್​.ಬಿ.ಪ್ರಕಾಶ್​ ಅವರಿಗೆ ಸಂಘದಿಂದ ತಾಲೂಕು ಕನ್ನಡ ಭಾಷಾ ಶಿಕ್ಷಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾತು. ಸಂಘದ ತಾಲೂಕು ಅಧ್ಯಕ್ಷ ಎಚ್​.ಎಂ.ರಂಗಸ್ವಾಮಿ, ತಾಲೂಕು ಕಸಾಪ ಅಧ್ಯಕ್ಷ ಡಿ.ಪಿ.ರಾಜು, ಗೆಳೆಯರ ಬಳಗದ ಅಧ್ಯಕ್ಷ ಟಿ.ಎಸ್​.ಪ್ರಕಾಶ್​ ಗುಪ್ತಾ, ಸಂಘದ ಉಪಾಧ್ಯಕ್ಷ ಎಸ್​.ಬಿ.ಕುಮಾರ್​, ಗೌರವ ಸಲಹೆಗಾರ ಎಲ್​.ಮಂಜೇಗೌಡ, ಕಾರ್ಯದರ್ಶಿ ಕೆ.ಟಿ.ಸಂಪತ್ತು, ಕೋಶಾಧ್ಯಕ್ಷ ಪ್ರಭು, ಸಂಘದ ಕಾರ್ಯದರ್ಶಿ ಎ.ಎಸ್​.ನಾಗರಾಜು, ಸೋಮಶೇಖರ್​, ಜಿಜೆಸಿ ಉಪಪ್ರಾಂಶುಪಾಲ ವೆಂಕಟೇಶ್​, ಮುಖ್ಯಶಿಕ್ಷಕ ಎಚ್​.ಆರ್​.ತುಕಾರಾಂ ಇತರರು ಇದ್ದರು.