ಅಂತಾರಾಜ್ಯ ಕಳ್ಳನನ್ನು ಬಂಧಿಸಿರುವ ಟಿಳಕವಾಡಿ ಠಾಣೆ ಪೊಲೀಸರು  
ರಾಜ್ಯ

ಅಂತಾರಾಜ್ಯ ಕಳ್ಳನ ಬಂಧನ

ಎಂ.ಎಸ್​.ಹಿರೇಮಠ ಬೆಳಗಾವಿ
ಬೆಳಗಾವಿ: ನಗರದ ವಿವಿಧೆಡೆ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಅಂತಾರಾಜ್ಯ ಕಳ್ಳನನ್ನು ಬಂಧಿಸಿರುವ ಟಿಳಕವಾಡಿ ಠಾಣೆ ಪೊಲೀಸರು ಒಟ್ಟು 13.22 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕರಗಿಸಿದ್ದ ಗಟ್ಟಿ ಬಂಗಾರ ವಶಪಡಿಸಿಕೊಂಡಿದ್ದಾರೆ. ಮೂಲತ@ ಹೈದರಾಬಾದ್​ ಜಿಲ್ಲೆಯ ನಾಮಪಲ್ಲಿ, ಗೋವಾ ನಿವಾಸಿ ಜಮಶೇದಖಾನ್​ ಖಲೀಲ್​ ಖಾನ್​ (41) ಬಂಧಿತ. ಈತ ಶಾಂತಿನಗರದ ಎರಡು ಮನೆ, ಉದ್ಯಮಬಾಗ ಠಾಣೆ ವ್ಯಾಪ್ತಿಯ ಚಿದಂಬರ ನಗರದ ಒಂದು ಮನೆಯಲ್ಲಿ ಕಳ್ಳತನ ಮಾಡಿದ್ದ. ಈತನಿಂದ ಒಟ್ಟು 115 ಗ್ರಾಂ ಚಿನ್ನ, ಒಂದು ಸ್ಕೂಟರ್​, ಎರಡು ಮೊಬೈಲ್​ ಸಹಿತ ಒಟ್ಟು 13.50 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ.