ರಾಜ್ಯ

ಅಂತಾರಾಷ್ಟ್ರೀಯ ವಸ್ತುಗಳ ಮೇಳ ನಾಳೆಯಿಂದ

ಪ್ರಮುಖ ಮುಖ್ಯಾಂಶಗಳು

  • ಕಲಬುರಗಿ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಆಯೋಜನೆ
ಕಲಬುರಗಿ: ಒಂದೇ ಸೂರಿನಡಿ ವೈವಿಧ್ಯಮಯ ಅಂತಾರಾಷ್ಟ್ರೀಯ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳ ಇದೇ ಮೊದಲ ಸಲ ನಗರದ ಸಾರ್ವಜನಿಕ ಉದ್ಯಾನದಲ್ಲಿರುವ ವೀರಶೈವ ಕಲ್ಯಾಣ ಮಂಟಪದಲ್ಲಿ ಗುರುವಾರ ಶುರುವಾಗಲಿದ್ದು, ಐದು ದಿನ ಬೆಳಗ್ಗೆ 11ರಿಂದ ರಾತ್ರಿ 9ರವರೆಗೆ ಇರಲಿದೆ.
ಶಾಪಿಂಗ್​ ಪ್ರಿಯರಿಗೆ ಒಂದೇ ಸ್ಥಳದಲ್ಲಿ ದೇಶ-ವಿದೇಶದ ವೈವಿಧ್ಯಮಯ ವಸ್ತುಗಳ ಅದ್ಭುತ ಸಂಗ್ರಹವಿದ್ದು, ಸೆರಾಮಿಕ್​ ವಸ್ತು, ಪಂಜಾಬಿ ಸ್ಯಾಂಡಲ್ಸ್​, ಆಕರ್ಷಕ ಸೀರೆ, ಬ್ರಾಂಡೆಡ್​ ಪರ್ಸ್​, ಕುರ್ತಾ, ಸೋಫಾ ಇತರ ಫರ್ನಿಚರ್​, ಶೂ ರ್ಯಾಕ್​, ಜೈಪುರ ಬೆಡ್​ಶೀಟ್​, ಜ್ಯುವೆಲ್ಲರಿ ಅಲ್ಲದೆ ಬಾಲಿ ಸ್ಪೆಷಲ್​ ಐಟಂ, ಮಸಾಜ್​ ಚೇರ್​, ವಾಕರ್​ನಂಥ ಹಲವಾರು ಉತ್ಪನ್ನಗಳು ಇಲ್ಲಿ ಸಿಗಲಿವೆ ಎಂದು ಆಯೋಜಕ ರವಿಕುಮಾರ ತಿಳಿಸಿದ್ದಾರೆ.
ಮೇಳದ ಮತ್ತೊಂದು ವಿಶೇಷ ಆಕರ್ಷಣೆ ಅಂದರೆ ದುಬೈ ಪ್ರಸಿದ್ಧ ಬಾಕ್ಲಾವ್​ ಸ್ವೀಟ್​ ಸಿಗಲಿದೆ. ಹಳೆಯ ಸೋಫಾ ಎಕ್ಸ್​ಚೇಂಜ್​ ಮಾಡಿ ಹೊಸ ಸೋಫಾ ಖರೀದಿಗೆ ಶೇ.70ರವರೆಗೆ ಡಿಸ್ಕೌಂಟ್​ ಸಹ ಸಿಗಲಿದೆ. ಮಾಹಿತಿಗೆ ಮೊ.97422 44688ಗೆ ಸಂಪರ್ಕಿಸಬಹುದು. ಇಂತಹ ಅಪರೂಪದ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಲೆ ಪ್ರಥಮ ಬಾರಿಗೆ ಕಲಬುರಗಿಯಲ್ಲಿ ಜರುಗುತ್ತಿದ್ದು, ಸಾರ್ವಜನಿಕರು ಲಾಭ ಪಡೆಯುವಂತೆ ಕೋರಿದ್ದಾರೆ.