ಕಲಬುರಗಿಯಲ್ಲಿ ಇಂದಿನಿಂದ ಅಂತಾರಾಷ್ಟ್ರೀಯ ವಸ್ತುಗಳ ಮೇಳ! International Goods Exhibition 
ರಾಜ್ಯ

ಕಲಬುರಗಿಯಲ್ಲಿ ಇಂದಿನಿಂದ ಅಂತಾರಾಷ್ಟ್ರೀಯ ವಸ್ತುಗಳ ಮೇಳ! International Goods Exhibition

ಕಲಬುರಗಿ: ಒಂದೇ ಸೂರಿನಡಿ ವೈವಿಧ್ಯಮಯ ಅಂತಾರಾಷ್ಟ್ರೀಯ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳ ( International Goods Exhibition ) ಇದೇ ಮೊದಲ ಸಲ ನಗರದ ಸಾರ್ವಜನಿಕ ಉದ್ಯಾನದಲ್ಲಿರುವ ವೀರಶೈವ ಕಲ್ಯಾಣ ಮಂಟಪದಲ್ಲಿ ಇಂದಿನಿಂದ (ಆಗಸ್ಟ್​ 27) ಶುರುವಾಗಿದ್ದು, ದಿನ ಬೆಳಗ್ಗೆ 11ರಿಂದ ರಾತ್ರಿ 9ರವರೆಗೆ ಇರಲಿದೆ.
ಶಾಪಿಂಗ್ ಪ್ರಿಯರಿಗೆ ಒಂದೇ ಸ್ಥಳದಲ್ಲಿ ದೇಶ-ವಿದೇಶದ ವೈವಿಧ್ಯಮಯ ವಸ್ತುಗಳ ಅದ್ಭುತ ಸಂಗ್ರಹವಿದ್ದು, ಸೆರಾಮಿಕ್ ವಸ್ತು, ಪಂಜಾಬಿ ಸ್ಯಾಂಡಲ್ಸ್, ಆಕರ್ಷಕ ಸೀರೆ, ಬ್ರ್ಯಾಂಡೆಡ್ ಪರ್ಸ್, ಕುರ್ತಾ, ಸೋಫಾ ಇತರ ಫರ್ನಿಚರ್, ಶೂ ರ್ಯಾಕ್, ಜೈಪುರ ಬೆಡ್‌ಶೀಟ್, ಜ್ಯುವೆಲ್ಲರಿ ಅಲ್ಲದೆ ಬಾಲಿ ಸ್ಪೆಷಲ್ ಐಟಂ, ಮಸಾಜ್ ಚೇರ್, ವಾಕರ್ ನಂಥ ಹಲವಾರು ಉತ್ಪನ್ನಗಳು ಇಲ್ಲಿ ಸಿಗಲಿವೆ ಎಂದು ಪ್ರಾಯೋಜಕ ರವಿಕುಮಾರ್ ತಿಳಿಸಿದ್ದಾರೆ.
ಮೇಳದ ಮತ್ತೊಂದು ವಿಶೇಷ ಆಕರ್ಷಣೆ ಅಂದರೆ ದುಬೈ ಪ್ರಸಿದ್ಧ ಬಾಕ್ಲಾವ್ ಸ್ವೀಟ್ ಸಿಗಲಿದೆ. ಹಳೆಯ ಸೋಫಾ ಎಕ್ಸ್ ಚೇಂಜ್ ಮಾಡಿ ಹೊಸ ಸೋಫಾ ಖರೀದಿಗೆ ಶೇ.70ರವರೆಗೆ ಡಿಸ್ಕೌಂಟ್ ಸಹ ಸಿಗಲಿದೆ.
ಮಾಹಿತಿಗೆ ಮೊ.97422 44688ಗೆ ಸಂಪರ್ಕಿಸಬಹುದು. ಇಂತಹ ಅಪರೂಪದ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳ ಪ್ರಥಮ ಬಾರಿಗೆ ಕಲಬುರಗಿಯಲ್ಲಿ ಜರುಗುತಿದ್ದು, ಸಾರ್ವಜನಿಕರು ಲಾಭ ಪಡೆಯುವಂತೆ ಕೋರಿದ್ದಾರೆ.